ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವ ಮಾನವ ಹಕ್ಕಗಳ ಆಯೋಗ ಆರ್.ಕೆ ಫೌಂಡೇಶನ್‌ನ ಜಿಲ್ಲಾ ವ್ಯಾಪ್ತಿಯಲ್ಲಿ 2ನೇ ವರ್ಷದ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸಿ, ಸಿಹಿ ಹಂಚಿ ಸರಳವಾಗಿ ಆಚರಣೆ ಮಾಡಲಾಯಿತು. ಫೌಂಡೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜು ಕನ್ನೈ ಅವರನ್ನು ಜಿಲ್ಲಾ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಡಾ.ರಾಜುಕನ್ನೈ, “ಹಾವೇರಿ ಜಿಲ್ಲೆಯಲ್ಲಿ ಆರ್.ಕೆ ಫೌಂಡೇಶನ್ ಮುಂದಿನ ದಿನಮಾನಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಜಿಲ್ಲೆಯ ಮುಖಂಡರು ಸಜ್ಜಾಗಿದ್ದಾರೆ. ವಿಶ್ವದಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವ ಗುರಿ ಉದ್ದೇಶದೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ” ಎಂದರು.
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ಮಾತನಾಡಿ, “ಮಾನವ ಹಕ್ಕಗಳನ್ನು ರಕ್ಷಣೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಬೇಕಿದೆ. ಜಿಲ್ಲೆಯಲ್ಲಿ ಆರ್.ಕೆ ಫೌಂಡೇಶನ್ ಕಾರ್ಯ ಚಟುವಟಿಕೆಗಳು ಹೆಚ್ಚಾಗಲು ಎಲ್ಲರ ಶ್ರಮ ಅಗತ್ಯವಿದೆ” ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಆರ್.ಕೆ ಫೌಂಡೇಶನ್‌ನ ಪದಾಧಿಕಾರಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ದಕ್ಷಿಣ ಭಾರತದ ಕಾನೂನು ಸಲಹೆಗಾರರಾದ ಡಾ.ಎಂ.ಎಸ್ ಬಡಿಗೇರ, ಸಹ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮವ್ವ, ಮುಖಂಡರಾದ ಜಗದೀಶ ಹರಿಜನ, ನವೀನ ಶಿಡ್ಲಣ್ಣನವರ, ಆಶಾಬಿ ತೊಂಡೆನವರ, ಉಮಾ ದಾವಣಗೇರಿ, ಮೌಲಾಲಿ, ಇರಾಬಿ. ಶೈಲಾ. ಶೇಮಶಾದಬಿ, ಗಂಗಮ್ಮ ಪಾಟೀಲ, ಹೇಮಾ ವಾಳದ, ಸರೋಜ ಸೇರಿದಂತೆ ಅನೇಕರು ಇದ್ದರು.