ಹಾವೇರಿ | ಪುಸ್ತಕವನ್ನು ಪರಿಚಯಿಸುವ ಸಾಮರ್ಥ್ಯ ಗ್ರಂಥಪಾಲಕರಿಗೆ ಇದೆ: ಡಾ. ರಾಘವೇಂದ್ರ ಪತ್ತೇಪುರ

Date:

“ನಾನು ಓದುವ ಕಾಲದಲ್ಲಿ ಗ್ರಂಥಾಲಯದಲ್ಲಿ ಓದುವಾಗ,  ಸಂಶೋದನೆಗೆ ಸಂಬಂಧಿಸಿ ಪುಸ್ತಕಗಳು ಕಡಿಮೆ ಇರುತ್ತಿದ್ದವು. ವಿದ್ಯಾರ್ಥಿಗಳು ಅವುಗಳನ್ನು ತೆಗೆದು ಇಡುತ್ತಿದ್ದರು. ಆಗ ಈ ಪುಸ್ತಕ ಸಿಗುತ್ತಿಲ್ಲ ಎಂದಾಗ ಗ್ರಂಥಾಪಾಲಕರು ಹುಡುಕಿ ಕೊಡುತ್ತಿದ್ದರು. ಗೊತ್ತಿರದ ಪುಸ್ತಕವನ್ನು ಪರಿಚಯಿಸುವ ಸಾಮರ್ಥ್ಯ‌ ಗ್ರಂಥಪಾಲಕರಿಗೆ ಇರುತ್ತದೆ” ಎಂದು ಸಿಡಿಸಿ ನಿರ್ದೇಶಕರು ಹಾವೇರಿ ವಿವಿ ಡಾ. ರಾಘವೇಂದ್ರ ಪತ್ತೇಪುರ ಹೇಳಿದರು.

- Advertisement -

ಹಾವೇರಿ ಪಟ್ಟದಣದ ಕೆರೆಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ‘ಒಂದು‌ ದೇಶ, ಒಂದು ಚಂದಾದಾರಿಕೆ’ ಕುರಿತು ರಾಷ್ಟ್ರೀಯ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಗ್ಯಾನೇಶ್ ಕುಮಾರ್ ವಿರುದ್ಧದ 20 ವರ್ಷಗಳ ಪ್ರಕರಣಕ್ಕೆ ಮರುಜೀವ;...

ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌ ಕುಮಾರ್ ವಿರುದ್ಧ 2006ರಲ್ಲಿ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಕೇರಳ ಸರ್ಕಾರ ಈಗ ಮರುಜೀವ ನೀಡಿದೆ. ಪ್ರಕರಣವನ್ನು ವಿಜಿಲೆನ್ಸ್ ತನಿಖೆಗೆ ಆದೇಶ ಹೊರಡಿಸಿದೆ....

ನೊಬೆಲ್‌ ಪ್ರಶಸ್ತಿ ಸರಣಿ | ಶಾಸ್ತ್ರೀಯ ಪರಂಪರೆಗೆ ಸಮಕಾಲೀನ...

ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಕೆನಡಾದ ಆನ್‌ ಕಾರ್ಸನ್‌ ಅವರ ಮುಡಿಗೇರಿದೆ. ಇವರು ಕವಯತ್ರಿ, ಪ್ರಬಂಧಗಾರ್ತಿ ಹಾಗೂ ಅನುವಾದಕಿ. ಕ್ಲಾಸಿಕಲ್‌ ಗ್ರೀಕ್‌ ಸಾಹಿತ್ಯದ ಪ್ರೇಮಿಯಾದ ಕಾರ್‌ಸನ್‌ ಶಾಸ್ತ್ರೀಯ ಮಾದರಿಯನ್ನು ಸಮಕಾಲೀನ ಸಂದರ್ಭಗಳಲ್ಲಿ...

“ಗ್ರಂಥಪಾಲಕರು ಉತ್ತಮ ಪುಸ್ತಕಗಳನ್ನು ಕೊಡದೆ ಇದ್ದಿದ್ದರೆ ನಾನು ಈ ಸ್ಥಾನದಲ್ಲಿ‌ ಇರುತ್ತಿರಲಿಲ್ಲ. ಅಭಿವೃದ್ದಿ ಎನ್ನುವುದು ಯಾವಾಗಲು ಮುಂದುವರೆಯುತ್ತಿರುವ ಕಾಲಘಟ್ಟದಲ್ಲಿ ಇದ್ದೇವ. ಪುಸ್ತಕ ಜ್ಞಾನದ ಭಂಡಾರ. ಪುಸ್ತಕಗಳ ಜೊತೆಗೆ ಅನೇಕ ಸಮಯ ಕಳೆಯುವುದು, ಓದುವುದನ್ನು‌ ಮಾಡಿದರೆ ಜ್ಞಾನ ಸಂಪಾದನೆಗೆ ಸಹಕಾರ ಆಗಲಿದೆ” ಎಂದು ಹೇಳಿದರು.

