SIR ವಿರೋಧಿ ಒಕ್ಕೂಟ, ನಾಗರೀಕ ಸಂಘಟನೆಗಳ ಹಾಗೂ ಜಾತ್ಯತೀತ ಪಕ್ಷಗಳಿಂದ ರಾಜ್ಯ ಪ್ರವಾಸ ಕುರಿತು ಚಿಕ್ಕಮಗಳೂರು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಸಮಾಲೋಚನಾ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಭಾನುವಾರ ಮಧ್ಯಾಹ್ನ ನಡೆಸಲಾಯಿತು.

ಚುನಾವಣಾ ಆಯೋಗದಲ್ಲಿ ಮೂವರೂ ಆಯುಕ್ತರು ಸಮಾನರು. ಅದು ಸರ್ವಸಮ್ಮತಿಯ ಮೇಲೆ ಕಾರ್ಯನಿರ್ವಹಿಸಬೇಕು. ವಿಶೇಷ ಸಂದರ್ಭದಲ್ಲಿ ಮಾತ್ರ ಬಹುಸಂಖ್ಯಾತ ಅಭಿಪ್ರಾಯದ ಮೇಲೆ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ನಡೆದಿರುವುದು ಆಯೋಗದ ಒಳಗಡೆ ಸರ್ವಸಮ್ಮತಿ ಇಲ್ಲವೇ ಇಲ್ಲ. ಮಾತ್ರವಲ್ಲ ಬಹುಸಂಖ್ಯಾತರ ಅಭಿಪ್ರಾಯವನ್ನೂ ತಳ್ಳಿ ಹಾಕಿ, ಏಕ ವ್ಯಕ್ತಿ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಜ್ಞಾನೇಶ್ ಕುಮಾರ್ ಗೆ ಇಂತಹ ಧೈರ್ಯ ಎಲ್ಲಿಂದ ಬರಲು ಸಾಧ್ಯ? ತನ್ನನ್ನು ಆಯ್ಕೆ ಮಾಡಿರುವ ಮೋದಿ ಶಾ ನನ್ನ ಬೆನ್ನಿಗೆ ಇದ್ದಾರೆ ಮತ್ತು ನನ್ನ ಮೇಲೆ ಯಾವ ಕಾನೂನು ಕ್ರಮ ಜರುಗಿಸಲೂ ಅವಕಾಶ ಇಲ್ಲದಂತೆ ಕಾನೂನುಗಳನ್ನೂ ತಿದ್ದುಪಡಿ ಮಾಡಿದ್ದಾರೆ ಎಂಬ ಧೈರ್ಯವೇ ಅವರಿಂದ ಈ ದುಸ್ಸಾಹಸವನ್ನು ಮಾಡಿಸಿದೆ. ಚುನಾವಣಾ ಆಯೋಗ ಮಾಡಿರುವುದು ದೇಶದ್ರೋಹದ ಕೇಲಸ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದರು.
ಪ್ರಜಾತಂತ್ರ ವ್ಯವಸ್ಥೆಯ ಈ ಅವನತಿಗೆ ಮೋದಿ ಶಾ ಗಳೇ ಪ್ರಧಾನ ಹೊಣೆಗಾರರಾಗಿದ್ದಾರೆ. ಅವರುಗಳೇ ದೇಶದ ಮುಂದೆ ಕ್ಷಮೆ ಕೋರಿ ತಮ್ಮ ಕೂಸಾದ ಜ್ಞಾನೇಶ್ ಕುಮಾರ್ ಅನ್ನು ವಜಾಗೊಳಿಸಬೇಕು ಹಾಗೂ ತಮ್ಮ ಅಕ್ರಮ ಯೋಜನೆಯಾದ SIR ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ರಾಜಕೀಯ ಪಕ್ಷಗಳು ತೋರಿಕೆಯ ಪ್ರತಿಭಟನೆಗೆ ಸೀಮಿತವಾಗದೆ ಧೃಡ ನಿಲುವನ್ನು ತಾಳಬೇಕಿದೆ. ಬೀದಿ ಹೋರಾಟಕ್ಕೆ ಇಳಿಯಬೇಕಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | SIR ವಿರೋಧ: ಚುನಾವಣಾ ಆಯೋಗ ಅಕ್ರಮವಾಗಿ ಕಾರ್ಯನಿರ್ವಹಿಸಿದೆ; ನಟ ಪ್ರಕಾಶ್ ರಾಜ್
ಈ ವೇಳೆ ಈ ವೇಳೆ SIR ವಿರೋಧಿ ಒಕ್ಕೂಟ ಕರ್ನಾಟಕ ಮುಖಂಡರು ಕೆ. ಎಲ್ ಅಶೋಕ್, ಗೌಸ್ ಮೋಹಿಯುದ್ದಿನ್, ಇಸೇಬೆಲ್ಲ, ಸುರೇಶ್ ಗಡಿಕಲ್, ಮರ್ಲೆ ಅಣ್ಣಯ್ಯ, ಮುಸ್ತಫಾ, ಶಾದಾಬ್, ಮುನ್ನ, ಗೌಸ್ ಮುನೀರ್, ಚಂದ್ರು ಅಂಗಡಿ, ಟಿ ಎಲ್ ಗಣೇಶ್, ಕೌಳಿ ರಾಮು, ರಾಧಾ ಹಾಗಲಗಂಚಿ, ಸಂಘಟಕರು ಹಾಗೂ ಇನ್ನಿತರರಿದ್ದರು.




