ಗುಬ್ಬಿ | ಬಿದರೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ : ಸರ್ಕಾರಿ ಶಾಲೆ, ಆಸ್ಪತ್ರೆ ಪರಿಶೀಲನೆ

Date:

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

- Advertisement -

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ಗೈರು ಕಂಡು ಬಂತು. ಕೆಲ ಅವ್ಯವಸ್ಥೆ ಪರಿಶೀಲಿಸಿ ಈ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಯಾದಗಿರಿ | ವೆಂಕಟಪ್ಪ ನಾಯಕನ ನಾಡು ಸುರಪುರದಲ್ಲಿ ಅಸ್ಪೃಶ್ಯತೆ...

ಯಾದಗಿರಿಯ ಸೂಗೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ, ಬಳೆ ಅಂಗಡಿ, ಹೊಲಿಗೆ ಶಾಪ್‌, ಹೋಟೆಲ್‌ಗಳಲ್ಲಿ ನಿರ್ಬಂಧ ಹಾಕಲಾಗುತ್ತಿದೆ; ದೇವಸ್ಥಾನ ಪ್ರವೇಶಕ್ಕೂ ಅವಕಾಶವಿಲ್ಲವೆಂಬ ಆರೋಪ - ಸ್ವಾತಂತ್ರ್ಯ ಸಿಕ್ಕರೂ ಜಾತಿ ತಾರತಮ್ಯದ ಸಂಕೋಲೆಯಿಂದ ದಲಿತರಿಗಿಲ್ಲ ಬಿಡುಗಡೆ. ಬ್ರಿಟಿಷ್...

ನುಡಿ ನಮನ | ಕನ್ನಡ ವಿಚಾರ ಪರಂಪರೆಗೆ ಕೆವಿಎನ್...

ನಮ್ಮೊಳಗಿನ ತಾಕಲಾಟ, ಹೊಯ್ದಾಟ, ತೀರಗಳೇ ತಲುಪದ ಭಾರಿ ಅಲೆಗಳ ಏರಾಟದಲ್ಲಿ ಸಿಲುಕಿ ಒದ್ದಾಡುವಾಗ ಒಮ್ಮೆ ಕೆವಿಎನ್‌ ಜತೆ ಮಾತನಾಡಿದರೆ ಸಾಕು… ಕಂಡ ಆಪ್ತರು “ ಏನೋ ಇವತ್ತು ನಿನಗೆ ಬಂಪರ್‌ ಲಾಟರಿ ಹೊಡೀತಾ’’...

E20 ಹೆಸರಲ್ಲಿ E31 ಸುಲಿಗೆ: ಕರ್ನಾಟಕದಲ್ಲಿ ಮೋದಿ ಸರ್ಕಾರದ...

ದೇಶದ ಇಂಧನ ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ಕರಾಳವಾದ, ಜನರ ಕಣ್ಣಿಗೆ ಮಣ್ಣು ಎರಚಿ ಅವರ ವಾಹನಗಳ ಎಂಜಿನ್‌ಗಳನ್ನು ನಾಶಪಡಿಸುವ ಮತ್ತು ಜೇಬಿಗೆ ಕತ್ತರಿ ಹಾಕುವ ಬೃಹತ್ ದರೋಡೆಕೋರತನ ಕರ್ನಾಟಕದಲ್ಲಿ ಬಯಲಾಗಿದೆ. ಪೆಟ್ರೋಲ್‌ನಲ್ಲಿ 20%ರ...

ಸ್ಥಳದಲ್ಲಿದ್ದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಬಡವರ ಪಾಲಿನ ಆಸ್ಪತ್ರೆಗೆ ವೈದ್ಯರೇ ಇಲ್ಲವಾದರೆ ರೋಗಿಗಳು ಎಲ್ಲಿ ಹೋಗಬೇಕು. ಖಾಸಗಿ ಆಸ್ಪತ್ರೆಗೆ ಹೋಗುವ ಚೈತನ್ಯ ಇಲ್ಲದ ರೋಗಿಗಳು ಏನು ಮಾಡಬೇಕು. ಇಡೀ ಆಸ್ಪತ್ರೆಗೆ ಒಬ್ಬರೇ ನರ್ಸ್ ಇದ್ದಾರೆ. ಎಲ್ಲಾ ಕೆಲಸ ಅವರೇ ಮಾಡ್ತಾರಾ ಎಂದು ಕ್ಲಾಸ್ ತೆಗೆದುಕೊಂಡರು.

