“ಶಿಕ್ಷಿಸು, ಸಂಘಟಿಸು, ಹೋರಾಟ ಮಾಡು ಎಂಬುದು ಅಂಬೇಡ್ಕರ ಅವರು ಸಮಾಜಕ್ಕೆ ಕೊಟ್ಟ ಕರೆಯಾಗಿದೆ. ಉತ್ತಮ ಸಮಾಜಕ್ಕೆ ನಾವೆಲ್ಲರೂ ಸೇರಿ ಪೆರಿಯಾರ್, ಅಂಬೇಡ್ಕರ್, ಪುಲೆ ಅವರ ಸಿದ್ಧಾಂತದಲ್ಲಿ ಸಮ ಸಮಾಜ ಕಟ್ಟಿದರೇ, ಉತ್ತಮ ಸಮಾಜ ನಿರ್ಮಿಸಲು ಸಾಧ್ಯ” ಎಂದು ಚೇತನ ಅಂಹಿಸಾ ಅವರು ಕರೆ ನೀಡಿದರು.
ಗದಗ ಪಟ್ಟಣದ ಬಾಬು ಜಗಜೀವನ್ ರಾವ್ ಸಭಾ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶಿವನಾಂದ ತಮ್ಮನ್ನನವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಂಬೇಡ್ಕರ್, ಪುಲೇ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅಂಹಿಸಾ ಚೇತನ್ ಮಾತನಾಡಿದರು.
“ಬಿ.ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯು ಪ್ರತಿಭಾ ಪುರಸ್ಕಾರ, ಶಿಕ್ಷಣದ ಜಾಗೃತಿ, ಅಂಬೇಡ್ಕರ್ ಪುಲೆ, ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು ಬಹಳ ಸಂತೋಷವಾಗಿದೆ” ಎಂದರು.
“ನಿಸ್ವಾರ್ಥವಾಗಿ ಸಮ ಸಮಾಜಕ್ಕೆದುಡಿಯುವವರು ನಮಗೆ ಮಾರ್ಗದರ್ಶಕರು ಆಗಬೇಕು. ಅಂಬೇಡ್ಕರ್, ಪುಲೆ ಅವರು ಹೇಗೆ ಸಮಾಜಕ್ಕೆ ಕೊಡುಗೆ ಕೊಟ್ಟಿರುವರೋ ಅದೇ ರೀತಿಯಲ್ಲಿ ನಾವು ಸಮಾಜಕ್ಕೆ ಕೊಡುಗೆ ನೀಡಬೇಕು” ಎಂದು ಯುವಕರಿಗೆ ಕರೆ ನೀಡಿದರು.

“ಶಿಕ್ಷಿಸು, ಸಂಘಟಿಸು, ಹೋರಾಟ ಮಾಡು ಎಂಬುದು ಅಂಬೇಡ್ಕರ ಅವರು ಸಮಾಜಕ್ಕೆ ಕೊಟ್ಟ ಕರೆಯಾಗಿದೆ. ಉತ್ತಮ ಸಮಾಜಕ್ಕೆ ನಾವೆಲ್ಲರೂ ಸೇರಿ ಪುಲೇ, ಪೆರಿಯಾರ್, ಅಂಬೇಡ್ಕರ ಅವರ ಸಿದ್ಧಾಂತದಲ್ಲಿ ಸಮ ಸಮಾಜ ಕಟ್ಟಿದರೇ, ಉತ್ತಮ ಸಮಾಜ ನಿರ್ಮಿಸಲು ಸಾಧ್ಯ” ಎಂದು ಹೇಳಿದರು.
“ಇವತ್ತು ಜಿರಳೆಯ ಪರಿಕಲ್ಪಣೆ ಹೋರಾಟದ ಕಿಚ್ಚು ಯುವಕರಲ್ಲಿ ಹೆಚ್ಚಾಗಿದೆ. ಜಿರಲೇ ಮೂವತ್ತು ಕೋಟಿ ವರ್ಷಗಳಿಂದ ಬದುಕಿವೆ. ಬಾಂಬ್ ಹಾಕಿದರೂ ಜಿರಳೆಗಳು ಬದುಕುತ್ತವೆ. ಹಾಗಾಗಿ ಹೋರಾಟದ ಕಿಚ್ಚು ಬಹಳ ಮುಖ್ಯ” ಎಂದು ಹೇಳಿದರು.
“ನಮ್ಮ ಶತ್ರು ಯಾವುದೇ ಜನಾಂಗ ಅಲ್ಲ,ಯಾವುದೇ ಜಾತಿ ಅಲ್ಲ, ಯಾವುದೇ ಧರ್ಮ ಅಲ್ಲ, ಯಾವುದೇ ಭಾಷಿಕ ಅಲ್ಲ, ಯಾವುದೇ ಒಂದು ಪಕ್ಷ ಅಲ್ಲ. ಅಸಮಾನತೆಯ ಅನ್ಯಾಯ ವ್ಯವಸ್ಥೆಯೇ ನಮ್ಮ ಶತ್ರು ಆಗಿದೆ. ಆ ಅನ್ಯಾಯ ವ್ಯವಸ್ಥೆಯ ವಿರುದ್ಧ ಏಳುಕೋಟಿ ಕನ್ನಡಿಗರು ಗಟ್ಟಿಯಾಗಿ ನಿಂತು, ಅಂಬೇಡ್ಕರ್, ಪುಲೆ, ಪೆರಿಯಾರ್ ಸಿದ್ದಾಂತ ಅವರ ಸಿದ್ದಾಂತ ಮುಂದುವರೆಸುವುದು ಬಹಳ ಮುಖ್ಯ” ಎಂದರು.
ಕಾರ್ಯಕ್ರಮವನ್ನು ಡಾ. ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರು ಮಾರುತಿ ಮಾಡಮನಿ ಅವರು ಅಂಬೇಡ್ಕರ್, ಪುಲೇ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ರೋಣ ತಾಲೂಕು ಅಧ್ಯಕ್ಷರು ಮಿಥುನ್ ಪಾಟೀಲ್, ಕಾಂಗ್ರೇಸ್ ವಕ್ತಾರರು ಸಂಗಮೇಶ ಕೊಳ್ಳಿ, ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕರು ಎಸ್.ಎನ್. ಬಳ್ಳಾರಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪಾಸಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಪೌರ ಕಾರ್ಮಿಕರಿಗೆ ಗೌರ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖಂಡರು, ಅನಂದ ಶಿಂಗಾಡಿ, ಶರೀಫ್ ಬಿಳಿಯಲಿ, ಬಾಲರಾಜ್ ಅರಬರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. ರಾಮಚಂದ್ರ ಹಂಸನೂರು ಅವರು ನಿರೂಪನೆ ಮಾಡಿದರು.




