“2016-17ರಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿದ ಟ್ರಸ್ಟ್ ಸದಸ್ಯನಿಗೆ 30ಲಕ್ಷ ರೂ ಬಿಡಗಡೆಯಾಗಿದ್ದು, ಇದರ ವಿರುದ್ದ ಹೋರಾಟ ಮಾಡುತ್ತಿದ್ದೇವೆ” ಎಂದು ಸಮತಾ ಸೈನಿಕ ದಳ ಸಂಘಟನೆಯ ಮುಖಂಡರು ಆರೋಪಿಸಿ ಧಾರವಾಡ ಪಟ್ಟಣದ ಅಜಾದ್ ಮೌಲಾನಾ, ಅಲ್ಪಸಂಖ್ಯಾತರ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಮುಖಂಡರು ದೇವದಾಸ್ ಗುಂಟೂರಿ ಮಾತನಾಡಿ, “ಎಬಿಎಮ್ ತೆಲಗು ಚರ್ಚ್ ಗದಗ ರೋಡ್, ಹುಬ್ಬಳ್ಳಿ. ಇದು ಮೂಲ ಟ್ರಸ್ಟ್ ಆಗಿದ್ದು, ಟ್ರಸ್ಟ್ ಮೂಲ ನೊಂದಣಿ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡು ಅನಧಿಕೃತವಾಗಿರುವ ಎಬಿಎಮ್ ಬ್ಯಾಪ್ಟಿಸ್ಟ್ ಚರ್ಚ, ಗಾಂಧಿವಾಡ, ಮದರ್ ತೆರೆಸಾ ರಸ್ತೆ ಹುಬ್ಬಳ್ಳಿ. ಇದು ನಕಲಿ ದಾಖಲೆಗಳನ್ನು ಅಲ್ಪಸಂಖ್ಯಾತ ಇಲಾಖೆಗೆ ನೀಡಿ ಹಣ ಪಡೆದಿರುವರು. ಹಾಗಾಗಿ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಎಬಿಎಮ್ ಬ್ಯಾಪ್ಟಿಸ್ಟ್ ಚರ್ಚ, ನೊಂದಣಿ ಆಗಿದೆಯೇ ಎಂದು ತಿಳಿದುಕೊಳ್ಳಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಜಿಲ್ಲಾಧಿಕಾರಿಗಳು ಲಿಖಿತ ರೂಪದಲ್ಲಿ ತಿಳಿಸಿದ್ದು, ಎಬಿಎಮ್ ಬ್ಯಾಪ್ಟಿಸ್ಟ್ ಚರ್ಚ್, ಗಾಂಧಿವಾಡ, ಮದರ್ ತೆರೆಸಾ ರಸ್ತೆ, ಹುಬ್ಬಳ್ಳಿ, ರಜಿಸ್ಟರ್ ದಾಖಲಾಗಿರುವುದಿಲ್ಲ” ಎಂದು ತಿಳಿಸಿದ್ದು, ಈ ಟ್ರಸ್ಟ್ ಈ ನಕಲಿ ಟ್ರಸ್ಟ್ ಮೇಲೆ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಸಮತಾ ಸೈನಿಕ ದಳ ಯುವ ಘಟಕ ಅಧ್ಯಕ್ಷ ಸಂಜಯ ಕುರುಬೆಟ್ಟ ಮಾತನಾಡಿ, “ಈ ಕುರಿತು ದಾಖಲೆಗಳ ಸಮೇತ ಇಲಾಖೆ ಅಧಿಕಾರಿಗಳಿಗೆ ಕೊಟ್ಟಿದ್ದೇವೆ. ಆದರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಸಮತಾ ಸೈನಿಕ ದಳ ಸಂಘಟನಾ ಕಾರ್ಯದರ್ಶಿ ಪಾಪರಾವ್ ಬುರ್ಗಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ ಲಮಾಣಿ, ಸಮಾಜದ ಮುಖಂಡರು ಎಸ್ ಯೇಸುದಾಸ್, ಕೆ ರವಿ, ಕೆ. ವಿಲ್ಸಾನ್ ಉಪಸ್ಥಿತರಿದ್ದರು.