ಆಸ್ಪತ್ರೆ ಕಟ್ಟಡಕ್ಕೆ ಮೂರು ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ವಿಳಂಬ ಆಗಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಮಾಹಿತಿ ಪಡೆದ ಅವರು ಅಲ್ಲಿಯೇ ಇದ್ದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥ ಪರಿಶೀಲಿಸಿ ಪಕ್ಕದ ಸರ್ಕಾರಿ ಶಾಲೆಗೆ ತೆರಳಿ ಬೆಳಿಗ್ಗೆ ಮಕ್ಕಳಿಗೆ ಹಾಲು ನೀಡದ ಬಗ್ಗೆ ಪ್ರಶ್ನಿಸಿ ಗರಂ ಆದರು. ನಂತರ ಮಕ್ಕಳ ಶಿಕ್ಷಣ ಗುಣಮಟ್ಟ ಪರಿಶೀಲಿಸಿದರು.

ಕೆಲ ಶಿಕ್ಷಕರಿಗೆ ಸ್ಥಳದಲ್ಲೇ ಕ್ಲಾಸ್ ತೆಗದುಕೊಂಡು ಕನ್ನಡ ಭಾಷೆ ಓದಲು ಕೆಲ ಹುಡುಗರು ಪರದಾಡಿದ್ದಾರೆ ಎಂದರೆ ಸಂಬಳ ಯಾಕೆ ನೀಡುತ್ತಾರೆ. ಏನು ಕೆಲಸ ಮಾಡಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು. ಹಳ್ಳಿ ಮಕ್ಕಳಿಗೆ ಉತ್ತಮ ಪಾಠ ಪ್ರವಚನ ಮಾಡಲು ಸೂಚಿಸಿ ಆಪ್ತ ಸಹಾಯಕರ ಮೂಲಕ ಬಿಇಓ ಅವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದರು. ನಂತರ ಖುದ್ದು ಜಿಲ್ಲಾಧಿಕಾರಿಗಳೇ ಮಕ್ಕಳಿಗೆ ಗಣಿತ ಹಾಗೂ ಇಂಗ್ಲೀಷ್ ಪಾಠ ಮಾಡಿ ತಹಶೀಲ್ದಾರ್ ಅವರಿಗೆ ಸರ್ಕಾರಿ ಶಾಲೆಗಳಿಗೆ ಆಗಾಗ್ಗೆ ಭೇಟಿ ನೀಡಲು ಸೂಚಿಸಿದರು.

ಸ್ಥಳದಲ್ಲಿ ತಹಶೀಲ್ದಾರ್ ಆರತಿ.ಬಿ, ತಾಪಂ ಇಓ ರಂಗನಾಥ್, ಉಪ ತಹಶೀಲ್ದಾರ್ ಆರ್.ಜಿ.ನಾಗಭೂಷಣ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಲಮಟ್ಟಿ– ಕುಷ್ಟಗಿ ರೈಲು ಮಾರ್ಗಕ್ಕೆ ಭೂಮಿ ಒದಗಿಸಲು ರೈಲ್ವೇ ಹೋರಾಟ ಸಮಿತಿಯ ಮನವಿ

ರಾಜ್ಯದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಹಾಗೂ ಅನುದಾನ...

ತುರುವೇಕೆರೆಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಸುಗಮ ಸಂಚಾರಕ್ಕೆ ಅನುವು

ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಫುಟ್‌ಪಾತ್ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಟ್ಟಣ...

ತುಮಕೂರು | ಮಾದಕ ವ್ಯಸನದಿಂದ ದೂರವಿದ್ದು ಉತ್ತಮ ನಾಗರಿಕರಾಗಿ: ಪಿಎಸ್‌ಐ ತಾರ ಕೆ.ಸಿ.

ಯುವಜನರು ಜಾಗೃತರಾಗಿರಬೇಕು. ಉನ್ನತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿ ಸಮಾಜದ ಆಸ್ತಿಯಾಗಬೇಕು....

ತುಮಕೂರು | ಸುಫಿಯಾ ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆ

ತುಮಕೂರು ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ...