ಧಾರವಾಡ | ಶಿಕ್ಷಣವು ನನ್ನನ್ನು ವಿಶ್ವಸಂಸ್ಥೆಯ ಮಟ್ಟಕ್ಕೆ ಕರೆದುಕೊಂಡು ಹೋಗಿದೆ: ಬೀಬಿಜಾನ್ ಹಳೆಮನಿ

Date:

“ಗುರು ನೀಡಿದ ಶಿಕ್ಷಣವೆಂಬ ಮೂರಕ್ಷರವು ಇಂದು ನನ್ನನ್ನು ವಿಶ್ವಸಂಸ್ಥೆ ನೀಡುವ ಜೀವ ವೈವಿಧ್ಯದ ನೊಬೆಲ್ ಎಂದೇ ಪರಿಗಣಿಸಲಾಗಿರುವ ‘ಇಕ್ವಿಡಿಟಿ ಇನಿಷಿಯೇಟಿವ್’ ಎಂಬ ಪ್ರಶಸ್ತಿ ಪುರಸ್ಕಾರದ ಮಟ್ಟಕ್ಕೆ ಕರೆದುಕೊಂಡು ಹೋಗಿದೆ” ಎಂದು ಶ್ರೀಮತಿ ಬೀಬಿಜಾನ್ ಹಳೆಮನೆ ಅವರು ಹೇಳಿದರು.

- Advertisement -

 ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಜನ ಗುಡಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ ಜರುಗಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಬೀಬಿಜಾನ್ ಹಳೆಮನೆಯವರು ಕುಂದಗೋಳದ ತೀರ್ಥ ಗ್ರಾಮದಲ್ಲಿ ನಾಟಿ ಬೀಜಗಳ ಸಂರಕ್ಷಣೆ ಮತ್ತು ಸಿರಿಧಾನ್ಯಗಳ ಉತ್ಪನ್ನಗಳ ತಯಾರಿಕೆಗಾಗಿ ಬೀಬಿಫಾತಿಮಾ ಮಹಿಳಾ ಸಂಘವನ್ನು ಸ್ಥಾಪಿಸಿದ್ದು, ಇದರ ರೂವಾರಿಗಳಾದ ಇವರು ಈ ಸಂಘದ ಸಾಧನೆಗಾಗಿ 2025 ನೇ ಸಾಲಿನ  ವಿಶ್ವಸಂಸ್ಥೆಯ ಈಕ್ವಿಡಿಟಿ ಇನಿಶಿಯೇಟಿವ್ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.

“ಈ ಪ್ರಶಸ್ತಿಗಾಗಿ 103 ದೇಶಗಳಿಂದ 700ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಸ್ಪರ್ಧಿಸಿದ್ದು ಅಂತಿಮವಾಗಿ ಬೀಬಿಫಾತಿಮಾ ಮಹಿಳಾ ಸಂಘಕ್ಕೆ ಜೀವವೈವಿಧ್ಯತೆಯ ನೋಬೆಲ್ ಪುರಸ್ಕಾರ ಲಭಿಸಿರುವುದು ಕರ್ನಾಟಕ ಮತ್ತು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ಡಾ. ಭೀಮೇಶ ಯರಡೋಣಿ ಅವರು, “ಮಹಿಳಾ ದಿನಾಚರಣೆಯ ಚಾರಿತ್ರಿಕ ಸನ್ನಿವೇಶಗಳನ್ನು ಸಾಂದರ್ಭಿಕವಾಗಿ ವಿವರಿಸುವುದರ ಜೊತೆಗೆ ಇಂದಿನ ಸ್ತ್ರೀವಾದಿ ಚಿಂತನೆಯ ಮುಖ್ಯ ಕೇಂದ್ರ ಪುರುಷನಾಗಿದ್ದು, ಗಂಡು ಮತ್ತು ಹೆಣ್ಣು ಎಂಬ ಭೇದಗಳನ್ನು ತೊಡೆದುಹಾಕಿ ನಾವೆಲ್ಲರೂ ಮನುಷ್ಯರಾಗಬೇಕಾದ ಜರೂರಿದೆ” ಎಂದು ಅಭಿಪ್ರಾಯಪಟ್ಟರು.

ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಅಪೂರ್ವ ಕೆ.ಎಚ್ ಇವರು ಮಾತನಾಡಿ, “ಭೂಮಿಯ ಮಾಲೀಕತ್ವ ಪುರುಷರಿಗಿದ್ದಾಗ ಅವರು ವಾಣಿಜ್ಯ ಬೆಳೆಗಳನ್ನು ಮತ್ತು ಸ್ತ್ರೀಯರಿಗಿದ್ದಾಗ ಸ್ತ್ರೀಯರು ಆಹಾರ ಬೆಳೆಗಳನ್ನು ಬೆಳೆಯಲು ಬಹುತೇಕ ಗಮನ ನೀಡುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅತ್ಯಂತ ಶೋಷಿತ ಜೀವಿ ಮಹಿಳೆ ಎಂಬುದನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಶ್ರೀ ಗಂಗಾಧರ  ಗುಮ್ಮಗೋಳಮಠ ಅವರು ಮಾತನಾಡಿ, “ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ, ಸ್ವಾವಲಂಬನೆ ಮತ್ತು ಜೀವನ ಸಂಗಾತಿಯ ಆಯ್ಕೆ ಬಹು ಮುಖ್ಯವಾದ ಘಟ್ಟಗಳಾಗಿವೆ. ಇವುಗಳನ್ನು ಪ್ರಜ್ಞಾ ಪೂರ್ವಕವಾಗಿ ಆಯ್ದುಕೊಳ್ಳುವ ಮೂಲಕ ಜೀವನವನ್ನು ಅತ್ಯುತ್ತಮವಾದ ಮಟ್ಟಕ್ಕೆ ಕೊಂಡೊಯ್ಯಬಹುದು” ಎಂದು ತಿಳಿಸಿದರು.

ವಿದ್ಯಾರ್ಥಿನಿಯರು ಪವಿತ್ರ ಗೌಡನಾಯ್ಕರ್ ಮತ್ತು ರಂಜಿತಾ ಹಿರೇಗೌಡ್ರು ಸ್ತ್ರೀ ಸಂವೇದನೆಯ ಕವಿತೆಗಳನ್ನು ವಾಚಿಸಿದರು. ವೇದಿಕೆಯ ಮೇಲೆ ಐಕ್ಯೂಎಸಿ ಮತ್ತು ಮಹಿಳಾ ವೇದಿಕೆ ಸಂಚಾಲಕರು ಶ್ರೀಮತಿ ಚೇತನ ಸಿಎನ್ ಹಾಗೂ ಸದಸ್ಯರು ಶ್ರೀಮತಿ ಸುನಂದಾ ಶರೇವಾಡ, ಡಾ. ಓಜರಬಿ  ನದಾಫ್ ಇದ್ದರು. ಕಾರ್ಯಕ್ರಮವನ್ನು ವಿಜಯಲಕ್ಷ್ಮಿ ಅಂಗಡಿ ನಿರೂಪಿಸಿದರು.  ಕವನ ಬೇವಿನಮರದ ಸ್ವಾಗತಸಿದರು. ನಿಂಗಪ್ಪ ಕಡೆಮನಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...