ದಾವಣಗೆರೆ | ಅನುಭವ ಮಂಟಪದ ಶರಣರ ಒಟ್ಟು ಸಾರಾಂಶವೇ ಬಸವಣ್ಣ; ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಸಾಹಿತಿ ರಂಜಾನ್ ದರ್ಗಾ

Date:

“ಬಸವಣ್ಣನಲ್ಲಿನ ತತ್ವಜ್ಞಾನ ಗುರುತಿಸಿದವರು ಅಲ್ಲಮಪ್ರಭುಗಳು. ಕಲ್ಯಾಣದ ಮಹಾಮನೆ ಅಥವಾ ಅನುಭವ ಮಂಟಪದಲ್ಲಿದ್ದ ಲಕ್ಷದ ತೊಂಬತ್ತಾರು ಸಾವಿರ ಅಮರಗಣಂಗಳ ಅಂದರೆ ಶರಣರ ಒಟ್ಟು ಸಾರಾಂಶವೇ ಬಸವಣ್ಣ” ಎಂದು ಸಂತೋಷ್ ಲಾಡ್ ಫೌಂಡೇಶನ್ ದಾವಣಗೆರೆಯಲ್ಲಿ ಆಯೋಜಿಸಿದ್ದ ಬುದ್ಧ ಬಸವ ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಅಭಿಪ್ರಾಯಪಟ್ಟರು.

- Advertisement -

‘ಕಾಯಕ ಮತ್ತು ದಾಸೋಹ; ಸಾಮಾಜಿಕ ನ್ಯಾಯದ ಶ್ರೇಷ್ಠ ಪರಿಕಲ್ಪನೆ’ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು “ಸಾಮಾಜಿಕ ಆರ್ಥಿಕತೆ, ಸಮಾಜ ವಿಜ್ಞಾನ, ಮೊದಲು ಹುಟ್ಟಿದ್ದು 12ನೇ ಶತಮಾನದಲ್ಲಿ ಬಸವಣ್ಣ ವಚನಕಾರರಿಂದ.‌ ಆನಂತರ 19 ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್ ಹೇಳಿದ್ದು, ಮಾರ್ಕ್ಸ್ ಹೇಳಿದ ನಾಲ್ಕು ಯೋಗ್ಯ ಉತ್ಪಾದನೆ, ಪ್ರಸಾದದ ಸದ್ಬಳಕೆ, ಮಿಗುತಾಯ, ಸಾಮಾಜಿಕ ಸ್ವತ್ತು, ಇವುಗಳನ್ನು ಬಸವಣ್ಣ ಮತ್ತು ವಚನಕಾರರು 12ನೇ ಶತಮಾನದಲ್ಲಿಯೇ ಸಾರಿದ್ದಾರೆ” ಎಂದು ತಿಳಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...
1002312031

“ಇಂದು ನಾವೆಲ್ಲರೂ ಶಿಕ್ಷಣ ಪಡೆದಿದ್ದೇವೆ ಎಂದರೆ ಶರಣರ ಲಿಂಗಾಯತ ಮಠಗಳ ಕೊಡುಗೆ.‌ ತ್ರಿವಿಧ ದಾಸೋಹವನ್ನು ಮಠಗಳು ಮಾಡುತ್ತಿವೆ. ಇದಕ್ಕೆ ಮೂಲ ಬಸವಣ್ಣ ಪ್ರತಿಪಾದಿಸಿದ ಕಾಯಕ, ದಾಸೋಹ ಮನುಷ್ಯನ ಚಿಂತನೆಯ ಬೇರು ಎಂಬುದು. ಬಸವಣ್ಣನವರನ್ನು ಸಮಾಜ ಅರ್ಥೈಸಿಕೊಂಡು ಸರಿದಾರಿಯಲ್ಲಿ ನಡೆಯಬೇಕಿದೆ” ಎಂದು ಕರೆ ನೀಡಿದರು.

