ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೇವರಹಟ್ಟಿ ಫೌಂಡೇಶನ್ ಹಾಗೂ ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಮಾತನಾಡಿ” ರೈತರು ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಹೆಚ್ಚಿನ ಶುಲ್ಕ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಗ್ರಾಮಗಳಲ್ಲಿಯೇ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಕಾನ್ವೆಂಟ್ ಶಿಕ್ಷಣವನ್ನು ಉಚಿತವಾಗಿ ಒದಗಿಸುವ ಉದ್ದೇಶದಿಂದ ಮಕ್ಕಳ ಮನೆ ಕಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕಿನ ಕಾಳೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬೋರೆಕೊಪ್ಪಲು ಅಂಗನವಾಡಿ ಕಲಿಕಾ ಕೇಂದ್ರದಲ್ಲಿ ಮಂಗಳವಾರ 19ನೇ ಮಕ್ಕಳ ಮನೆ ಮಾದರಿಯ ಪ್ರೀ-ಸ್ಕೂಲ್ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲೇ ಮಾದರಿಯಾಗಿ ಪ್ರೀ-ಸ್ಕೂಲ್ ಶಿಕ್ಷಣವನ್ನು ನೀಡುತ್ತಿರುವ ಮಕ್ಕಳ ಮನೆ ಶಿಕ್ಷಣ ಕ್ರಾಂತಿಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ದೇವರಹಟ್ಟಿ ಫೌಂಡೇಶನ್ ಹಾಗೂ ಹಿರಿಯ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ ಆರಂಭವಾಗಿರುವ ಮಕ್ಕಳ ಮನೆ ಯೋಜನೆಯಡಿ ಈಗಾಗಲೇ ತಾಲೂಕಿನಾದ್ಯಂತ 19 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 550ಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮನನೊಂದು ಯುವಕ ಸಾವು
ವಿಶೇಷವಾಗಿ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳನ್ನು ಪಾಲಕರು ಮಕ್ಕಳ ಮನೆ ಪ್ರೀ-ಸ್ಕೂಲ್‌ಗಳಿಗೆ ದಾಖಲಿಸುತ್ತಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸಿಡಿಪಿಒ ವೆಂಕಟೇಶ್, ಮಕ್ಕಳ ಮನೆಯ ರೂವಾರಿ ಡಾ. ಅಶೋಕ್ ಹನ್ಯಾಳ್, ಗ್ರಾಪಂ ಪಿಡಿಒ ಲೋಕೇಶ್ ಇತರರಿದ್ದರು. ಹೊಸದಾಗಿ ದಾಖಲಾದ 26 ಮಕ್ಕಳಿಗೆ ಸಮಸ್ತ್ರ, ಬ್ಯಾಗ್, ಐದು ಪುಸ್ತಕಗಳು, ಸ್ಟೇಷನರಿ ಕಿಟ್, ಎಲ್‌ಇಡಿ ಸ್ಲೇಟ್ ಸೇರಿದಂತೆ ಅಗತ್ಯ ಶಿಕ್ಷಣ ಸಾಮಗ್ರಿಗಳನ್ನು ವಿತರಿಸಲಾಯಿತು.




