ಬಾಡಿಗೆಗೆ ಎತ್ತುಗಳು ಸಿಗದ ಕಾರಣ ಕುಟುಂಬಸ್ಥರೇ ನೊಗಕ್ಕೆ ಹೆಗಲು ಕೊಟ್ಟು ಎಡೆ ಹೊಡೆಯುವ ದೃಶ್ಯ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಕಂಡುಬಂದಿತು.
ಗ್ರಾಮದ ರೈತ ಸುರೇಶ ಗೌಡ ತನ್ನ ನೊಗಕ್ಕೆ ಹೆಗಲು ಕೊಟ್ಟು ಸೋಯಾಬಿನ್, ಶೇಂಗಾ ಬೆಳೆಗಳ ಮಧ್ಯೆ ಬೆಳೆದಿದ್ದ ಕಳೆ ತೆಗೆಯುವ ಕಾರ್ಯ ಮಾಡಿದ್ದಾರೆ. ರೈತ ಸುರೇಶ್ ಮತ್ತು ಅವರ ಮಗ ನೊಗ ಹಿಡಿದು ನೇಗಿಲನ್ನು ಎಳೆದರೆ, ಸರೇಶ್ ಅವರ ಪತ್ನಿ ನೇಗಿಲು ಹಿಡಿದು, ಉಳುಮೆ ಮಾಡಿದ್ದಾರೆ. ದಿನಕ್ಕೆ ಎಕರೆ ಜಮೀನಿನಲ್ಲಿ ಎಡೆ ಹೊಡೆಯುವ ಮೂಲಕ ಕಳೆ ಕೀಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
“ಬಡ ರೈತರಿಗೆ ಎತ್ತು ಕೊಳ್ಳಲು ಶಕ್ತಿ ಇರುವುದಿಲ್ಲ. ಬಾಡಿಗೆಗೆ ಎತ್ತು ಸಿಗದ ಪರಿಣಾಮ ಬಿತ್ತನೆಗೂ ಪಡಿಪಾಟಲು ಪಡುವ ಸ್ಥಿತಿ ಉಂಟಾಗುತ್ತದೆ. ನಿರಂತರ ಮಳೆ ಸುರಿದ ಹಿನ್ನಲೆಯಲ್ಲಿ ಬೆಳೆ ಮಧ್ಯೆ ವೀಪರಿತ ಕಳೆ ಬೆಳೆದಿದೆ. ಬಾಡಿಗೆಗೆ ಎತ್ತುಗಳು ಸಿಗದ ಕಾರಣ, ನೊಗಕ್ಕೆ ಹೆಗಲು ಕೊಟ್ಟು ಉಳುಮೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.