“ಸಾಧನೆ ಮಾಡಲು ಪುಸ್ತಕ ಮೂಲ ಆಗಿರುತ್ತದೆ. ಡಿವಿಜಿ ಅವರು ‘ತೆರೆದ ಕಿಡಕಿ‌ ಮನೆಯ ಬೆಳಕಿಗೆ‌, ತೆರದ ಪುಸ್ತಕ ಮನದ ಬೆಳಕಿಗೆ‌” ಹೇಳಿರುವರೆಂದರು.

ಮುಖ್ಯ ಅತಿಥಿಗಳು ಕೆಯುಡಿ ಪ್ರೊ. ಎಸ್.ಎಸ್ ಬಸವನಾಳ ಗ್ರಂಥಾಲಯದ ಗ್ರಂಥಪಾಲಕರು ಡಾ. ಅನುಪಮಾ ಜೋಶಿ ಮಾತನಾಡಿ, ” ಒಂದು ರಾಷ್ಟ್ರ, ಒಂದು ಚಂದಾದಾರಿಕೆ (ONOS) ಎಂದರೆ ರಾಷ್ಟ್ರಮಟ್ಟದಲ್ಲಿ ಕೇಂದ್ರೀಕೃತವಾಗಿ ಮಾತುಕತೆ ನಡೆಸಲಾದ ಚಂದಾದಾರಿಕೆಯ ಮೂಲಕ ಅರ್ಹ ಭಾರತೀಯ ಸಂಸ್ಥೆಗಳಿಗೆ ವಿದ್ವತ್ಪೂರ್ಣ ಮಾಹಿತಿ ಸಂಪನ್ಮೂಲಗಳನ್ನು ಲಭ್ಯವಾಗಿಸುತ್ತದೆ” ಎಂದು ಹೇಳಿದರು.

“ಇದು ಭಾರತ ಸರ್ಕಾರದ ಒಂದು ಭಾಗವಾಗಿದ್ದು, ದೇಶಾದ್ಯಂತ ಇರುವ ಅರ್ಹ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಿಗೆ, ಕೇಂದ್ರೀಕೃತವಾಗಿ ಸಂಯೋಜಿತವಾದ ರಾಷ್ಟ್ರೀಯ ಚಂದಾದಾರಿಕೆಯ ಮೂಲಕ ಉತ್ತಮ ಗುಣಮಟ್ಟದ ವಿದ್ವತ್ಪೂರ್ಣ ಸಂಶೋಧನಾ ಪ್ರಕಟಣೆಗಳನ್ನು ಲಭ್ಯವಾಗಿಸುವ ಗುರಿಯನ್ನು ಹೊಂದಿದೆ” ಎಂದರು.

ಕಾರ್ಯಗಾರದಲ್ಲಿ ಹಾವೇರಿ ವಿವಿ ಉಪಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಹಾಗೂ ಹಾವೇರಿ ವಿವಿ ರಜಿಸ್ಟರ್ ಪ್ರೊ. ಎಸ್ ಟಿ ಬಾಗಲಕೋಟಿ ಅವರು ಆನ್ಲೈನ್ ಮೂಲಕ   ಭಾಗವಹಿಸಿ ಶುಭಕೋರಿದರು. ಸಹಾಯಕಿ ಗ್ರಂಥಪಾಲಕರು ರಂಜಿತ ಆರ್ ಜಗನ್ನನವರ ವೇದಿಕೆಯಲ್ಲಿದ್ದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

WhatsApp Image 2024 10 05 at 15.43.57 586b60ff min e1728123396595
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ‘ಬೆಂಕಿ ಹಚ್ಚುತ್ತೇನೆ’ ಹೇಳಿಕೆ ಶಾಸಕರ ಘನತೆಗೆ ತಕ್ಕುದಲ್ಲ: ಮಂಜುನಾಥ ಮೇತ್ರಿ

ಅಕ್ರಮ ಮರಳು ಸಾಗಾಟ ಹಾಗೂ ಓವರ್‌ಲೋಡ್ ಟಿಪ್ಪರ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದು...

ಯಾದಗಿರಿ | ಯುವಜನರಲ್ಲಿ ಸಂವಿಧಾನ ಪ್ರಜ್ಞೆ ಬೆಳೆಸಲು ಅ.17ರಿಂದ ತರಬೇತಿ ಶಿಬಿರ

ಯುವಜನರಲ್ಲಿ ಸಂವಿಧಾನಾತ್ಮಕ ಅರಿವು, ಸಾಮಾಜಿಕ ಪ್ರಜ್ಞೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ...

ಉಡುಪಿ | ಮೇವಿನ ಬಿತ್ತನೆ ಬೀಜ ಉಚಿತ ಪೂರೈಕೆ; ರೈತರಿಂದ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ...

ಉಡುಪಿ | ಅ.11ರಿಂದ 21ರವರೆಗೆ ಉಚ್ಚಿಲ ದಸರಾ: ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನೆಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ...