ಭಾರತ ಸೇವಾದಳ ವತಿಯಿಂದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಮುಂದಿನ ನೆಹರೂ ಪ್ರತಿಮೆ ಬಳಿ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, “ಪಂಡಿತ್ ನೆಹರೂರವರು ಆಧುನಿಕ ಭಾರತದ ನಿರ್ಮಾತೃ. ಸುಮಾರು 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಪಂಚ ವಾರ್ಷಿಕ ಯೋಜನೆಯನ್ನು ಹುಟ್ಟು ಹಾಕಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಿದ್ದಾರೆ. ಹಲವಾರು ವಿಶ್ವವಿದ್ಯಾನಿಲಯಗಳು, ಐಐಟಿ, ಬೃಹತ್ ಕೈಗಾರಿಕಾ ಉಧ್ಯಮಗಳು ದೇಶದೆಲ್ಲೆಡೆ ಪ್ರಾರಂಭವಾದವು. ಪ್ರಪಂಚದ ಇತರ ಬಲಿಷ್ಠ ರಾಷ್ಟ್ರಗಳ ಜೊತೆಗೆ ಭಾರತವನ್ನು ನಿಲ್ಲುವಂತೆ ಮಾಡಿದ್ದರು” ಎಂದರು.

ಸಭಾ ಕಾರ್ಯಕ್ರಮಕ್ಕೂ ನೆಹರೂರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಸೇವಾದಳದ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಪ್ರೇಮ್ ಚಂದ್, ಉದಯ ಕುಂದರ್, ಸುನಿಲ್ ದೇವಾಡಿಗ, ರವಿ, ಸಂಜೀವ, ರಾಕೇಶ್, ಶಾಲಾ ಶಿಕ್ಷಕಿಯರಾದ ಸುಮಾ, ಕಮಲಾ, ಮುಖ್ಯ ಸಂಘಟಕ ಮಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು.