ಕಿಟೆಲ್ ವಾಣಿಜ್ಯ ಮಹಾವಿದ್ಯಾಲಯದ ಡಾ. ಶಂಭು ಹೆಗಡಾಳ “ಶರಣರ ಷಟ್ಸ್ಥಳ ಒಂದು ವೈಜ್ಞಾನಿಕ ನೋಟ” ಎನ್ನುವ ವಿಷಯ ಮಂಡನೆ ಮಾಡಿ ಮಾತನಾಡಿ, “ಬೌದ್ಧ ಶೂನ್ಯ ತತ್ವದಲ್ಲಿ ಏನೂ ಇಲ್ಲ ಎನ್ನುವ ವಿಮರ್ಶೆಯಾದರೆ, ಶರಣರ ಶೂನ್ಯ ತತ್ವ ಎಲ್ಲವನು ಒಳಗೊಂಡಿದೆ. ಅಂಬೇಡ್ಕರರ ಜೀವಪರ ಕಾರುಣ್ಯ ಬುದ್ಧ ಬಸವನಂತಹ‌ ದಾರ್ಶನಿಕರ ಗುರಿಯಾಗಿತ್ತು. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದವರನ್ನು ಬುದ್ಧ, ಬಸವ ಮತ್ತು ಅಂಬೇಡ್ಕರರ‌ ಮೂರು ಕಾಲಘಟ್ಟದಲ್ಲಿ ಶೋಷಿತರನ್ನು ಸಮಾನತೆ ನೀಡಿ ಮೇಲಕ್ಕೇರಿಸುವ ಪ್ರಯತ್ನ ನಡೆದಿದೆ” ಎಂದು ವಿಷಯದ ಕುರಿತು ಮಾತನಾಡಿದರು.‌

1002312030

“ವ್ಯಕ್ತಿ ಬದುಕನ್ನು ಹೇಗೆ ಬದುಕಿದ ಎಂದು ಮುಖ್ಯವಾಗುತ್ತದೆ. ಶರಣರು ಆತ್ಮ ಕಲ್ಯಾಣ, ವ್ಯಕ್ತಿ ಕಲ್ಯಾಣಕ್ಕೆ ಮಹತ್ವ ನೀಡಿದ್ದಾರೆ. ವಿಜ್ಞಾನ ಆತ್ಮ ಇಲ್ಲ ಎನ್ನುತ್ತದೆ. ಆದರೆ ಶರಣರದು ಅನಾತ್ಮ ವಾದವಲ್ಲ. ಅವರು ವಿಜ್ಞಾನ ಇತ್ತೀಚೆಗೆ ಹೇಳಿದ ಬಿಗ್ ಬ್ಯಾಂಗ್ ಥಿಯರಿಯನ್ನು 12ನೇ ಶತಮಾನದಲ್ಲಿಯೇ ವಚನಗಳಲ್ಲಿ ಅನಾವರಣ ಗೊಳಿಸಿದರು.‌ ಅವರ ವಚನಗಳಲ್ಲಿ ಬಯಲಿನ ಮೂಲಕ ಸೃಷ್ಟಿಯಾಯಿತು ಎಂದು ತಿಳಿಸಿದ್ದರು. ಯಾವ ವಿಜ್ಞಾನಕ್ಕೆ ಅಸಾಧ್ಯವಾದ ಸೃಷ್ಟಿ ರಹಸ್ಯವನ್ನು ಶರಣರು ವಚನಗಳಲ್ಲಿ ಬಿಗ್ ಬ್ಯಾಂಗ್ ಥಿಯರಿ ಹಿಂದಿನ ಸೃಷ್ಟಿಯ ಬಗೆ, ಪಂಚ ತತ್ವಗಳಾದ ಭೂಮಿ ಆಕಾಶ ಅಗ್ನಿ ವಾಯು ನೀರಿನ ಉದ್ಭವವನ್ನು ಶರಣರು ವಿಕಾಸವಾದದಲ್ಲಿ ತಿಳಿಸಿದ ಮೊದಲಿಗರು ಎಂದು ವಿಶ್ಲೇಷಿಸಿದರು.

“ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಸಾಯಬಾರದು ಎಂಬುದು ಶರಣರ ವಚನಗಳ ದಾರ್ಶನಿಕ ತತ್ವ,
ಅಜ್ಞಾನಿಯಾಗಿ ಹುಟ್ಟಿ ಅಜ್ಞಾನಿಯಾಗಿ ಸಾಯಬಾರದು ಮಾನವನಾಗಿ ಹುಟ್ಟಿ ಮಹಾದೇವನಾಗಿ ಸಾಯಬೇಕು ಎನ್ನುವ ಮೂಲಕ ಪ್ರತಿ ಜೀವಿಯೂ ಸಾಕ್ಷಾತ್ಕಾರ ಹೊಂದಬೇಕು ಎನ್ನುವುದು ಶರಣರ ಆಶಯವಾಗಿತ್ತು ಎಂದು ತಿಳಿಸಿದರು. ಷಟ್ಸ್ಥಳಗಳು ಒಬ್ಬನೇ ವ್ಯಕ್ತಿ ಸಾಧಿಸುವಂತದ್ದು. ಇವಕ್ಕೆ ಭಕ್ತನೇ ಆಧಾರ. ಇವನ್ನು ಸಾಧಿಸಿದವ ಪರಮಾತ್ಮನಲ್ಲಿ ಒಂದಾಗುತ್ತಾನೆ ಎಂದೇ ಅರಿತಿದ್ದರು” ಎಂದು ಅರ್ಥೈಸಿದರು.

ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಬುದ್ಧ ಬಸವ ಅಂಬೇಡ್ಕರರಂತೆ ಪ್ರಜ್ಞೆ, ಕರುಣೆ ಬೆಳೆಸಿಕೊಳ್ಳಬೇಕು; ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು

ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಪಾಂಡೋಮಟ್ಟಿ ವಿರಕ್ತ ಮಠದ ಮ. ನಿ. ಪ್ರ ಗುರುಬಸವ ಶ್ರೀಗಳು, ಡಾ. ಬಸವ ಜಯಚಂದ್ರ ಶ್ರೀಗಳು, ಷ. ಬ್ರ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಶ್ರೀ, ಕುಂಚಿಟಿಗ ಪೀಠದ ಶ್ರೀ ಶಾಂತವೀರ ಶ್ರೀಗಳು, ಮಾದಾರ ಚೆನ್ನಯ್ಯ ಗುರುಪೀಠದ ಮಾದಾರ ಚೆನ್ನಯ್ಯ ಶ್ರೀಗಳು, ಹೆಳವ ಗುರು ಪೀಠದ ಬಸವ ಬೃಂಗೇಶ್ವರ ಶ್ರೀಗಳು, ವಾಲ್ಮೀಕಿ ಪ್ರಸನ್ನಾನಂದಪುರಿ ಶ್ರೀಗಳು, ರೆಡ್ಡಿ ಗುರುಪೀಠದ ವೇಮನಾನಂದ ಶ್ರೀಗಳು, ಮಡಿವಾಳ ಗುರುಪೀಠದ ಬಸವ ಮಾಚೀದೇವ ಶ್ರೀಗಳು, ಬಸವ ಕುಂಬಾರಗುಂಡಯ್ಯಾ ಶ್ರೀಗಳು, ಅನ್ನಧಾನಿ ಭಾರತೀ ಅಪ್ಪಣ್ಣ ಶ್ರೀಗಳು, ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಶ್ರೀಗಳು, ಕೇತೇಶ್ವರಪೀಠದ ಇಮ್ಮಡಿ ಬಸವಪ್ರಭು ಕೇತೇಶ್ವರ ಶ್ರೀಗಳು, ಸಚಿವ ಸಂತೋಷ್ ಲಾಡ್, ಲೇಖಕಿ ವಿನಯಾ ಒಕ್ಕುಂದ, ಕನ್ನಡ ಅಧ್ಯಯನ ಪೀಠದ ಡಾ. ಅನಸೂಯ ಕಾಂಬಳೆ, ಡಾ. ಸಂಜೀವ ಕುಲಕರ್ಣಿ, ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯ ವೀಡಿಯೋ ಲೀಕ್ ಮಾಡಿದ ದುಷ್ಕರ್ಮಿ: ಶೀಘ್ರ ಬಂಧನಕ್ಕೆ ಒತ್ತಾಯ

ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದ ಆರೋಪಿಯೊಬ್ಬ, ಸಂತ್ರಸ್ತೆಯ ಖಾಸಗಿ...

SIR ವಿವಾದ | ಕೊಪ್ಪದಲ್ಲಿ 243 ಮತದಾರರ ಹೆಸರು ಡಿಲೀಟ್‌ಗೆ ನೀಡಿದ್ದ ಅರ್ಜಿ ಹಿಂಪಡೆದ ಬಿಜೆಪಿ ಮುಖಂಡ

ರಾಜ್ಯಾದ್ಯಂತ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮತ್ತು...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...