ಚಿಕ್ಕಮಗಳೂರು | ರಾಷ್ಟ್ರೀಯ ಹೆದ್ದಾರಿ: ಮರಗಳ ಕಟಾವು ತನಿಖೆಗೆ ಒತ್ತಾಯ

Date:

ಮೂಡಿಗೆರೆ ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಕೆಳಗೂರು ಸಮೀಪದ ಸಾಲು ಮರ ತಿಮ್ಮಕ್ಕ ಉದ್ಯಾನವನ ಸಮೀಪ ಮತ್ತೆ ಮರಗಳ ಕಡಿದು ಹಾಕಿರುವುದು ಸಾಲುಮರದ ತಿಮ್ಮನಿಗೂ ಬೇಸರ ತರಿಸಿದೆ.  ಪರಿಸರ ಪ್ರೇಮಿಗಳು ಕೇಂದ್ರ ಮತ್ತು ರಾಜ್ಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ದೂರು ನೀಡಿದ್ದಾರೆ.

- Advertisement -
Screenshot 2026 09 29 10 33 50 58 7352322957d4404136654ef4adb64504

ಈಗಾಗಲೇ ಮೂಡಿಗೆರೆ ಚಿಕ್ಕಮಗಳೂರು N H 173 ರಸ್ತೆ ಅಗಲೀಕರಣ,ರಸ್ತೆ ನಿರ್ಮಾಣಕ್ಕೆ 2,326 ಮರಗಳನ್ನು ತೆರವುಗೊಳಿಸಲು 11-9-2026ರಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.  ವೃಕ್ಷ ಸಂರಕ್ಷಣಾ ಕಾಯ್ದೆ 1976ರ ಅಡಿಯಲ್ಲಿ ಮೂಡಿಗೆರೆ ಮತ್ತು ಚಿಕ್ಕಮಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕೂಡ ವೃಕ್ಷ ಅಧಿಕಾರಿಗಳು ಆಗಿರುತ್ತಾರೆ. ಆದರೆ ಇಲ್ಲಿ ಕೇವಲ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್ಲಾ ಮರಗಳ ತೆರವಿಗೆ ಆದೇಶ ನೀಡಿರುವುದು ಮತ್ತು ನಿಯಮಗಳನ್ನು ಪಾಲಿಸದೆ ಕಾಯಿದೆ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ರಸ್ತೆ ಯೋಜನೆಗೆ ಫಾರೆಸ್ಟ್ ಕ್ಲಿಯರೆನ್ಸ್ ಪಡೆದಿಲ್ಲ: ಅರಣ್ಯ ತೆರವು (Forest Clearance) ಪಡೆಯುವ ಸಂದರ್ಭದಲ್ಲಿ ನಡೆದಿರುವ ಉಲ್ಲಂಘನೆಗಳು

1. ಫಾರೆಸ್ಟ್ ಕ್ಲಾರೆನ್ಸ್ ಪ್ರಸ್ತಾವನೆಯಿಂದ ಅರಣ್ಯ ಪ್ರದೇಶಗಳನ್ನು  ಹೊರತುಪಡಿಸಿರುವುದು,ಯೋಜನಾ ಮಾರ್ಗದ ಹಲವಾರು ಭಾಗಗಳಲ್ಲಿ ಗಮನಾರ್ಹವಾದ ಸೂಕ್ಷ್ಮ ಅರಣ್ಯ ಚಹರೆ ಇರುವ ಪ್ರದೇಶಗಳಿದ್ದು, ಇದರಲ್ಲಿ ಮತ್ತವರ ಮೀಸಲು  ಅರಣ್ಯ ಸೇರಿದಂತೆ ಇತರೆ ಅರಣ್ಯ ಪ್ರದೇಶಗಳಿಗೆ ಯಾವುದೇ ಅರಣ್ಯ ಕ್ಲಿಯರೆನ್ಸ್ (FC) ಪಡೆದುಕೊಂಡಿಲ್ಲ. ಅರಣ್ಯ ಭೂಮಿಯನ್ನು ಕಡಿಮೆ ತೋರಿಸಿಕೊಂಡು ಹೆದ್ದಾರಿ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಕೂಡ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿದೆ.

