ಪಾಂಡವಪುರ | ನರಹಳ್ಳಿ ಜ್ಞಾನೇಶ್ ನುಡಿದಂತೆ ನಡೆದ ವ್ಯಕ್ತಿತ್ವ: ಶಾಸಕ ದರ್ಶನ್ ಪುಟ್ಟಣ್ಣಯ್ಯ

Date:

ಮಂಡ್ಯ ಜಿಲ್ಲೆ, ಪಾಂಡವಪುರ ಪಟ್ಟಣದ ತಾಲ್ಲೂಕು ಕನ್ನಡ ಸಾಹಿತ್ಯ ಭವನದಲ್ಲಿ ನರಹಳ್ಳಿ ಜ್ಞಾನೇಶ್ ಹಿತೈಷಿ ಬಳಗ ಆಯೋಜಿಸಿದ್ದ ‘ನರಹಳ್ಳಿ ಜ್ಞಾನೇಶ್ ನುಡಿನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಸಿನಿಮಾ, ರಂಗಭೂಮಿ, ಸಾಂಸ್ಕೃತಿಕ ಹಾಗು ರೈತ ಸಂಘಟನೆಯ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ನರಹಳ್ಳಿ ಜ್ಞಾನೇಶ್ ಏನೇ ಮಾಡಿದರು ವಿಭಿನ್ನವಾಗಿ ಮಾಡುತ್ತಿದ್ದರು. ನುಡಿದಂತೆ ನಡೆದು ತೋರಿಸಿದ ವ್ಯಕ್ತಿತ್ವ ಅವರದ್ದು ಎಂದು ಸ್ಮರಿಸಿದರು.

- Advertisement -

ಅರ್ಥಪೂರ್ಣ ನಾಟಕೋತ್ಸವಗಳ ಮೂಲಕ ಸಮಾಜಕ್ಕೆ ಸಂದೇಶ ಕೊಡುವ ಕೆಲಸ ಮಾಡಿದ್ದನ್ನು ಮರೆಯಲಾಗದು. ಪುಟ್ಟಣ್ಣಯ್ಯ ಅವರ ಜೊತೆಗೆ ಅಪಾರ ಒಡನಾಟ ಇಟ್ಟುಕೊಂಡಿದ್ದರು. ರೈತ ಹೋರಾಟ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮದೇ ಛಾಪು ಮೂಡಿಸಿದ್ದರು. ಅವರ ವಿರಾಮವಿಲ್ಲದ ದುಡಿಮೆಯೇ ಅವರ ಅಕಾಲಿಕ ಮರಣಕ್ಕೆ ಕಾರಣವಾಯಿತು ಅನಿಸುತ್ತದೆ. ಆದ್ದರಿಂದ, ಯುವಜನರು ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ ಯುವಪ್ರತಿಭೆಗಳು ಹೊಸ ಇತಿಹಾಸ ಬರೆದಿದ್ದಾರೆ. ಕೇವಲ ಕನಸುಗಳನ್ನಷ್ಟೇ ಹೊತ್ತೊಯ್ದಿದ್ದ ನಮ್ಮ ನಾಡಿನ ಪ್ರತಿಭೆಗಳು, ತಮ್ಮ ಬೆವರು, ಕಠಿಣ ಪರಿಶ್ರಮ ಹಾಗೂ...

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ...

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ...

ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಬಹುಮುಖ ಪ್ರತಿಭೆಯ ಜೊತೆಗೆ ಅತ್ಯುತ್ಸಾಹಿಯಾಗಿದ್ದ ನರಹಳ್ಳಿ ಜ್ಞಾನೇಶ್ ಅವರಲ್ಲಿ ಅಪಾರವಾದ ಸಾಮಾಜಿಕ ಕಳಕಳಿಯೂ ಇತ್ತು. ಹುಟ್ಟೂರಿನ ಬಗ್ಗೆ ಅಭಿಮಾನವೂ ಇತ್ತು. ಆ ಕಾರಣದಿಂದಲೇ ಪಾಂಡವಪುರದ ನೆಲದಲ್ಲಿ ಕಲೆ, ಸಾಹಿತ್ಯ, ಪರಿಸರ, ರಂಗಭೂಮಿ, ಸಂಸ್ಕೃತಿ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಂಡು, ಸಮಾಜ ಸೇವೆಯಲ್ಲಿ ನಿರತರಾಗುವ ಮೂಲಕ ಸ್ವಸ್ಥ್ಯ ಸಮಾಜದ ಕಟ್ಟುವುದಕ್ಕೆ ಅವಿರತ ಶ್ರಮಿಸಿದ ಯುವ ಚೇತನ ಎಂದು ಶ್ಲಾಘಿಸಿದರು.

