ಹಾವೇರಿ | ತಾವೇ ವ್ಯಕ್ತಿಗೆ ವಿಮೆ ಮಾಡಿಸಿ ಹತ್ಯೆ ಮಾಡಿ ಅಪಘಾತದ ನಾಟಕ: ಆರೋಪಿಗಳ ಬಂಧನ

Date:

ಜಮೀನು, ಮನೆ, ವಿಮೆಹಣಕ್ಕಾಗಿ ವ್ಯಕ್ತಿಯ‌ನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಲು ಹೊರಟ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.

- Advertisement -

ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಸೆಪ್ಟೆಂಬರ್​ 27ರಂದು ಕೊಲೆ ನಡೆದಿತ್ತು. 38 ವರ್ಷದ ಬಸವರಾಜ್​ ಪುಟ್ಟಪ್ಪನವರ್ ಕೊಲೆಗೀಡಾದ ವ್ಯಕ್ತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಬಸವರಾಜ್ ಅವರ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ ಮತ್ತು ಲೋಕೇಶ್​ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣದ ಆರಂಭದಲ್ಲಿ ಮೃತ ಬಸವರಾಜ್ ಸಾವಿನ ಬಗ್ಗೆ ಅವರ ಸಹೋದರ ಸಂಬಂಧಿ ಶಿವಕುಮಾರ್​ಗೆ ಸಂಶಯ ಬಂದಿತ್ತು. ಈ ಕುರಿತಂತೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬಂದಿದೆ.

“ಹತ್ಯೆಗೊಂಡಿರುವ ಬಸವರಾಜ್ ತಂದೆ-ತಾಯಿ ಹಾಗೂ ಸಹೋದರರು ನಿಧನ ಹೊಂದಿದ್ದರು. ಬಸವರಾಜ್​ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಈತನಿಗೆ 8 ಎಕರೆ ಜಮೀನು, ಮನೆ ಇತ್ತು. ಜತೆಗೆ ಆರೋಪಿಗಳೇ ಮೃತನಿಗೆ ಆಕ್ಸಿಡೆಂಟಲ್ ಇನ್ಷೂರೆನ್ಸ್‌ ಮಾಡಿಸಿದ್ದರು. ಈಗ ಅದರ ಅವಧಿ ಮುಗಿಯುತ್ತ ಬರುತ್ತಿದ್ದ ಹಿನ್ನೆಲೆ ವಿಮೆ​ ಕ್ಲೈಮ್‌ ಮಾಡಲು ಆರೋಪಿಗಳು ಈ ರೀತಿ ಪ್ಲ್ಯಾನ್ ಮಾಡಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ಯಶೋಧಾ ವಂಟಗೋಡಿ ಪ್ರಕರಣವನ್ನು ವಿವರಿಸುತ್ತ, “ಸೆಪ್ಟೆಂಬರ್ ​​27ರಂದು ನಮ್ಮ ಸ್ಟೇಷನ್​ ರೋಡ್​ ರಟ್ಟಿಹಳ್ಳಿಯಲ್ಲಿ ಹಿಟ್​ ಆ್ಯಂಡ್​ ರನ್​ ಪ್ರಕರಣದ ತರಹ ಮೃತದೇಹ ಬಿದ್ದಿರುತ್ತದೆ. ಆತ ಬಸವರಾಜ್​ ಎಂದು ತಿಳಿದು ಬರುತ್ತದೆ. ಮೃತನ ಸಂಬಂಧಿ ಶಿವಕುಮಾರ್​ ಎಂಬುವವರು ಬಂದು ಹಿಟ್​ ಆ್ಯಂಡ್​ ರನ್​ ಆಗಿದೆ ಎಂದು ದೂರು ನೀಡಿದ್ದರು. ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದೆವು. ಈ ಮಧ್ಯೆ ದೂರುದಾರ ಆತನ ಸಾವಿನಲ್ಲಿ ಅನುಮಾನವಿದೆ. ಆತನಿಗೆ 8 ಎಕರೆ ಜಾಗ ಹಾಗೂ ಇನ್ಶೂರೆನ್ಸ್​ ಇತ್ತು. ಆ ಕಾರಣಕ್ಕೆ ಯಾರೋ ಕೊಲೆ ಮಾಡಿದ್ದಾರೆಂದು ಹೇಳಿದ್ದರು. ತಕ್ಷಣ ನಾವು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಾಗ ಅದು ಅಪಘಾತವಲ್ಲ ಕೊಲೆ ಎಂಬುದು ಬೆಳಕಿಗೆ ಬರುತ್ತದೆ” ಎಂದು ಹೇಳಿದರು.

ಕಳೆದ ವರ್ಷ ಪ್ರಧಾನಿ ಮಂತ್ರಿಯವರ ಯೋಜನೆಯ 10 ಲಕ್ಷದ ಮೌಲ್ಯದ ಇನ್ಷೂರೆನ್ಸ್ ಅನ್ನು ಮೃತ ವ್ಯಕ್ತಿಗೆ ಆರೋಪಿಗಳೇ​ ಮಾಡಿಸಿದ್ದರು. ಅದು ಈ ತಿಂಗಳ 18ಕ್ಕೆ ಮುಗಿಯಲಿತ್ತು. ಮೃತನಿಗೆ ಮನೆ, ಜಮೀನು ಇದ್ದು, ಈತನಿಗೆ ತಂದೆ-ತಾಯಿ, ಇಬ್ಬರು ಅಣ್ಣಂದಿರೂ ಇದ್ದರು. ಆ 4 ಜನಗಳು 2 ವರ್ಷದ ಒಳಗೆ ಸತ್ತುಹೋಗಿದ್ದಾರೆ. ಮೃತನಿಗೆ ಯಾರೂ ಇರಲಿಲ್ಲ, ಮದುವೆಯೂ ಆಗಿರಲಿಲ್ಲ, ಜತೆಗೆ ಕುಡಿಯುತ್ತಿದ್ದ. ಇದನ್ನೇ ಉಪಯೋಗಿಸಿಕೊಂಡಿದ್ದ ಆರೋಪಿಗಳು ಮೃತನ ಹತ್ತಿರ ಮನೆ, ಜಮೀನಿನ ವಿಲ್​ ಮಾಡಿಸಿಕೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಅಪ್ರಾಪ್ತ ಬಾಲಕಿ ಮೇಲಾದ ಕೃತ್ಯ ಖಂಡಿಸಿ ಪ್ರತಿಭಟನೆ

“ಹಾಗೇ ಮಾಡಿಸಿದ್ದ ಇನ್ಷೂರೆನ್ಸ್​ ನಮಗೆ ಕ್ಲೈಮ್​​ ಆಗಬೇಕೆಂದು ಆರೋಪಿಗಳು ಉಪಾಯ ಮಾಡಿದ್ದರು. ಮೃತನು ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದ. ಅಲ್ಲಿಂದ ಅವನನ್ನು ಡಿಸ್ಚಾರ್ಜ್​ ಮಾಡಿಸಿಕೊಂಡು ಬಂದ ಆರೋಪಿಗಳು ಆತ ಶೌಚಕ್ಕೆ ಹೋಗಬೇಕಾಗಿ ಕೇಳಿದಾಗ ನಡು ರಸ್ತೆಯಲ್ಲಿ ಕೂರಿಸಿ ಹಿಂದಿನಿಂದ ವಾಹನ ತೆಗೆದುಕೊಂಡು ಜೋರಾಗಿ ಬಂದು ಆತನ ಮೇಲೆ ಹತ್ತಿಸಿಕೊಂಡು ಹೋಗಿದ್ದಾರೆ. ಇದನ್ನು ಆರೋಪಿಗಳೇ ಒಪ್ಪಿಕೊಂಡಿದ್ದಾರೆ” ಎಂದು ಎಸ್‌ಪಿ ಯಶೋಧಾ ವಂಟಗೋಡಿ ವಿವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ ಭೀತಿಯಲ್ಲಿ ರಾಜಕೀಯ ಪಕ್ಷಗಳು!

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ...

ಬಾಗೇಪಲ್ಲಿ | ಪರಿಷತ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಗೆಲವಿಗೆ ಶ್ರಮಿಸಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನೂ ಪ್ರಾಮಾಣಿಕವಾಗಿ ಮತದಾರರನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ...

ಚಿಂತಾಮಣಿ | ಅಪಘಾತಕ್ಕೀಡಾದ ಸವಾರನ ಜೀವ ಉಳಿಸಿದ ಪೊಲೀಸ್‌ ಸಿಬ್ಬಂದಿಗೆ ಎಸ್‌ಪಿ ಗೌರವ

ಚಿಂತಾಮಣಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ...

ವಿಜಯಪುರ | ಗ್ರಾಮೀಣ ಪ್ರತಿಭೆಯ ಅಂತಾರಾಷ್ಟ್ರೀಯ ಸಾಧನೆಗೆ ಎಂ.ಬಿ ಪಾಟೀಲ ಮೆಚ್ಚುಗೆ

ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ...