ಕೇಂದ್ರ ಸಚಿವರು ಎಚ್. ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಶಾಸಕ ಪ್ರದೀಪ್ ಈಶ್ವರವರಿಗೆ ಗದಗ ಜಿಲ್ಲಾ ಯುವ ಜನತಾದಳ ವತಿಯಿಂದ ಖಂಡಿಸಿ ಎಚ್ಚರಿಕೆ ನೀಡಿದರು.
ಗದಗ ಪಟ್ಟಣದಲ್ಲಿ ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷರು ದೇವಪ್ಪ ಈ ಮಲ್ಲಸಮುದ್ರರವರು ಮಾತನಾಡಿ, “ನಾಡು ಕಂಡಂತ ಧೀಮಂತ ನಾಯಕರು ಎಚ್ ಡಿ ಕುಮಾರಣ್ಣವರು ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದರೆ ಜೆಡಿಎಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ. ಮಾತು ಎತ್ತಿದರೆ ನಾನು ಓಬಿಸಿ ನಾಯಕರೆಂದು ಓಬಿಸಿ ಜನಾಂಗದವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ” ಎಂದ ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ಕರ್ನಾಟಕದಲ್ಲಿ 224 ಕ್ಷೇತ್ರದ ಶಾಸಕರಲ್ಲಿ ಕುಮಾರಣ್ಣನವರ ಚೀಲಾಗಳನ್ನು ಬಿಟ್ಟು ನನಗೆ ಬೆದರಿಕೆ ಒಡ್ಡುತ್ತಾರೆಂದು ಹೇಳುತ್ತೀರುವ ಅವರು ಕುಮಾರಣ್ಣ ಅವರಿಗೆ ಚೀಲಾಗಳ ಅವಶ್ಯಕತೆ ಇಲ್ಲ. ಯಾಕೆಂದರೆ ಅವರದೇ ಆದಂತ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಅವರನ್ನು ದೇವರೆಂದು ಪೂಜಿಸುವಂತಹ ಅಭಿಮಾನಿಗಳಿದ್ದಾರೆ” ಎಂದರು.
ಶಾಸಕರಾಧ ಪ್ರದೀಪ್ ಈಶ್ವರ ಅವರು ಸಹ ಕುಮಾರಣ್ಣವರ ಮುಂದೆ ಹೋದರೆ ಇವರಂತೆ ಕಾಂಗ್ರೆಸ್ ಚೀಲಾ ಎಂದು ಹೇಳುವ ಕೀಳು ಭಾವನೆ ಹೊಂದಿಲ್ಲ. ಹೊರತಾಗಿ ಬ್ರದರ್ ಎಂದು ಕರೆಯುವಂತಹ ಧೀಮಂತ ನಾಯಕರು ಕುಮಾರಸ್ವಾಮಿಯವರು. ಇಂತಹವರ ಬಗ್ಗೆ ಲಘುವಾಗಿ ಮಾತನಾಡುವುದು ಹಾಗೂ ತೋಳು ತಟ್ಟುವುದು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ತಪ್ಪು. ಇಂಥ ನೀಚ ರಾಜಕಾರಣವನ್ನು ಬಿಟ್ಟು ತಾವೊಬ್ಬ ಶಾಸಕರಾಗಿದ್ದರಿಂದ ಓಬಿಸಿ ಅಂತಾ ಎನ್ನದೇ ಸರ್ವ ಜನಾಂಗದವರ ಕೆಲಸಗಳನ್ನು ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡಿ, ಜನರ ಸೇವೆಯನ್ನು ಮಾಡಿ, ಅದನ್ನು ಬಿಟ್ಟು ಬಾಯಿಚಪಲಕ್ಕಾಗಿ ಅಥವಾ ಯಾರನ್ನೋ ಮೆಚ್ಚಿಸಲು ಎಚ್. ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುವುದನ್ನು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಖುರ್ಸಿದಅಹ್ಮದ್ ಡಾಲಾಯತ್, ರಮೇಶ್ ಹುಣಸಿಮರದ್, ರಾಜಣ್ಣ ಸಂಶಿ, ಎಂ ಎಸ್ ಪರ್ವತ ಗೌಡ ಸಂತೋಷ್ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




