ಚಿತ್ರದುರ್ಗ | ಬಸವ ಸಂಸ್ಕೃತಿ ಅಭಿಯಾನ: ಕನೇರಿ ಶ್ರೀಗಳ ಹೇಳಿಕೆಗೆ ಪಂಡಿತಾರಾಧ್ಯ ಶ್ರೀ ಆಕ್ಷೇಪ

Date:

“ಒಬ್ಬ ಗುರುವಿನ ಲಕ್ಷಣ ಕೇವಲ ಕಾವಿ, ಮಠ, ಹೊಗಳುಭಟ್ಟರು ಅಲ್ಲ, ಅರಿವು, ಆಚಾರ, ಅನುಭಾವ. ಆಕಾಶಕ್ಕೆ ಉಗುಳಿದರೆ ಏನಾಗುತ್ತದೆ ಎನ್ನುವ ಪ್ರಜ್ಞೆ ಇಲ್ಲದಿದ್ದರೆ ಏನಾಗುತ್ತದೆ ಎಂದು ಅರಿಯಬೇಕು. ‘ಬಸವ ಸಂಸ್ಕೃತಿ ಅಭಿಯಾನ‘ದ ಯಶಸ್ಸು ಕೆಲವು ಬಸವ ವಿರೋಧಿಗಳ ನಿದ್ರೆ ಕೆಡಿಸಿರುವುದು, ಉಂಡ ಅನ್ನ ಅರಗದೆ ಹೊಟ್ಟೆ ಬೇನೆಗೆ ಕಾರಣವಾಗಿರುವುದು ಸತ್ಯವಾದರೂ ಅವರಾರೂ ಕನೇರಿ ಕಾಡಸಿದ್ದೇಶ್ವರ ಶ್ರೀಗಳಂತೆ ವಿಷವನ್ನು ಕಕ್ಕಿಲ್ಲ” ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.‌

- Advertisement -

ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಗಳು “ಒಬ್ಬ ವ್ಯಕ್ತಿಗೆ ಸಾರ್ವಜನಿಕ ಮನ್ನಣೆ, ಮಠಾಧಿಕಾರ, ಅದಕ್ಕೆ ತಕ್ಕ ಸಂಪತ್ತು ಬಂದಾಗ ಅವರು ಬಸವಣ್ಣನವರಂತೆ ‘ಮುಗಿದ ಕೈ, ಬಾಗಿದ ತಲೆಯ‘ ಭೃತ್ಯಾಚಾರಿಗಳಾಗಿರಬೇಕಿತ್ತು. ಬದಲಾಗಿ ಅಹಂಕಾರ, ಅವಿವೇಕದ ಮೊಟ್ಟೆಯಂತಾದರೆ ಹೇಗೆ? ಅವರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲ ಸ್ವಾಮಿಗಳ ಬಗ್ಗೆ ಆಡಿರುವ ಅಸಂವಿಧಾನಾತ್ಮಕ ಕೀಳು ಪದಗಳು ಅವರ ನೈಜ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಇವರು ಯಾವುದರಿಂದ ಹೊಡೆಯಬೇಕೆಂದು ಅಪ್ಪಣೆ ಕೊಡಿಸಿದ್ದಾರೋ ಅವುಗಳ ಪ್ರಯೋಗ ಅವರ ಮೇಲೆಯೇ ಆದರೆ ಗತಿ ಏನು ಎನ್ನುವ ಆತಂಕ ನಮಗಿದೆ” ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

“ನಮ್ಮ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾದವರಲ್ಲಿ ಕನೇರಿ ಶ್ರೀಗಳೂ ಒಬ್ಬರು. ಆದರೆ ಇಂದು ಅವರ ಆಶೀರ್ವಚನದ ನುಡಿಮುತ್ತುಗಳ ವಾಟ್ಸಪ್ ವೀಡಿಯೋದ ಕೀಳು ಭಾಷೆಯ ನುಡಿಗಳನ್ನು ಕೇಳಿದಾಗ ನಮ್ಮ ಗೌರವಕ್ಕೆ ಪಾತ್ರರಾದವರು ಇವರೇನ ಎನ್ನುವ ಸಂಶಯ, ಅನುಮಾನ ಬಂದಿದೆ” ಎಂದು ತಿಳಿಸಿದ್ದಾರೆ.

“ಈಗ ಅವರಿಗೆ ಮಠಾಧೀಶರ ಭಕ್ತರು ಮತ್ತು ಸಾರ್ವಜನಿಕರೇ ಬುದ್ಧಿ ಕಲಿಸುವ ಕಾಲ ಬಂದಿದೆ. ಅವರು ಕಾನೂನು ಕೈಗೆ ತೆಗೆದುಕೊಂಡು ಬಂಡೇಳುವ ಮುನ್ನ ಸರ್ಕಾರ ಮತ್ತು ಆರಕ್ಷಕ ಇಲಾಖೆಯವರು ತಕ್ಷಣ ಆ ಸ್ವಾಮಿಗಳ ಮೇಲೆ ಉಗ್ರಕ್ರಮ ಜರುಗಿಸಬೇಕು. ಸ್ವಾಮಿಗಳು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಸಾರ್ವಜನಿಕವಾಗಿಯೇ ಮಠಾಧೀಶರ ಕ್ಷಮೆ ಕೇಳುವ ವಿವೇಕ ತೋರಬೇಕು. ಅವರ ಬಾಯಿಂದ ಬಂದಿರುವ ಬಿರುನುಡಿಗಳು ಅವರ ಸ್ವಾಮಿತನವನ್ನೇ ಹರಾಜಿಗಿಟ್ಟಿವೆ. ಅವರೊಬ್ಬ ಬಸವ ಪರಂಪರೆಯ ಸ್ವಾಮಿಗಳಾಗಿ ಬಸವ ತತ್ವಕ್ಕೆ ದ್ರೋಹ ಬಗೆದು ತಮ್ಮ ಕರಾಳ ಮುಖದ ದರ್ಶನ ಮಾಡಿಸಿದ್ದಾರೆ. ಅವರ ಸ್ವಾಮಿತನದ ಹಿಂದಿರುವ ಮುಖವಾಡವನ್ನು ಅವರೇ ಅನಾವರಣ ಮಾಡಿಕೊಂಡಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೋಮಾಳ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ, ಸ್ಥಳೀಯ ಆಡಳಿತದ ದೌರ್ಜನ್ಯ ಆರೋಪ

“ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಆತ್ಮಾವಲೋಕನ ಮಾಡಿಕೊಂಡು ಬಸವಣ್ಣನವರಂತೆ ‘ಎನ್ನತಪ್ಪು ಅನಂತಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ’ ಎಂದುಕೊಂಡು ತಪ್ಪನ್ನು ತಿದ್ದಿಕೊಳ್ಳುವ ಸದ್ಬುದ್ಧಿಯನ್ನು ಬಸವಾದಿ ಶರಣರು ಕನೇರಿ ಸ್ವಾಮಿಗಳಿಗೆ ಕರುಣಿಸಲಿ ಎಂದು ಆಶಿಸುತ್ತೇವೆ” ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿ ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಕೊಂದವರು ಯಾರು?’ – ಧರ್ಮಸ್ಥಳದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅ.2ರಂದು ಬೃಹತ್ ವಿಚಾರ ಸಂಕಿರಣ

ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಹಲವಾರು ದಶಕಗಳಿಂದ ನಡೆದಿದೆ...

ವಿಜಯಪುರ | ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ: ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನ

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ 14 ಫಲಾನುಭವಿ ಆಧಾರಿತ...

ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್ 

SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ...