ಹಾವೇರಿ | ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯ

Date:

ನಗರದ ಮೈಲಾರ ಮಹದೇವಪ್ಪ ರೈಲು ನಿಲ್ದಾಣದಲ್ಲಿ ಅಂಗವಿಕಲರು, ವಯೋವೃದ್ಧರು, ಅಶಕ್ತರು ಹಾಗೂ ರೋಗಿಗಳಿಗೆ ಸೇರಿದಂತೆ ಸಮಸ್ಯೆ ಆಗುತ್ತಿದ್ದು, ರೈಲ್ವೆ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಡಿವೈಎಫ್ಐ ಹಾಗೂ ಕೆ.ಎಸ್.ಸಿ.ಎ ಮುಖಂಡರು ಒತ್ತಾಯಿಸಿದರು.

- Advertisement -

ಹಾವೇರಿ ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗವಿಲಕರ ಮತ್ತು ಪಾಲಕರ ಒಕ್ಕೂಟ (ಕೆ.ಎಸ್.ಡಿ.ಸಿ.ಎಫ್) ವತಿಯಿಂದ ಕೇಂದ್ರ ರೇಲ್ವೆ ಸಚಿವರಾದ ಶ್ರೀಯುತ ಅಶ್ವಿನಿ ವೈಷ್ಣವ್ ಅವರಿಗೆ ಮಾನ್ಯ ಹಾವೇರಿ ರೈಲ್ವೆ ಸ್ಟೇಶನ್ ಮ್ಯಾನೇಜರ್ ಮೂಲಕ ಮನವಿ ಸಲ್ಲಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

“ಹಾವೇರಿಯು ಜಿಲ್ಲಾ ಕೆಂದ್ರವಾಗಿದ್ದು, ಬೆಳೆಯುತ್ತಿರುವ ನಗರವಾಗಿದೆ. ಹೆಚ್ಚಿನ ಜನರು ದಿನ ನಿತ್ಯದ ಓಡಾಟಕ್ಕೆ ರೈಲ್ವೆಯನ್ನು ಅವಲಂಬಿಸಿದ್ದಾರೆ. ಆದರೆ  ರೈಲು ನಿಲ್ದಾಣವು ಕೆಲವು ಪ್ರಮುಖ ಮೂಲಭೂತ ಸೌಕರ್ಯಗಳ ಕೊರತೆಯಿಂದ ನರಳುತ್ತಿದ್ದು ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಆಗ್ರಹಿಸಿದರು.

“ವಿಶೇಷವಾಗಿ ಅಂಗವಿಕಲರು, ವಯೋವೃದ್ಧರು ಹಾಗೂ ರೋಗಿಗಳಿಗೆ ಒಂದನೇ ಪ್ಲಾಟಪಾರಂ ನಿಂದ ಎರಡು ಮತ್ತು ಮೂರನೇ ಪ್ಲಾಟಫಾರಂಗೆ ತೊಂದರೆಯಾಗದಂತೆ ಸರಳವಾಗಿ ಸಂಚರಿಸುವಂತಾಗಲು ವಿದ್ಯುತ್ ಚಾಲಿತ (ಬ್ಯಾಟರಿ) ವಾಹನಗಳ ವ್ಯವಸ್ಥೇ, ವ್ಹೀಲ್ ಚೇರ್ ಸೌಲಭ್ಯ ಹಾಗೂ ವಿಕಲಚೇತನರ ಸ್ನೇಹಿ ಶೌಚಾಲಯ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸೌಕಾರ್ಯಗಳನ್ನು ಒದಗಿಸಲು ಹಾಗೂ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು” ರಂದು ಒತ್ತಾಯಿಸಿದರು.

“ರೈಲು ಸಾರಿಗೆಯನ್ನು ಅವಲಂಬಿಸಿರುವ ಜಿಲ್ಲಾ ಕೇಂದ್ರ ಹಾವೇರಿ ಶಹರ ಸೇರಿದಂತೆ ಸುತ್ತಮುತ್ತಲು ಊರುಗಳ ಜನತೆಯ ಅನುಕೂಲಕ್ಕಾಗಿ ಈ ಮೇಲಿನ ಸಮಸ್ಯೆಗಳನ್ನು ವಿಳಂಬ ಮಾಡದೇ ನಿರ್ದಿಷ್ಠ ಕಾಲಮಿತಿಯೊಳಗೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಮನವಿ ಸ್ವೀಕರಿಸಿದ ಸ್ಟೇಶನ್ ಮ್ಯಾನೇಜರ್ ಸುಬ್ರಹ್ಮಣ್ಯ ಅವರು, “ಕೆಲವು ಕಾಮಗಾರಿಗಳು ನಡೆಯುತ್ತಿವೆ. ಉಳಿದ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದರು.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಕೆ.ಎಸ್.ಡಿ.ಸಿ.ಎಫ್ ಜಿಲ್ಲಾ ಸಂಚಾಲಕರಾದ ಖಲಂದರ್ ಅಲ್ಲಿಗೌಡ್ರ, ಮುಖಂಡರಾದ ಹಸೀನಾ ಹೆಡಿಯಾಲ, ರೇವಣಪ್ಪ ಸವೂರ, ಡಿವೈಎಫ್ಐ ಮುಖಂಡರಾದ ವೆಂಕಟೇಶ ಕಲಾಲ್, ಸಂತೋಷ ಕೆ, ವಿನಾಯಕ ಎಂ.ಜಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಹೆಚ್ಚುವರಿ ಪರಿಹಾರ ನೀಡದ, ಜಿಲ್ಲಾಧಿಕಾರಿ ಕಾರು ಜಪ್ತಿ

ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡದ...

ಯಾದಗಿರಿ | ಅಂಬೇಡ್ಕರ್, ಬಸವಣ್ಣ, ಅಲ್ಲಮಪ್ರಭು, ಕುವೆಂಪು ಕೆಲವರಿಗೆ ‘ಡಿಸ್ಟರ್ಬ್’ ಮಾಡುತ್ತಾರೆ : ನಟ ಪ್ರಕಾಶ್ ರೈ

ಅಂಬೇಡ್ಕರ್ ಅವರ ನೀಲಿ ಶಾಲ್ ಕೂಡ ಕೆಲವರನ್ನು ‘ಡಿಸ್ಟರ್ಬ್’ ಮಾಡುತ್ತದೆ. ಅಂಬೇಡ್ಕರ್,...

ಉತ್ತರ ಕನ್ನಡ | ಅಂಗನವಾಡಿ, ಶಾಲೆ, ಆಸ್ಪತ್ರೆಗಳಿಗೆ ಆದ್ಯತೆಯ ಮೇರೆಗೆ ಕುಡಿಯುವ ನೀರು: ಸಿಇಒ ಡಾ. ದಿಲೀಷ್ ಶಶಿ

ಉತ್ತರ ಕನ್ನಡ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಾಗುವ ಅಂಗನವಾಡಿ, ಶಾಲೆ...