ಗುಬ್ಬಿ | ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೆ ಕ್ರೀಡೆ ಉತ್ತಮ ಮಾರ್ಗ : ಬಿಇಓ ನಟರಾಜ್

Date:

ಪ್ರಸ್ತುತ ಒತ್ತಡದ ಬದುಕಿನಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಉತ್ತಮ ಸಾಧನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ತಿಳಿಸಿದರು.

- Advertisement -

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ದೈಹಿಕ ಕಸರತ್ತು ಎಂಬುದು ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿದೆ. ಏಕಾಗ್ರತೆ ಸಾಧಿಸುವ ಮನಸ್ಥಿತಿ ಕ್ರೀಡೆಯಿಂದ ಸಾಧ್ಯ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

ಶಿಕ್ಷಣ ಇಲಾಖೆ ಮಕ್ಕಳಲ್ಲಿ ಪ್ರತಿಭೆ ಹೊರ ತರಲು ಕ್ರೀಡಾಕೂಟ ಪ್ರತಿ ವರ್ಷ ನಡೆಸುತ್ತಿದೆ. ಕ್ಲಸ್ಟರ್ ಮಟ್ಟದಿಂದ ತಾಲ್ಲೂಕು ಮಟ್ಟ ನಡೆಸಿ ಜಿಲ್ಲಾ ಮಾತು ರಾಜ್ಯ ಮಟ್ಟಕ್ಕೆ ಕಳುಹಿಸುವ ಮೂಲಕ ಗ್ರಾಮೀಣ ಮಕ್ಕಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿ ಮಾಡಗುತ್ತಿದೆ ಎಂದರು.

ಪಪಂ ಸದಸ್ಯ ಮಹಮದ್ ಸಾದಿಕ್ ಮಾತನಾಡಿ ಮಕ್ಕಳಿಂದ ಕ್ರೀಡೆ ಆಸಕ್ತಿ ಬೆಳೆಸಿದರೆ ರೋಗಗಳಿಂದ ಮುಕ್ತರಾಗಿ ಸದೃಢ ದೇಹ ಕಾಪಾಡಬಹುದು. ಗ್ರಾಮೀಣ ಸೊಗಡಿನ ಆಟಗಳಲ್ಲಿ ಕಬಡ್ಡಿ ಕೊಕ್ಕೋ ದೈಹಿಕ ಕಸರತ್ತು ನೀಡುತ್ತದೆ. ಜೊತೆಗೆ ಚುರುಕಿನ ಬುದ್ಧಿ ದೊರೆಯುತ್ತದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರ ತಂದು ಸೂಕ್ತ ತರಬೇತಿ ನೀಡಿದರೆ ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಾಗಿ ಹೊಮ್ಮುತ್ತಾರೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಹಾಲು ಮೊಟ್ಟೆ ಜೊತೆಗೆ ಬಿಸಿಯೂಟ ನೀಡಿ ಮಕ್ಕಳ ದೈಹಿಕ ಶಕ್ತಿ ಹೆಚ್ಚಿಸಿ ಕ್ರೀಡೆಯಲ್ಲಿ ತೊಡಗಿಸಿ ಉತ್ತಮ ಕ್ರೀಡಾಪಟುಗಳ ತಯಾರಿ ಮಾಡುತ್ತೇವೆ. ಮಕ್ಕಳ ಆಸಕ್ತಿ ಅರಿತು ಕ್ರೀಡೆಯಲ್ಲಿ ತರಬೇತಿ ನೀಡಿದರೆ ನಮ್ಮ ದೇಶದ ಅಸ್ತಿಯಾಗಿ ಮಕ್ಕಳು ಬೆಳೆಯುತ್ತಾರೆ ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾಜ್ಯೋತಿ ಬೆಳಗಿಸಲಾಯಿತು. ವೇದಿಕೆಯಲ್ಲಿ ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಶಿಕ್ಷಕರ ಸಂಘದ ಬಿ.ಸಿ.ಶಿವಣ್ಣ, ಮಂಜುನಾಥ್, ಚನ್ನಬಸವಯ್ಯ, ದಯಾನಂದ್, ಸುರೇಶಯ್ಯ, ನಿಜಾನಂದಮೂರ್ತಿ, ಕುಮಾರಸ್ವಾಮಿ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಡಿ.ಸಿ. ಮನ್ನಾ ಭೂಮಿ ನಿವೇಶನ ರಹಿತರಿಗೆ ನೀಡಿ: ಸಿಎಂಗೆ ದಸಂಸ ಅಂಬೇಡ್ಕರ್ ವಾದ ಮನವಿ

ಕಸ್ತೂರಿರಂಗನ್ ವರದಿ ಕುರಿತು ನೇರ ಸಂವಾದ ಸಭೆಗೆ ಹೆಬ್ರಿಗೆ ಆಗಮಿಸಿದ್ದ ಮುಖ್ಯಮಂತ್ರಿ...

ತುಳು ಭಾಷಾ ಹೋರಾಟಕ್ಕೆ ಐತಿಹಾಸಿಕ ಜಯ: ಉಡುಪಿಯಲ್ಲಿ ತುಳುನಾಡು ರಕ್ಷಣಾ ವೇದಿಕೆಯಿಂದ ವಿಜಯೋತ್ಸವ

ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ...

ಚಿಕ್ಕಮಗಳೂರು | ಸಿಎಂ ಭೇಟಿ ಹಿನ್ನೆಲೆ: ಸಂಚಾರ ಮಾರ್ಗ ಬದಲಾವಣೆ

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಗೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾ‌ರ್...