ಈದಿನ.ಕಾಮ್ ಹೊರ ತಂದಿರುವ ವಿಶೇಷಾಂಕ ‘ಜೈಹಿಂದ್ ಜಯ ಕರ್ನಾಟಕ” ಬಿಡುಗಡೆ ಕಾರ್ಯಕ್ರಮವನ್ನು ನಾಳೆ(26/4/2026)ರಂದು ಬೆಳಿಗ್ಗೆ 10:30ಕ್ಕೆ ಗದಗ ಪಟ್ಟಣದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯರು ಕೆ.ಎಚ್. ಬೇಲೂರು, ಮುಖ್ಯ ಅತಿಥಿಗಳು ಪ್ರೊ. ಬಿ.ಎ.ಕೆಂಚರೆಡ್ಡಿ ಹಿರಿಯ ಸಾಹಿತಿಗಳು ವಹಿಸಲಿದ್ದಾರೆ.
ವಿಶೇಷಾಂಕ “ಜೈಹಿಂದ್ ಜಯ ಕರ್ನಾಟಕ” ಕುರಿತು ಸಹಾಯಕ ಪ್ರಾಧ್ಯಾಪಕರು ಡಾ. ಅನುಷಾ ಎಚ್.ಸಿ ಹಾಗೂ ಪ್ರೊ. ಬಸವರಾಜ ಪೂಜಾರ ಮಾತನಾಡಲಿದ್ದಾರೆ.
ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ಪ್ರೊ.ಅರ್ಜುನ ಗೋಳಸಂಗಿ, ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧ್ಯಕ್ಷರು ರಾಜು ಹೆಬ್ಬಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರು
ವಸಂತ ಮಡ್ಲೂರು, ದಲಿತ ನಾಯಕರು ನಾರಾಯಣಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಅಶೋಕ ಬರಗುಂಡಿ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷರು ಮುತ್ತನಗೌಡ ಚೌಡರೆಡ್ಡಿ, ನಿವೃತ್ತ ಶಿಕ್ಷಕರು, ಟೀಚರ್ ಪತ್ರಿಕೆ ಉಪ ಸಂಪಾದಕರು ಎಫ್.ಸಿ ಚೇಗರೆಡ್ಡಿ, ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷರು ಕೆ.ಐ.ಶೇಕ್ ಅಲಿ, ಅಂಜುಮಾನ್ ಮಾಜಿ ಅಧ್ಯಕ್ಷರು ಮಹಮ್ಮದ್ ಯೂಸೂಫ್ ಎ ನಮಾಜಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ದಲಿತ ಹೋರಾಟಗಾರರು ಮುತ್ತು ಬಿಳಿಯಲಿ, ಪ್ರೊ ಗುರುನಾಥ ಕೆಂಗಾರಕರ್ ಹಾಗೂ ವಕೀಲರು ಬಾಲು ರಾಠೋಡ್ ಓದುಗರಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.
ಈದಿನ.ಕಾಮ್ ನಿಮ್ಮದೇ ಮಾಧ್ಯಮದ ವಿಶೇಷಾಂಕ “ಜೈಹಿಂದ್ ಜಯ ಕರ್ನಾಟಕ” ಬಿಡುಗಡೆ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಪತ್ರಿಕಾ ಪ್ರಕಟನೆಯಲ್ಲಿ ಶರಣಪ್ಪ ಎಚ್ ಸಂಗನಾಳ ತಿಳಿಸಿದ್ದಾರೆ.




