ದಾವಣಗೆರೆ | ಅಪ್ರಾಪ್ತರ ವಾಹನ ಚಾಲನೆ, 25 ಸಾವಿರ ದಂಡ, ಜೈಲು, ವಾಹನದ ನೋಂದಣಿ ರದ್ದು.

Date:

ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡದಂತೆ, ಸಾರ್ವಜನಿಕವಾಗಿ ಆಗುವ ಪ್ರಾಣಹಾನಿ, ನಷ್ಟ ತಪ್ಪಿಸಲು ಸಾರಿಗೆ ಇಲಾಖೆ ಅನೇಕ ನಿಯಮಗಳನ್ನು ರೂಪಿಸಿದ್ದು, ಜಾರಿಗೆ ತಂದಿದೆ. ಅಲ್ಲಲ್ಲಿ ಇದರ ಉಲ್ಲಂಘನೆಯಾಗುತ್ತಿದ್ದು, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆ, ನ್ಯಾಯಾಲಯಗಳು ತಿಳಿಸಿದರೂ ಪ್ರಕರಣಗಳು ದಾಖಲಾಗುತ್ತಿವೆ. ಈರೀತಿಯ ಪ್ರಕರಣವೊಂದು ದಾವಣಗೆರೆಯಲ್ಲಿ ದಾಖಲಾಗಿದ್ದು, ನ್ಯಾಯಾಲಯ ವಾಹನ ಮಾಲೀಕರು, ಪಾಲಕರನ್ನು ಹೊಣೆಗಾರರನ್ನಾಗಿಸಿ ಮತ್ತೊಮ್ಮೆ ದಂಡ, ಜೈಲು, ವಾಹನ ನೋಂದಣಿ ರದ್ದು ಶಿಕ್ಷೆ ನೀಡಿ ಚಾಟಿ ಬೀಸಿದೆ.‌

- Advertisement -

ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ, ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್  ಮತ್ತೊಮ್ಮೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...
1001689240
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್

ದಾವಣಗೆರೆ ನಗರದ ಹೊಂಡದ ರಸ್ತೆ ಅರುಣ ಎಲ್.ಸಿ ಗೇಟ್  ಬಳಿ ಪೊಲೀಸ್ ವರಿಷ್ಠಾಧಿಕಾರಿ  ಉಮಾ ಪ್ರಶಾಂತ್ ರವರ ಸೂಚನೆಯಂತೆ ನಗರದ ಡಿವೈಎಸ್ಪಿ ಶರಣಬಸವೇಶ್ವರ ಬೀಮರಾವ್ ರವರ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆ ಪಿಐ  ನಂಜುಂಡಸ್ವಾಮಿ ಎಂ, ಸಿಬ್ಬಂದಿಗಳೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಐಎಂವಿ ಪ್ರಕರಣಗಳನ್ನು ದಾಖಲು ಮಾಡುತ್ತಿರುವ ಸಮಯದಲ್ಲಿ ಹೊಂಡಾ ಆಕ್ಟಿವಾ ಸ್ಕೂಟರೊಂದನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸಿಕೊಂಡು ಬಂದಿದ್ದು ತಡೆದು ನಿಲ್ಲಿಸಿದ್ದಾರೆ. ಅಪ್ರಾಪ್ತ ವಯಸ್ಕ ಸಾರ್ವಜನಿಕ ರಸ್ತೆ ಮೇಲೆ ವಾಹನ ಚಲಾಯಿಸಿದ ಹಿನ್ನಲೆಯಲ್ಲಿ  ಆಕ್ಟಿವ್ ಹೊಂಡ ಬೈಕ್ ಅನ್ನು ಜಪ್ತಿ ಮಾಡಿ  ಬಸವನಗರ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ.  1ನೇ ಜೆಎಂಎಫ್ಸಿ ದಾವಣಗೆರೆ ನ್ಯಾಯಾಲಯಕ್ಕೆ ಆಕ್ಟಿವ್ ಹೊಂಡ ಬೈಕ್ ಮಾಲೀಕರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ

ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ವಾಹನದ ಮಾಲೀಕರಿಗೆ ಒಂದು ದಿನ ಸಾದಾ ಸಜೆ ಮತ್ತು 25000/-ರೂ ದಂಡ ಹಾಗು ವಾಹನದ ನೊಂದಣಿಯನ್ನು1 ವರ್ಷದವರೆಗೆ ರದ್ದು ಪಡಿಸಲು ತೀರ್ಪು ನೀಡಿದೆ. ಅಲ್ಲದೇ ವಾಹನ ಚಾಲನೆ ಮಾಡಿಕೊಂಡು ಬಂದ ಅಪ್ರಾಪ್ತ ಬಾಲಕನಿಗೆ 25ವರ್ಷ ತುಂಬುವರೆಗೂ ಚಾಲನಾ ಪರವಾನಿಗೆಯನ್ನು ನೀಡದಂತೆ ಶಿಕ್ಷೆ ವಿಧಿಸಲಾಗಿದೆ.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಸಂಸ ನೇತೃತ್ವದಲ್ಲಿ ಗೂಡ್ಸ್ ಚಾಲಕರ ಹಾಗೂ ಮಾಲೀಕರ ಸಂಘ ಉದ್ಘಾಟನೆ

ದಾವಣಗೆರೆ ನಗರದ ಚಾಮರಾಜಪೇಟೆಯ ಹಳೆಯ ಸರ್ಕಾರಿ ಹೆರಿಗೆ ಹಾಗೂ ಮಹಿಳಾ ಮತ್ತು...

ದಾವಣಗೆರೆ | ವರದಿಗಾರರ ಕೂಟದಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಮಾಧ್ಯಮ ಪ್ರಶಸ್ತಿ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪತ್ರಿಕಾ ದಿನಾಚರಣೆ ಹಾಗೂ 2025-26ನೇ ಸಾಲಿನ...

ದಾವಣಗೆರೆ | ಟೋಲ್ ಬಳಿ ಅಂಗಡಿ ತೆರವು; ಸಂತ್ರಸ್ತರೊಂದಿಗೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್‌ಗೇಟ್ ಬಳಿ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ...

ದಾವಣಗೆರೆ | ನೀಟ್ ರದ್ದುಗೊಳಿಸಿ, ಸಿಇಟಿ ಜಾರಿಗೆ ಎನ್.ಎಸ್.ಯು.ಐ ಕಾಂಗ್ರೆಸ್ ಆಗ್ರಹ

ವಿದ್ಯಾರ್ಥಿಗಳ ಭವಿಷ್ಯ, ಸಮಾನ ಶಿಕ್ಷಣಾವಕಾಶ ಹಾಗೂ ನ್ಯಾಯಸಮ್ಮತ ಪ್ರವೇಶ ವ್ಯವಸ್ಥೆಯನ್ನು ಕಾಪಾಡುವ...