2. Forest Clearance ಪ್ರಸ್ತಾವನೆಯಲ್ಲಿ ಕೇವಲ 0.9768 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹಾಗೂ ಸೇರಿಸಿರುವುದು, ಪ್ರಸ್ತಾವಿತ ರಸ್ತೆಯ ಅಗಲವನ್ನು ಸುಮಾರು 5.5 ಮೀಟರ್‌ನಿಂದ 10 ಮೀಟರ್‌ಗೆ ಹೆಚ್ಚಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಡು ಹೆಚ್ಚುವರಿಯಾಗಿ ನಾಶ ಆಗುತ್ತದೆ.ಇದಕ್ಕೆ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಆದ್ದರಿಂದ, ಸಂಪೂರ್ಣ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿ ಈ ರಸ್ತೆಗೆ ಎಷ್ಟು ಬೇಕು ಎಂದು ಅರಣ್ಯ ಇಲಾಖೆ ಬಹಿರಂಗಪಡಿಸಬೇಕು ಮತ್ತು ರಸ್ತೆ ಅಗಲೀಕರಣಕ್ಕಾಗಿ ಅಗತ್ಯವಿರುವ ಪ್ರತಿಯೊಂದು  ಕಾನೂನುಬದ್ಧ ಸ್ಥಿತಿಯನ್ನು ಗುರುತಿಸಬೇಕು.

3. ಆನೆ ಕಾರಿಡಾರ್: ಆನೆ ಕಾರಿಡಾರ್ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಸ್ತಾಪಿಸಿದ್ದು ಇಲ್ಲಿ ಆನೆಗಳ ತಿರುಗಾಟ ರಸ್ತೆ ದಾಟುವು ಬಗ್ಗೆ ವರದಿ ನೀಡಿದ್ದು, ಅಧಿಕಾರಿಗಳ ಪ್ರಕಾರ ಈ ಭಾಗದಲ್ಲಿ ವನ್ಯಜೀವಿಗಳು , ಕಾಡು ಇದೆ. ಆದರೆ ಇದನ್ನು ಪರಿಗಣಿಸದೆ ಅರಣ್ಯ ಕ್ಲಾರೆನ್ಸ್   ಪಡೆದುಕೊಂಡಿಲ್ಲ. ವನ್ಯಜೀವಿ ತಿರುಗಾಟ  ಇರುವುದರಿಂದ ಸಂಪೂರ್ಣ ಯೋಜನಾ ಮಾರ್ಗದ ಅರಣ್ಯ ಕುರಿತು ಸಮಗ್ರ ಪರಿಶೀಲನೆ ನಡೆಸುವ ಅಗತ್ಯ ಇನ್ನಷ್ಟು ಬೇಕಾಗುತ್ತದೆ.

Stage-II Forest Clearanceಗೂ ಮುನ್ನ ಮರ ಕಡಿತ ಪ್ರಾರಂಭಿಸಿರುವುದು ಮತ್ತು Fait Accompli ಸೃಷ್ಟಿಸುವುದು ಇನ್ನೊಂದು ಗಂಭೀರ ವಿಚಾರವೆಂದರೆ, ಸಂಬಂಧಿತ Forest Landಗೆ Stage-II Forest Clearance ಪಡೆಯುವ ಮೊದಲೇ ಯೋಜನಾ ಪ್ರದೇಶದಲ್ಲಿ ಮರ ಕಡಿತ ಪ್ರಾರಂಭವಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಪಾರಂಪರಿಕ ಮರಗಳನ್ನು  ಕಡಿಯಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು W.P. (C) No. 202/1995 ಆದೇಶ ಉಲ್ಲಂಘನೆ ಆಗಿದೆ.

ಇದನ್ನೂ ಓದಿದ್ದೀರಾ?ಹಾಸನ | ‘ಪ್ರಜಾಸೇವಾ’ ಇಬ್ಬರ ಅಧಿಕಾರಿಗಳು ಅಮಾನತು; ಡಿಸಿ ಆದೇಶ 

ಕೇಂದ್ರ ಸರ್ಕಾರದ Green Highways Policy, 2015ರ ಕಡ್ಡಾಯ ಅನುಷ್ಠಾನ ಮಾಡಬೇಕು ಮತ್ತು ಯೋಜನೆ ವೆಚ್ಚದಲ್ಲಿ 1% ಹಣವನ್ನು ಕಟ್ಟಬೇಕು.ಸರಿಯಾಗಿ ವೆಚ್ಚವನ್ನು ಕಟ್ಟಿಸಿಕೊಳ್ಳದಿರುವುದು ಮೇಲ್ನೋಟಕ್ಕೆ ಕಾಣಬಹುದು. ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮರಗಳನ್ನು ಕಾಡನ್ನು ಉಳಿಸಬೇಕು ಎಂದು ಸಾರ್ವಜನಿಕರು ಹಾಗೂ ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಭೀಕರ ಬರಕ್ಕೆ ಶಾಶ್ವತ ಪರಿಹಾರ ನೀಡಿ: ರೈತ ಸಂಘದ ಆಗ್ರಹ

ರಾಜ್ಯದಲ್ಲಿ ಉಂಟಾಗಿರುವ ಭೀಕರ ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ...

ರಾಯಚೂರು | ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಯುವಕ ಸಾವು

ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ...

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...