ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ದೋಣಗೂಡಿಗೆ ಗ್ರಾಮದಲ್ಲಿ ರಸ್ತೆ ಮೂಲಸೌಕರ್ಯ ಬೇಕೆಂದು ಜನರು ಪರದಾಡುವ ಪರಿಸ್ಥಿತಿಯಲ್ಲಿ ಊರಿನ ರಸ್ತೆ ಅಭಿವೃದ್ಧಿಯಾಗಬಾರದು ಎಂದು ಇಬ್ಬರು ವ್ಯಕ್ತಿಗಳು ಗ್ರಾಮಕ್ಕೆ ರಸ್ತೆ ನಿರ್ಮಾಣವಾಗದಂತೆ ರಮೇಶ್ ಗೌಡ ಎಂಬಾತ ನಿರಂತರವಾಗಿ ಅಡ್ಡಿಪಡಿಸುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಕಂಟಕನಾಗಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು | ಶಾಲಾ ಮಕ್ಕಳಿದ್ದ ಓಮಿನಿ ಕಾರು ಪಲ್ಟಿ; ತಪ್ಪಿದ ಅನಾಹುತ; ಪೋಷಕರ ಆಕ್ರೋಶ
ಇಷ್ಟೇ ಅಲ್ಲದೆ, ಕಷ್ಟಪಟ್ಟು ಹೋರಾಟ ನಡೆಸಿ ರಸ್ತೆ ಕಾಮಗಾರಿಯನ್ನು ಮಂಜೂರು ಮಾಡಿಸಿದ್ದ ಗ್ರಾಮದ ರಾಜೇಶ್ ಎಂಬುವವರ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಕೂಡ ಈತ ಯತ್ನಿಸಿದ್ದಾನೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ರಮೇಶ್ ಗೌಡನಿಗೆ ಆತನ ಪುತ್ರ ಪ್ರತೀಕ್ ಕೂಡ ಸಾಥ್ ನೀಡುತ್ತಿದ್ದು, ಇವರಿಬ್ಬರ ಕಿರುಕುಳದಿಂದ ಇಡೀ ಗ್ರಾಮದ ನೆಮ್ಮದಿಯೇ ಹಾಳಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.





