ದಾವಣಗೆರೆ | ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಕೋರೆಗಾಂವ್ ಸಂಭ್ರಮಾಚರಣೆ

Date:

ದಾವಣಗೆರೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ 6ನೇ ವರ್ಷದ ಕೋರೆಗಾಂವ್ ಸಂಭ್ರಮಾಚರಣೆಯನ್ನು 2026ರ ಜನವರಿ 01ರ ಗುರುವಾರ, ಬೆಳಿಗ್ಗೆ 11-30ಕ್ಕೆ ದಾವಣಗೆರೆ ಬೂದಾಳ್ ರಿಂಗ್ ರೋಡ್ ವೃತ್ತದಲ್ಲಿ ಆಚರಿಸಲಾಯಿತು.‌

- Advertisement -

ಈ ವೇಳೆ ಮಾತನಾಡಿದ ಮುಖಂಡರು “ಕೋರೆಗಾಂವ್ ಯುದ್ಧವು ಭಾರತದಲ್ಲಿರುವ ಜಾತಿವ್ಯವಸ್ಥೆಯಲ್ಲಿ ನಲುಗಿಹೋದ ಶೋಷಿತ ಸಮುದಾಯ ಶೌರ್ಯದಿಂದ ಗೆದ್ದ ಮಹಾನ್ ಹೋರಾಟವೇ ಎನ್ನಬಹುದು. 1818 ಜನವರಿ 1 ರಂದು ನಡೆದ ಆ ಯುದ್ದವು ಇಂದಿಗೂ ಮನುವಾದಿಗಳ ಮತ್ತು ಶೋಷಿತ ಸಮುದಾಯುದ ನಡುವೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿಯು ಕೂಡ ಮುಂದುವರೆಯುತ್ತಲೇ ಇದೆ. ಆದರೆ ಅಂದು ನಡೆದ ಯುದ್ದವು ನಮ್ಮೆಲ್ಲರ ಸ್ವಾಭಿಮಾನ, ಸಮಾನ ಹಕ್ಕುಗಳ ಬದುಕಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿ ಶೌರ್ಯದಿಂದ ಮನುವಾದಿಗಳ ಸೊಲ್ಲಡಗಿಸಿದ ಮಹಾರಾಷ್ಟ್ರದ 500 ಮಹರ್ ಸೇನಾನಿಗಳು ಜಾತೀಯತೆ, ವರ್ಣಾಶ್ರಮ ಪದ್ದತಿ, ಅಸಮಾನತೆಯ ಪ್ರತಿಪಾದಕ 2ನೇ ಬಾಜೀರಾವ ಪೇಶ್ವೆಯ 28000 ಸುಸಜ್ಜಿತ ಸೇನೆಯ ನಡುವೆ ನಡೆದ ಯುದ್ದವಾಗಿದೆ” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

“ಯುದ್ದದ ಹಿರಿಮೆ ಮತ್ತು ಕುರುಹುಗಳನ್ನು ಪೂನಾ ನಗರ ಪಕ್ಕದಲ್ಲಿ ಹರಿಯುವ ಭೀಮಾ ನದಿಯ ದಂಡೆಯ ಮೇಲೆ ನಿರ್ಮಿಸಿರುವ 72 ಅಡಿ ಸ್ತೂಪದ ಮೇಲೆ ಕೆತ್ತಲಾಗಿದೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅದರ ಫಲವಾಗಿ ಮುಂದುವರೆದು ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ನೀತಿಯು ಜಾರಿಗೆ ಬಂತು ಕೇವಲ ಸಂಸ್ಕೃತದಲ್ಲಿ ನೀಡುತ್ತಿದ್ದ ಶಿಕ್ಷಣವನ್ನು ಧಿಕ್ಕರಿಸಿ ಮೊದಲ ಬಾರಿಗೆ ಮಹಾತ್ಮ ಜೋತಿ ಬಾ ಪುಲೆಯವರು ಮೆಟ್ರಿಕ್ಯೂಲೇಷನ್ ನಲ್ಲಿ ಉತ್ತೀರ್ಣರಾದ ಮೊದಲಿಗರು. ನಂತರ ಸಾವಿತ್ರಿ ಬಾ ಪುಲೆ ಇವರ ಸಾರಥ್ಯದಲ್ಲಿ ಮಹಿಳೆಯರಿಗೆ ಶಾಲೆ ಪ್ರಾರಂಭಿಸಿದರು” ಎಂದು ತಿಳಿಸಿದರು.

“ಇದು ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಬಾಲ್ಯದಲ್ಲಿ ಶಿಕ್ಷಣ ದೊರೆಯಲು ಒಂದು ಪ್ರೇರಣೆ, ಉನ್ನತ ಶಿಕ್ಷಣ ಪಡೆಯಲು ಕಾರಣವಾಯಿತು. ಮತ್ತು ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗ್ರಂಥಾಲಯದ ಒಂದು ಪುಸ್ತಕದಲ್ಲಿ 1818ರ ಕೋರೆಗಾಂವ್ ಯುದ್ಧದ ಕುರುವು ಸಿಕ್ಕತು. ಅದರ ಇತಿಹಾಸವನ್ನು ಸಂಶೋಧಿಸಿದ ಅಂಬೇಡ್ಕರ್ ಕುರುಹುಗಳ ಮೂಲಕ ಇದನ್ನು ದಾಖಲಿಸಿ, ಆಚರಿಸಿದರು.‌ ಅಂದಿನಿಂದ ಇಂದಿನವರೆಗೂ ಭೀಮಾ ಕೋರೆಗಾಂವ್ ಅವಿಸ್ಮರಣೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.

1003423784

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ದಲಿತ ಮುಖಂಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ: ಕ್ರಮಕ್ಕೆ ಆಗ್ರಹ

ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಮಿತಿಯ ಆಶ್ಫಾಕ್, ಸತೀಶ್ ಅರವಿಂದ್, ಪವಿತ್ರ, ಆದಿಲ್ ಖಾನ್, ಜಾಫರ್, ಚಂದ್ರು, ಬಸಣ್ಣ ಸಮೀರ್, ಯಲ್ಲಪ್ಪ, ಶಿವು, ಶಿವಕುಮಾರ್, ಹನುಮಂತಪ್ಪ, ರಾಮಾಂಜನೇಯ, ಬಾಷಾ, ಮಲ್ಲಪ್ಪ ಇನ್ನೂ ಮುಂತಾದವರು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...

ಮಂಗಳೂರು ಎಂಆರ್‌ಪಿಎಲ್ ದುರಂತ: ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ಘೋಷಣೆ

ಮಂಗಳೂರಿನ ಎಂಆರ್‌‌ಪಿಎಲ್ (MRPL) ಕಾರ್ಖಾನೆಯಲ್ಲಿ ನಡೆದ ದಾರುಣ ಅಪಘಾತದಲ್ಲಿ ಜೀವ ಕಳೆದುಕೊಂಡ...

‘ಎಫ್ಐಆರ್ ದಾಖಲಾಗುವವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ಕದಲೋದೆ ಇಲ್ಲ’: ಪಟ್ಟು ಹಿಡಿದು ಕುಳಿತ ಸಿಎಂ

'ಎಫ್ಐಆರ್ ದಾಖಲಾಗುವವರೆಗೂ ಕದಲುವುದೇ ಇಲ್ಲ' ಎಂದು ಸ್ಪಷ್ಟವಾಗಿ ಹೇಳಿರುವ ಮುಖ್ಯಮಂತ್ರಿ ಡಿ.ಕೆ....