ಸಿನಿಮಾ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಜ್ಞಾನೇಶ್, ಕಿರುಚಿತ್ರ, ಸಾಕ್ಷ್ಯಚಿತ್ರ, ಧಾರವಾಹಿ, ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರ ಜೊತೆಗೆ ಅವರ ಒಡನಾಟ ಗಮನಾರ್ಹವಾಗಿತ್ತು. ಸಜ್ಜನಿಕೆ ಮತ್ತು ವಿನಯಶೀಲ ಗುಣದ ಅವರು ಸದಾ ಸಮಾಜಮುಖಿ ಚಿಂತನೆಗಳ ಚಿಲುಮೆಯಾಗಿದ್ದ ಅಪರೂಪದ ವ್ಯಕ್ತಿತ್ವ ಹೊಂದಿದ್ದರು ಎಂದು ಬಣ್ಣಿಸಿದರು.

ವಿಚಾರವಾದಿ ಪ್ರೊ. ಕಾಳಚನ್ನೇಗೌಡ ಮಾತನಾಡಿ, ಮೈಸೂರಿನ ಪರಿಸರ ಬಳಗದಲ್ಲಿದ್ದ ಜ್ಞಾನೇಶ್ ಕಲ್ಯಾಣಿ ಸ್ವಚ್ಚತಾ ಕಾರ್ಯದಲ್ಲಿ ಪತ್ನಿಯ ಸಮೇತ ತೊಡಗಿಸಿಕೊಂಡಿದ್ದರು. ನಾಡಿನ ಸಾಹಿತ್ಯ ಲೋಕದಲ್ಲಿ ಜಿಲ್ಲೆಯ ಕವಿಗಳು ಸಾಕಷ್ಟಿದ್ದಾರೆ. ಆದರೆ, ಸಿನಿಮಾ ಕ್ಷೇತ್ರದಲ್ಲಿ ಕಡಿಮೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದ ಜ್ಞಾನೇಶ್ ಬದುಕಿದ್ದರೆ ಮತ್ತಷ್ಟು ಎತ್ತರಕೆ ಬೆಳೆಯಬಹುದಿತ್ತು. ಮಂಡ್ಯದ ಗ್ರಾಮೀಣ ಸೊಗಡಿನ ಅವರು ಕಲೆ ಮತ್ತು ಸಂಸ್ಕೃತಿ ಮೂಲಕ ಸಮಾಜ ಸೇವೆ ಮಾಡುತ್ತಿದ್ದ ನಿಸ್ವಾರ್ಥಿ ಎಂದು ಸ್ಮರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಮಾತನಾಡಿ, ಯಾರೇ ಆಗಲಿ ಹುಟ್ಟಿದೂರು, ಹೆತ್ತ ತಾಯಿಯ ಮರೆಯಬಾರದು. ಈ ಎರಡನ್ನೂ ಸದಾ ನೆನೆಯಬೇಕು. ಆದರೆ, ಸಮಾಜದಲ್ಲಿನ ತುಂಬ ಜನರು ತಮ್ಮ ಊರಿನ ಹೆಸರನ್ನು ಎಲ್ಲೂ ಹೇಳುವುದಿಲ್ಲ. ಆದರೆ, ಪುಟ್ಟ ಊರಾದ ನರಹಳ್ಳಿಯನ್ನು ಸಾಹಿತಿ ಬಾಲಸುಬ್ರಹ್ಮಣ್ಯ ಅವರ ರೀತಿಯಲ್ಲಿ ಜ್ಞಾನೇಶ್ ಸೇರಿಸಿಕೊಂಡು ತಮ್ಮ ಹುಟ್ಟೂರಿನ ಅಭಿಮಾನ ಮೆರೆದವರು. ಆ ಮೂಲಕ ಊರನ್ನು ಮುಂದೆ ತಂದವರು. ರೈತ ನಾಯಕ ಪುಟ್ಟಣ್ಣಯ್ಯವ ನೆನಪಿನಲ್ಲಿ ರಂಗನಮನ ಯಶಸ್ವಿಯಾಗಿಸಿದ್ದ ಜ್ಞಾನೇಶ್ ಅಗಲಿಕೆ ತುಂಬಲಾರದ ನಷ್ಟ ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಸಂವಿಧಾನದ ಮೂಲ ಉದ್ದೇಶ-ಆಶಯವನ್ನು ಯುವಜನತೆ ಮರೆಯಬಾರದು: ಬಾಬುರಾಜ್ ಪಲ್ಲದನ್

ಮೈಸೂರಿನ ಪರಿಸರ ಬಳಗದ ಮುಖಂಡ ಪರುಶರಾಮೇಗೌಡ, ವಿನ್ಯಾಸಕಾರ ಪ್ರಕಾಶ್ ಚಿಕ್ಕಪಾಳ್ಯ, ರಂಗಕರ್ಮಿ ಚಂದ್ರು, ಸಿನಿಮಾ ನಿರ್ದೇಶಕ ಜೆ.ಬಿ. ಸಿದ್ದೇಗೌಡ, ಶ್ರೀನಿವಾಸ ಶೆಟ್ಟಿ, ಸಿನಿಮಾ ಸಂಭಾಷಣಕಾರ ಸಿದ್ದು ಪ್ರಸನ್ನ, ಕಲಾವಿದ ಅಮಿತ್ ಕೃಷ್ಣ, ನಿವೃತ್ತ ಮುಖ್ಯ ಶಿಕ್ಷಕ ಶಿವರಾಜ್, ಅಧ್ಯಾಪಕ ಮಾಣಿಕ್ಯನಹಳ್ಳಿ ಜಯರಾಮ್, ತಾಲ್ಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ನರಹಳ್ಳಿ ಜ್ಞಾನೇಶ್ ಪತ್ನಿ ಕೋಕಿಲಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಟಿ. ಗೋವಿಂದೇಗೌಡ, ಉಪನ್ಯಾಸಕಿ ಉಷಾರಾಣಿ, ಕವಿ ಚಂದ್ರಶೇಖರಯ್ಯ, ಕಲಾವಿದ ಪ. ನಂಜುಂಡಸ್ವಾಮಿ ಮತ್ತಿತರರು ಸೇರಿದಂತೆ ರೈತ ಸಂಘದ ಮುಖಂಡರು, ಕಾರ್ಯಕರ್ತರು, ನರಹಳ್ಳಿ ಗ್ರಾಮಸ್ಥರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಿನ್ನಿಸ್‌ ಸೇರಿದ ʻಮಾಂಡ್ ಸೊಭಾಣ್‌ʼ ಕೊಂಕಣಿ ಸಂಸ್ಕೃತಿಯ ವಿಜಯ: ಡಾ. ರೊನಾಲ್ಡ್ ಕೊಲಾಸೊ

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನದ ಅಂಗವಾಗಿ 'ಬಹು ಗಾಯಕರ...

ಮಳವಳ್ಳಿ | ವಿಷಮುಕ್ತ ಭೂಮಿಗೆ ಸಾವಯವ ಕೃಷಿ ಅನುಸರಿಸಿ: ಕೃಷಿಕರ ಸಂಘ ಮನವಿ

ಸಂಪೂರ್ಣ ಸಾವಯವ ಕೃಷಿಕರ ಸಂಘದ ವತಿಯಿಂದ ಮಳವಳ್ಳಿಯ, ಸಾತೇನಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ...

ಹಾಸನ | ಕಾಡಾನೆ ದಾಳಿ: ಕಾರ್ಮಿಕ ಸಾವು; ಗ್ರಾಮಸ್ಥರ ಆಕ್ರೋಶ 

ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ವ್ಯಕ್ತಿ ಸಾವನಪ್ಪಿರುವ ಘಟನೆ ನಡೆದಿದೆ....

ಹಾವೇರಿ | ಟ್ರಾಕ್ಟರ್ ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಟ್ರಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ...