ವಿಜಯಪುರ | ದಲಿತ ಸಮ್ಮೇಳನದಲ್ಲಿ ವಚನಕಾರರ ಗೋಷ್ಠಿ ಇಲ್ಲದ್ದಕ್ಕೆ ಉಪ್ಪಿನ ಬೇಸರ

Date:

ವಿಜಯಪುರದಲ್ಲಿ ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ವಚನಕಾರರನ್ನು ಒಳಗೊಳ್ಳದಿದ್ದದ್ದು ನೋವಿನ ಸಂಗತಿ ಎಂದು ಬರಹಗಾರ ಹಾಗೂ ಬಸವ ಪ್ರತಿಷ್ಠಾನದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಉಪ್ಪಿನ ತಿಳಿಸಿದ್ದಾರೆ.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರಿಗೆ ಪತ್ರ ಬರೆದಿರುವ ಅವರು, “ಬಸವಾದಿ ಶರಣರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ‘ನಿಮ್ನ ವರ್ಗ’ಕ್ಕಾಗಿಯೇ ಚಳವಳಿ ರೂಪಿಸಿ ಜೀವ ತೇಯ್ದು, ಪ್ರಾಣವನ್ನೇ ಕೊಟ್ಟವರು. ಕೆಳವರ್ಗದಿಂದ ರೂಪುಗೊಂಡ ಕಲ್ಯಾಣ ಕ್ರಾಂತಿಯ ನೆರಳು ದಲಿತ ಸಮ್ಮೇಳನದಲ್ಲಿ ಮಾತು, ಗೋಷ್ಠಿ ಅಥವಾ ಚರ್ಚೆಯ ಮೂಲಕವಾದರೂ ಬೀಳಬೇಕಿತ್ತು” ಎಂದು ಹೇಳಿದ್ದಾರೆ.

“ಬಸವಣ್ಣನವರು ಏನೆಲ್ಲ ಮಾಡಿದರು ಎನ್ನುವುದು ಗೊತ್ತೇ ಇದೆ. ಅವರೊಂದಿಗೆ ಹರಳಯ್ಯ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಬಹುತೇಕರು ದಲಿತರೇ ಆಗಿದ್ದಾರೆ. ಅವರೆಲ್ಲ ಎಲ್ಲರಿಗೂ ಅನುಭವ ಮಂಟಪಕ್ಕೆ ಕಾರಣರಾದವರು. ಪ್ರಜಾಪ್ರಭುತ್ವ, ಸಂವಿಧಾನದ ಅಂಶಗಳೆಲ್ಲ ವಚನಗಳಲ್ಲಿವೆ ಎಂಬುದು ಒಪ್ಪಿತ ಮಾತಾಗಿದೆ. ಹಾಗಾಗಿ ಮುಂದಿನ ಸಮ್ಮೇಳನದಲ್ಲಾದರೂ ವಚನಗಳು, ಲಿಂಗಾಯತ ಧರ್ಮದ ಚಳವಳಿಯ ಕುರಿತು ವಿಷಯಗಳನ್ನು ಸೇರಿಸಬೇಕು” ಎಂದು ಉಪ್ಪಿನ ಮನವಿ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬುದ್ಧನ ನಂತರ ಬೆಳಗಿದವರು ಬಸವಣ್ಣ. ಆನೆ ಕಾಲಿಗೆ ಕಟ್ಟಿಸಿಕೊಂಡವರು, ಭರ್ಜಿಯಲ್ಲಿ ಚುಚ್ವಿಸಿಕೊಂಡು ಸತ್ತವರು, ಗಡಿಪಾರಾದವರು, ವಚನಗಳನ್ನು ಉಳಿಸಿಕೊಳ್ಳಲು ಅಸುನೀಗಿದವರು ಬಸವಾದಿ ಶರಣರು. ಅವರನ್ನು ದಲಿತ ಸಮುದಾಯವೂ ಸೇರಿದಂತೆ ಯಾರೂ ಮರೆಯುವಂತಿಲ್ಲ. ತುಳಿತಕ್ಕೊಗಾದವರೆಲ್ಲ ದಲಿತರೇ ಆಗಿದ್ದಾರೆ. ಅದಕ್ಕೇ ಬಸವಣ್ಣ, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ..’ ಎಂದಿದ್ದರು” ಎಂದು ಅವರು ಹೇಳಿದ್ದಾರೆ.

“ಹೆಣ್ಣುಮಕ್ಕಳ ಪ್ರಾತಿನಿಧ್ಯದ ಕೊರತೆಯೂ ಸಮ್ಮೇಳನದಲ್ಲಿತ್ತು. ಗೋಷ್ಠಿಗಳಲ್ಲಿ ದಲಿತ ಮಹಿಳೆಯರ ಸಂಖ್ಯೆ ಬಹುತೇಕ ಕಡಿಮೆಯಾಗಿತ್ತು. ಅನೇಕ ಮಹಿಳೆಯರು ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದು, ಅವರೆಲ್ಲರನ್ನು ಇಂತಹ ಸಮ್ಮೇಳನಗಳು ಗುರುತಿಸಬೇಕು. ಸತ್ಯಕ್ಯನಂತಹ ಅನೇಕ ವಚನಕಾರ್ತಿಯರನ್ನೂ ನಾವು ಮರೆಯಬಾರದು” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಬೀದಿ ನಾಯಿಗಳ ಸರ್ವೆ, ಸಂತಾನ ನಿಯಂತ್ರಣ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ

ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವನ್ನು 15 ದಿನದೊಳಗಾಗಿ...

ಶಿರಾಡಿ ಘಾಟ್‌ನಲ್ಲಿ ಭೀಕರ ರಸ್ತೆ ಅಪಘಾತ: ಓರ್ವ ಸಾವು; ಐವರಿಗೆ ಗಾಯ

ಎರಡು ಕಾರುಗಳು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ...

ಬೀದರ್ | ಸೆ.15ಕ್ಕೆ ರಾಜ್ಯಾದ್ಯಂತ ಪ್ರಜಾಪ್ರಭುತ್ವ ದಿನಾಚರಣೆ : ಸಚಿವ ಈಶ್ವರ ಖಂಡ್ರೆ

ನಮ್ಮ ಸರಕಾರದ ತೀರ್ಮಾನದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆ.15ರಂದು ಕರ್ನಾಟಕ ರಾಜ್ಯದಾದ್ಯಂತ...

ಮಂಡ್ಯ | ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರ ಕಡೆಗಣಿಸಿದ ಜಿಲ್ಲಾಡಳಿತ: ಕಾರಸವಾಡಿ ಮಹದೇವ

ಈವೆಂಟ್ ಮ್ಯಾನೆಜ್‌ಮೆಂಟ್‌ ಹೆಸರಲ್ಲಿ ಕಮಿಷನ್ ಆಸೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರನ್ನು...