ಬೀದರ್ | ಒಳ್ಳೆಯ ಮನುಷ್ಯನಾಗಲು ಓದಿನ ಅಗತ್ಯವಿದೆ : ಡಾ.ಶಿವಾಜಿ ಮೇತ್ರೆ

Date:

ಶಿಕ್ಷಣ ಒಳ್ಳೆಯ ಮನುಷ್ಯನನ್ನಾಗಿಸುತ್ತದೆ. ಓದುವುದು ಎಂದರೆ ಜ್ಞಾನ ಪಡೆಯುವ ದಾರಿಯಾಗಿದೆ. ಸಮಾಜದ ಒಳಿತಿಗಾಗಿ ಬಳಕೆಯಾಗಿರುವುದನ್ನೇ ಜ್ಞಾನವೆನ್ನುತಾರೆ ಎಂದು ಕಲಬುರ್ಗಿಯ ಎನ್.ವಿ. ಕಾಲೇಜು ಪ್ರಾಧ್ಯಾಪಕ ಡಾ. ಶಿವಾಜಿ ಮೇತ್ರೆ ಅಭಿಪ್ರಾಯಪಟ್ಟರು.

ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ʼಓದುವ ಬಗೆಗಳು: ಒಂದು ಚಿಂತನೆʼ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪಠ್ಯ ಕೃತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು, ಸಮಾಜವನ್ನು ರೂಪಿಸುವ ಶಕ್ತಿ ಪಡೆದಿವೆ’ ಎಂದರು.

ʼಇಡೀ ಬದುಕು ವ್ಯವಹಾರವಲ್ಲ. ಬದುಕಿನಲ್ಲಿ ಎಷ್ಟೇ ನಷ್ಟವಾದರೂ ಅದನ್ನು ಎದುರಿಸುವ, ಭರಿಸುವ ದಾರಿಯು ಜ್ಞಾನ ಪರಂಪರೆಯಲ್ಲಿ ಅಡಗಿದೆ. ಮಾನವನಾಗುವ ಗುಣಗಳನ್ನು ಬಿತ್ತುವ ಕೆಲಸ ಶಿಕ್ಷಣದಿಂದ ನಡೆಯುತ್ತದೆ. ಎಲ್ಲವನ್ನು ಪ್ರಶ್ನಿಸುವ ಸಾಮರ್ಥ್ಯ, ಹಲವು ಅರ್ಥಗಳನ್ನು ಕಂಡುಕೊಳ್ಳುವ ಪ್ರಮೆಯು ಓದಿನಲ್ಲಿದೆ. ಪ್ರತಿ ವಿಷಯದ ಮೂಲ ಅರಿಯಲು ದೊಡ್ಡ ಲೇಖಕರ ಕೃತಿ ಓದುವ ಅಗತ್ಯವಿದೆ. ಸಾಹಿತ್ಯದಿಂದ ವಿವೇಕವನ್ನು , ವಿಜ್ಞಾನದಿಂದ ಪರೀಕ್ಷಣೆಯ ಗುಣವನ್ನು ಬೆಳೆಯುತ್ತದೆ. ಭಾವ ಕೇಂದ್ರಿತವಾದ ಸಾಹಿತ್ಯ ಮತ್ತು ವಾಸ್ತವ ಕೇಂದ್ರೀತ ವಿಜ್ಞಾನ ಎರಡು ಮುಖ್ಯ’ ಎಂದು ವಿಶ್ಲೇಷಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಓದುವುದೆಂದರೆ ನಮ್ಮ ಅರಿವಿನ ಹರವು :

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ‘ಓದುವುದೆಂದರೆ ನಮ್ಮ ಅರಿವಿನ ಹರವು, ತಿಳುವಳಿಕೆಯ ಹಾಗೂ ಪ್ರಜ್ಞೆಯ ವಿಸ್ತಾರ ಎಂದರ್ಥ. ಪ್ರತಿ ಓದು ಹೊಸ ಜಗತ್ತಿನ ಹಾಗೂ ಹೊಸ ಅನುಭವ ಲೋಕದ ಪಯಣವಾಗಿದೆ. ಸಿನಿಮಾ, ಸಾಹಿತ್ಯ ಕೃತಿ, ಕಲಾಕೃತಿ ಮತ್ತು ಸಮಾಜವನ್ನು ಪಠ್ಯವಾಗಿ ಅನುಸಂಧಾನ ಮಾಡಿದಾಗ ಅವುಗಳ ಸಾಂಸ್ಕೃತಿಕ ಚಹೆರೆಗಳು ಕಾಣುತ್ತವೆ’ ಎಂದರು.

‘ಒಂದು ನಿರ್ದಿಷ್ಟ ಲೋಕದೃಷ್ಠಿ ರೂಪಿಸುವ, ನೀತಿ-ಅನೀತಿಗಳ ಸೀಮೆಯನ್ನು ತಿಳಿಸುವ, ಸೃಷ್ಟಿಯ ಅಗಮ್ಯ ಮತ್ತು ನಿಗೂಢತೆಗಳ ಅರಿವು ಗಂಭೀರ ಓದಿನಿಂದ ಸಾಧ್ಯ. ಆರ್ಥಿಕ ಸ್ವರೂಪದ ಬಗೆಗೆ, ಉತ್ಪಾದನಾ ಚಟುವಟಿಕೆಗಳ ಭೂಮಿಕೆಯ ಬಗೆಗೆ, ಸಾಮಾಜಿಕ, ರಾಜಕೀಯ ವಲಯದ ಪ್ರಜ್ಞೆ ಪ್ರಭಾವವನ್ನು ಅರುಹಿಸುವ ಶಕ್ತಿ ಓದಿಗಿದೆ. ಒಂದು ಕೃತಿಯ ಬಹುಮುಖತ್ವವನ್ನು ಗ್ರಹಿಸುವ ಪ್ರಕ್ರಿಯೆ ಓದುವುದರಿಂದ ಆಗುತ್ತದೆ. ತೆರೆದ ಪಠ್ಯಗಳನ್ನು ಮುಕ್ತವಾದ ಮತ್ತು ನಿಕಟ ಓದಿನಿಂದ ಹೊಸ ಅರ್ಥಗಳನ್ನು ಕಂಡುಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಮಾತನಾಡಿ, ‘ನಮ್ಮ ಭಾಗದ ಮಕ್ಕಳು ಹೆಚ್ಚು ಓದಿ ಉನ್ನತ ಹುದ್ದೆಗಳು ಪಡೆದರೆ ಈ ಭಾಗದ ಎಲ್ಲಾ ವಲಯಗಳಲ್ಲಿ ಅಭಿವೃದ್ಧಿಯಾಗುತ್ತದೆ’ ಎಂದರು.

ಈ ಸುದ್ದಿ ಓದಿದ್ದೀರಾ? ಗುಲಬರ್ಗಾ ವಿಶ್ವವಿದ್ಯಾಲಯ ಘಟಿಕೋತ್ಸವ : ದಲಿತ ಕಾರ್ಮಿಕನ ಮಗನಿಗೆ ಎರಡು ಚಿನ್ನದ ಪದಕ

ಕಾರ್ಯಕ್ರಮದಲ್ಲಿ ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಶ್ರೀ ಬಸವೇಶ್ವರ ಪಿಜಿ ಕಾಲೇಜು ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ, ಅಶೋಕರೆಡ್ಡಿ ಗದಲೆಗಾಂವ, ವಿವೇಕಾನಂದ ಶಿಂಧೆ, ಶ್ರೀನಿವಾಸ ಉಮಾಪೂರೆ, ಪ್ರವೀಣ ಬಿರಾದಾರ, ನೀಲಮ್ಮ ಮೇತ್ರೆ, ಸಚಿನ ಬಿಡವೆ, ಸೌಮ್ಯಾ ಕರಿಗೌಡ, ರೋಶನ್ ಬಿ, ಗುರುದೇವಿ ಕಿಚಡೆ, ಗಂಗಾಧರ ಸಾಲಿಮಠ, ಪ್ರಭಾಕರ ನೌಗಿರೆ, ಬಸವರಾಜ ಗುಂಗೆ, ಸುಧೀರ ಗೋದೆ, ಪವನ ಪಾಟೀಲ, ಜಗದೇವಿ ಜವಳಗೆ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚನ್ನಬಸಪ್ಪ ಗೌರ ಸ್ವಾಗತಿಸಿದರು. ಡಾ.ಬಸವರಾಜ ಖಂಡಾಳೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಸೆ. 15ಕ್ಕೆ ಪ್ರಜಾಪ್ರಭುತ್ವ ದಿನ; ಅಧಿಕಾರಿಗಳು ಪಾಲ್ಗೊಳ್ಳುವುದು ಕಡ್ಡಾಯ: ಸಂತೋಷ್ ಲಾಡ್

ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು 'ಪ್ರಜಾಪ್ರಭುತ್ವ ದಿನ'ವನ್ನು ವಿಶೇಷವಾಗಿ ಆಚರಿಸಲು...

ರಾಯಚೂರು | ಒಳ ಮೀಸಲಾತಿ ಅನುಷ್ಠಾನಕ್ಕೆ ನಿರ್ಲಕ್ಷ್ಯ: ಸೆ.12ರಂದು ರಾಜ್ಯಾದ್ಯಂತ ತಮಟೆ ಚಳವಳಿ

ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ತೀರ್ಪು...

ಮಂಡ್ಯ | ಸೆ.8ರಂದು ಪೂರ್ಣಚಂದ್ರ ತೇಜಸ್ವಿ-86 ರ ‘ಕಾಡು ಹಕ್ಕಿಯ ನೆನಪಲ್ಲಿ ಒಂದು ದಿನ’ ಕಾರ್ಯಕ್ರಮ

ಚಿತ್ರಕೂಟ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 'ಪೂರ್ಣಚಂದ್ರ...