ಗದಗ | ಬೆಳೆಗಳಿಗೆ ರಾಸಾಯನಿಕ ಸಿಂಪಡಿಸಲು ಡ್ರೋನ್‌ ತಂತ್ರಜ್ಞಾನ: ಪ್ರಾತ್ಯಕ್ಷಿಕೆಗೆ ಮುಂದಾದ ಕೆವಿಕೆ

Date:

ರೈತರು ತಮ್ಮ ಹೊಲದಲ್ಲಿ ಬೆಳೆದ ಕೃಷಿ ಬೆಳೆಗಳು ಕೀಟ-ರೋಗ ಬಾಧೆಗಳಿಗೆ ಒಳಗಾದ ಬೆಳೆಗಳು ನಲುಗಿ ಉತ್ತಮ ಇಳುವರಿ ಕೊಡದೆ ರೈತರು ಆರ್ಥಿಕ ನಷ್ಟ ಅನುಭವಿಸುತ್ತಾರೆ. ಈ ನಷ್ಟವನ್ನು ತಡೆಗಟ್ಟಲು ಸಮಯಕ್ಕೆ ಸರಿಯಾಗಿ ರಾಸಾಯನಿಕ ಔಷಧಿಗಳನ್ನು ಸಿಂಪಡಿಸಲು ಡ್ರೋನ್‌ ತಂತ್ರಜ್ಞಾನ ಬಳಸುವುದನ್ನು ಕೆ ಎಚ್ ಪಾಟಿಲ್ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಲಾಗಿದೆ.

- Advertisement -

ಗದಗ ತಾಲೂಕಿನ ಬೆಳದಡಿ ಬ್ರಹ್ಮಾನಂದಪುರ, ನಾಗಾವಿ ಗ್ರಾಮಗಳು ಹಾಗೂ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ಹಾಗೂ ಶಿವಾಜಿನಗರ ಗ್ರಾಮಗಳಲ್ಲಿ ವಿವಿಧ ಬೆಳೆಗಳಾದ ಕುಸುಬೆ, ಕಡಲೆ, ಹಿಂಗಾರಿ ಜೋಳ ಹಾಗೂ ಹೂವಿನ ಬೆಳೆಗಳಲ್ಲಿ ಕೀಟ ರೋಗ ಬಾಧೆ ತಡೆಗಟ್ಟಲು ಡ್ರೋನ್ ಸಹಾಯದಿಂದ ಔಷಧಿ ಸಿಂಪಡಿಸಲು ರೈತರು ಸಜ್ಜಾಗುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...

ಗದಗ ಜಿಲ್ಲೆಯ ಹುಲಕೋಟಿಯ ಕೆ ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯಗಳ ಸಂಯುಕ್ತಾಶ್ರಯದಲ್ಲಿ ಡೋನ್ ಯಂತ್ರದ ಪ್ರಾತ್ಯಕ್ಷಿಕೆಯನ್ನು ಮೂರು ದಿನಗಳ ಕಾಲ ಒಟ್ಟು 6 ಗ್ರಾಮಗಳ 140ಕ್ಕೂ ಅಧಿಕ ಮಂದಿ ರೈತರಿಗೆ ನೀಡಿದ್ದಾರೆ.

ಕೃಷಿ ಬೆಳೆಗಳಲ್ಲಿ ಕೀಟ-ರೋಗ ಬಾಧೆ ತಡೆಗಟ್ಟಲು ರಾಸಾಯನಿಕ ಔಷಧಿಗಳನ್ನು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಸಿಂಪಡಣೆ ಮಾಡುವ ಪ್ರಕ್ರಿಯೆ ತುಂಬಾ ಮುಖ್ಯವಾಗಿದ್ದು, ಸಮಯಕ್ಕೆ ಸರಿಯಾಗಿ ಸಿಂಪಡಣೆ ಕೈಗೊಳ್ಳದೇ ಹೋದರೆ ಸಸ್ಯದ ಆರೋಗ್ಯ ನಶಿಸಿ, ಸುಮಾರು ಶೇ.20-30ರಷ್ಟು ಇಳುವರಿ ಕುಂಠಿತವಾಗುತ್ತದೆ.

1002644180

ಗದಗ ಜಿಲ್ಲೆಯ ಕ್ಷೇತ್ರ ಬೆಳೆಗಳಾದ ಹೆಸರು, ಗೋವಿನಜೋಳ, ಹತ್ತಿ, ಶೇಂಗಾ, ಕಡಲೆ, ಕುಸುಬೆ ಹಾಗೂ ಜೋಳ ಇವುಗಳಲ್ಲಿ ರಸ ಹೀರುವ ಕೀಟಗಳು, ಎಲೆ, ಕಾಂಡ ಮತ್ತು ತೆನೆ/ಕಾಯಿ ತಿನ್ನುವ ಕೀಟಗಳು ಹಾಗೂ ದುಂಡಾಣು, ನಂಜಾಣು ಮತ್ತು ಶಿಲೀಂಧ್ರಗಳಿಂದ ಬರುವ ವಿವಿಧ ರೋಗಗಳು ಸರ್ವೇ ಸಾಮಾನ್ಯ. ಈ ಬಾಧೆಗಳನ್ನು ಹತೋಟಿ ಮಾಡಲು ರೈತ ಬಾಂಧವರು ಎಕರೆಗೆ ಸುಮಾರು ₹1200 ರಿಂದ ₹2500ದವರೆಗೆ ಕೇವಲ ರಸಾಯನಿಕ ಪರಿಕರಗಳ ಖರೀದಿಗಾಗಿ ಖರ್ಚು ಮಾಡುತ್ತಾರೆ. ಇನ್ನು ಈ ರಾಸಾಯನಿಕಗಳನ್ನು ಸಿಂಪಡಿಸಲು ಕೂಲಿಯಾಳುಗಳಿಗೆ ದಿನಕ್ಕೆ ಸುಮಾರು ₹400ಗಳಷ್ಟು ಕೂಲಿ ಕೊಡಬೇಕಾಗುತ್ತದೆ.

ಎತ್ತರ ಬೆಳೆದ ಬೆಳೆಗೆ ರಾಸಾಯನಿಕ ಸಿಂಪಡಣೆಗೆ ಕಷ್ಟ

ರಾಸಾಯನಿಕಗಳನ್ನು ಸಿಂಪಡಿಸಲು ಬಳಸುವ ಬ್ಯಾಟರಿ ಹಾಗೂ ಎಂಜಿನ್ ಚಾಲಿತ ನ್ಯಾಪ್‌ಸ್ಯಾಕ್ ಸಿಂಪಡಣಾ ಯಂತ್ರಗಳು ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದರೆ, ಟ್ರ್ಯಾಕ್ಟರ್ ಚಾಲಿತ ಯಂತ್ರಗಳು ದೊಡ್ಡ ಹಿಡುವಳಿದಾರರಿಗೆ ಸರಿಹೊಂದುತ್ತವೆ. ಒಂದನೇ ಹಂತದ ಸಿಂಪಡಣೆಗೆ ರೈತರು ಈ ಯಂತ್ರಗಳನ್ನು ಉಪಯೋಗಿಸುತ್ತಿದ್ದರೂ, ಎರಡನೇ ಹಂತದ ಸಿಂಪಡಣೆಯ ವೇಳೆಗೆ. ಬೆಳೆಗಳು ಹೆಚ್ಚು ಎತ್ತರಕ್ಕೆ ಬೆಳೆದು ನಿಂತಾಗ, ಕೂಲಿಯಾಳುಗಳಿಂದ ಅಥವಾ ಟ್ರ್ಯಾಕ್ಟರ್ ಚಾಲಿತ ಯಂತ್ರಗಳಿಂದ ಸಿಂಪಡಣಾ ಕಾರ್ಯ ಕೈಗೊಳ್ಳುವುದು ಕಷ್ಟವಾಗುತ್ತದೆ.

ಅಪಾಯಕಾರಿ ರಾಸಾಯನಿಕಗಳು:

ರೈತರು ಬೆಳೆದ ಬೆಳೆಗಳಿಗೆ ಕೂಲಿಯಾಳುಗಳು ರಾಸಾಯನಿಕ ಸಿಂಪಡಣೆ ಮಾಡುವಾಗ ಅಪಾಯಕಾರಿ ರಾಸಾಯನಿಕಗಳು ದೇಹ ಸೇರುವ ಸಂಭವವಿರುತ್ತದೆ. ಒಂದು ಸಮೀಕ್ಷೆಯ ಪ್ರಕಾರ ಬೆಳೆಗಳಿಗೆ ಸಿಂಪಡಿಸುವ ರಾಸಾಯನಿಕಗಳ ಸಂಪರ್ಕದಿಂದ ರೈತರು ಹಾಗೂ ಕೂಲಿಯಾಳುಗಳು ಸುಮಾರು 46 ಬಗೆಯ ವಿನಾಶಕಾರಿ ರೋಗಗಳಿಗೆ ತುತ್ತಾಗುತ್ತಾರೆ.

ರೈತರು ಬೆಳೆಗಳಿಗೆ ರಸಾಯನಿಕಗಳ್ಳನ್ನು ಸಿಂಪಡಣೆ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಲು ಹಾಗೂ ಸಿಂಪಡಣಾ ಕಾರ್ಯದ ದಕ್ಷತೆಯನ್ನು ಹೆಚ್ಚಿಸಲು ಡ್ರೋ ತಂತ್ರಜ್ಞಾನವು ರೈತರ ಪಾಲಿಗೆ ವರವಾಗಿ ಬಂದಿದೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಡೋನ್ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿ ಕ್ಷೇತ್ರದಲ್ಲಿ ರಸಾಯನಿಕಗಳ ಸಿಂಪರಣೆಗೆ ಹೆಚ್ಚಾಗಿ ಈ ಯಂತ್ರಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಆಕಾಶದಲ್ಲಿ ಹಾರುತ್ತಾ ಕಾರ್ಯನಿರ್ವಹಿಸುವ ಡೋನ್ ಗಳನ್ನು ನುರಿತ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಅನುಮೋದಿತ ರಿಮೋಟ ಪೈಲಟ್ ಪರವಾನಗಿ ಪಡೆದ ಚಾಲಕರು ನಿಯಂತ್ರಿಸುವರು” ಎಂದು ಕೆವಿಕೆ ವಿಜ್ಞಾನಿಗಳು ಹೇಳುವರು.

