ಸಾಮಾಜಿಕ ಚಿಂತಕರು ಪ್ರೋ ಸಂಗಮೇಶ ಹಾದಿಮನಿ ಅವರನ್ನು ಕರ್ನಾಟಕ ರಾಜ್ಯ ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆ ಆಗಿದ್ದಕ್ಕೆ ಅವರನ್ನು ಭೇಟಿ ಮಾಡಿದ ಗಂಗಾಮತಸ್ಥರ ಜಿಲ್ಲಾ ಸಂಘಟನೆಯ ಗೌರವಾಧ್ಯಕ್ಷರು ಬಿ.ಎನ್ ಯರನಾಳ ಅಭಿನಂದಿಸಿದ್ದಾರೆ.
ನಂತರ ಮಾತನಾಡಿದ ಬಿ.ಎನ್ ಯರನಾಳ ಅವರು “ಗದಗ ಜಿಲ್ಲೆಯ ಎಲ್ಲ ತಾಲೂಕಿನ ಗಂಗಾಮತಸ್ಥರ ನೌಕರರು ಸಂಘಟಿಸೋಣ. ಸಮುದಾಯದ ಸಾಮಾಜಿಕ ಅಭಿವೃದ್ಧಿಗೆ ಶ್ರಮವಹಿಶೋಣ” ಎಂದರು.
ರಾಷ್ಟ್ರೀಯ ಮೀನುಗಾರರ ವಿಭಾಗದ ತಾಲೂಕ ಅಧ್ಯಕ್ಷ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಪತ್ತಿನ ಸಹಕಾರ ಸಂಘ ನಿಯಮಿತ ಉಪಾಧ್ಯಕ್ಷರು ಹರೀಶ ಬಾರಕೇರ ಅವರು ಅಭಿನಂದಿಸಿ ಮಾತನಾಡಿ, “ಸಂಗಮೇಶ ಹಾದಿಮನಿ ಯವರು ಸಮುದಾಯದ ಬಡ ಕುಟುಂಬದ ನೋವು ನಲಿವುಗಳಿಗೆ ಸ್ಪಂದಿಸುವ ಸ್ನೇಹಜೀವಿ ಶ್ರೀಯುತರು ಆಯ್ಕೆ ಸಂತೋಷವಾಗಿದೆ” ಎಂದರು.
ಗಂಗಾಮತಸ್ಥರ ನೌಕರರ ಸಂಘದ ರಾಜ್ಯಾಧ್ಯಕ್ಷರರು ಶ್ರೀನಿವಾಸ ಸರ್ ಅವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು. ಗದಗ ಜಿಲ್ಲೆಯ ಗಂಗಾಮತಸ್ಥರ ಸಮುದಾಯದ ಬಾಂಧವರು ಹಿರಿಯರು ಯುವಕರು , ಸಮುದಾಯದ ನೌಕರರ ವರ್ಗ ಅಭಿನಂದಸಿದ್ದಾರೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಉದಯ ಅಂಬಿಗೇರ , ಸುದೀಪ ಕಮತರ ಮಂಜುನಾಥ ಗುಡಿಸಾಗರ ಅಮಿತ ಪೂಜಾರ, ಜಗದೀಶ ಅಂಬಿಗೇರ, ದೇವಪ್ಪ ಕಟ್ಟಿಮನಿ ಸಮುದಾಯದ ವಿವಿಧ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು..