ಹದಿನೈದು ನಿಮಿಷದಲ್ಲಿ ಒಂದು ಎಕರೆಗೆ ಔಷಧಿ ಸಿಂಪಡಣೆ:

ಡ್ರೋನ್ ಸಿಂಪಡಣಾ ಯಂತ್ರವು ಕೇವಲ 15 ನಿಮಿಷಗಳಲ್ಲಿ 1 ಎಕರೆಯಷ್ಟು ಜಮೀನಿನಲ್ಲಿ ಸಿಂಪಡಣೆ ಕೈಗೊಳ್ಳುತ್ತದೆ. ಮಾನವ ಚಾಲಿತ ಯಂತ್ರಗಳಿಗೆ ಹೋಲಿಸಿದಾಗ ಶೇ.80ಕ್ಕೂ ಹೆಚ್ಚು ಸಮಯ ಉಳಿತಾಯವಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಸುಮಾರು ಶೇ.20 ರಿಂದ 50ರಷ್ಟು ರಸಾಯನಿಕಗಳ ಉಳಿತಾಯವೂ ಆಗುತ್ತದೆ.

ಇದನ್ನೂ ಓದಿದ್ದೀರಾ? ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆ ಹಾನಿ: ಒಣದ್ರಾಕ್ಷಿ ರಫ್ತು ಸ್ಥಗಿತ, ಸಾಲದ ಶೂಲಕ್ಕೆ ರೈತ

ಈ ದಿನ.ಕಾಮ್ ಜತೆಗೆ ಹುಲಕೋಟಿಯ ಕೆ ಎಚ್ ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ಮಾತನಾಡಿ, “ದೇಶದಲ್ಲಿ ಕೃಷಿ ಯಾಂತ್ರೀಕರಣವು ಒಳ್ಳೆಯ ಪ್ರಗತಿ ಸಾಧಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಅದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ದಿನಗಳಲ್ಲಿ ಸಿಂಪಡಣಾ ಕಾರ್ಯಕ್ಕೆ ಡ್ರೋನ್ ಯಂತ್ರದ ಬಳಕೆಯು ಮನೆಮಾತಾಗಲಿದೆ. ಈ ನಿಟ್ಟಿನಲ್ಲಿ ಸಮರ್ಪಕ, ಸಂಶೋಧನೆಗಳನ್ನು ಕೈಗೊಂಡು ಈ ಹೊಸ ತಂತಜ್ಞಾನವನ್ನು ರೈತರ ಕೈಗೆಟುಕುವಂತಾಗಬೇಕು” ಎಂದು ಹೇಳಿದರು.

ಬೆಳಧಡಿ ಗ್ರಾಮದ ಪ್ರಗತಿಪರ ರೈತ ನೂರಪ್ಪ ಪೂಜಾರ ಮಾತನಾಡಿ, “ಮುಂದಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಇನ್ನೂ ಉಲ್ಬಣವಾಗಲಿದ್ದು, ಈ ಹೊಸ ತಂತ್ರಜ್ಞಾನವು ರೈತರ ಕೈಗೆಟುಕಲು ಹೋಬಳಿ ಮಟ್ಟಗಳಲ್ಲಿ ಡ್ರೋನ್‌ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸಬೇಕು. ಇದರಿಂದ ರೈತರು ಹೆಚ್ಚು ಮಳೆಯಾದ ಸಂದರ್ಭಗಳಲ್ಲಿ ಅಥವಾ ಕೂಲಿಯಾಳುಗಳ ಅಭಾವದಲ್ಲಿ ಡ್ರೋನ್ ಮೂಲಕ ಸಿಂಪಡಣೆ ಮಾಡಿಸಲು ಅನುಕೂಲವಾಗುತ್ತದೆ” ಎಂದು ಹೇಳಿದರು.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಟಿಯು ವಾರ್ಷಿಕ ಘಟಿಕೋತ್ಸವ: ಉತ್ತರ ಕನ್ನಡದ ಪ್ರತಿಭೆಗಳಿಗೆ ರಾಜ್ಯಮಟ್ಟದ ಗರಿ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಉತ್ತರ ಕನ್ನಡ ಜಿಲ್ಲೆಯ...

ಕೊಡಗು ವಿವಿ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ್‌ಗೆ ಪ್ರತಿಷ್ಠಿತ ‘ದಿ AGRI100-2026’ ಪ್ರಶಸ್ತಿ

ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ್ ಸಂಗಪ್ಪ ಅಲೂರ್ ಅವರು ಭಾರತದ...

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್‌ಗಳ ಸರಣಿ ಸ್ಫೋಟ

ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಭಾರೀ ಅನಾಹುತ‌ವೊಂದು ತಪ್ಪಿದೆ. ಕಗ್ಗದಾಸಪುರದ...