ಹಾವೇರಿ | ಸತ್ತಳೆಂದು ಅಂತ್ಯಕ್ರಿಯೆ ಸಿದ್ದತೆ ವೇಳೆ, ಸಾವಿನಂಚಿನಿಂದ ಪಾರಾದ ಅಜ್ಜಿ

Date:

ಅಜ್ಜಿ ಸತ್ತಳೆಂದು ಕುಟುಂಬಸ್ಥರೆಲ್ಲಾ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ರು. ಕೊನೇ ಕ್ಷಣದಲ್ಲಿ ಜೀವಂತ ಇದ್ದ ಮಹಿಳೆ ಉಸಿರಾಡುವುದನ್ನು ಕಂಡು, ಸಾವಿನಂಚಿನಿಂದ ಪಾರಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದಿದೆ. ಗ್ರಾಮದ 63 ವರ್ಷದ ರೇಣುಕಮ್ಮ ಸಂಕೋಳ್ಳಿ ಬದುಕಿದವರು.

- Advertisement -

ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕು ಗೊಡಚಿಕೊಂಡದ ಮಹಿಳೆ ರೇಣುಕಮ್ಮ ಸಂಕೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 63 ವರ್ಷದದ ರೇಣುಕಮ್ಮ ಮೊನ್ನೆ ಸೋಮವಾರ ರಾತ್ರಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ರು. ಬಿಪಿ, ಶುಗರ್ ಲೋ ಆಗಿ ಪ್ರಜ್ಞೆ ಕಳೆದುಕೊಂಡಿದ್ದರು. ಗ್ರಾಮದ ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಸ್ಥಳೀಯ ವೈದ್ಯರು ರೇಣುಕಮ್ಮ ಬದುಕೋದು ಸಂದೇಹ ಅಂತ ತಿಳಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೆ.23 ‘ಭೀಮ ಸಂಕಲ್ಪ ದಿನ’: ಡಾ ಬಿ ಆರ್...

1917ರ ಸೆಪ್ಟೆಂಬರ್ 23ರಂದು ವಡೋದರದ ಆಲದ ಮರದ ಕೆಳಗೆ ಕುಳಿತಿದ್ದ ಯುವ ಅಂಬೇಡ್ಕರ್ ಅವರ ಬಳಿ ಅಧಿಕಾರವಿರಲಿಲ್ಲ, ದೊಡ್ಡ ಸಂಘಟನೆಯಿರಲಿಲ್ಲ. ಆದರೆ ಅನ್ಯಾಯವನ್ನು ಒಪ್ಪಿಕೊಳ್ಳದ ಮನಸ್ಸು ಮತ್ತು ಸಮಾಜವನ್ನು ಬದಲಿಸಬೇಕೆಂಬ ದೃಢ ಸಂಕಲ್ಪವಿತ್ತು....

ಸೌಜನ್ಯ ಪ್ರಕರಣ: ಪ್ರಭಾವಿಗಳ ಜೊತೆ ಲಜ್ಜೆ ಬಿಟ್ಟು ಹೆಜ್ಜೆ...

ತನಿಖಾಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದರೇ ಅಥವಾ ಬಲಾಢ್ಯರ ಒತ್ತಡಕ್ಕೆ ಮಣಿದು ಸಾಕ್ಷ್ಯ ನಾಶ ಮಾಡಿ ಅಪರಾಧಿಗಳ ರಕ್ಷಣೆಗೆ ನಿಂತರೇ ಎಂಬ ಅನುಮಾನ ಸಾಮಾನ್ಯ ಜನರಿಗೂ ಬರುತ್ತಿರುವಾಗ ಕರ್ನಾಟಕದ ಬಹುತೇಕ ಸುದ್ದಿ ಮಾಧ್ಯಮಗಳು ಈ...

ಉತ್ತರ ಪ್ರದೇಶ | ಅಖಿಲೇಶ್ ‘ಧರ್ಮ ರಕ್ಷಣೆ’ಯ ಯುದ್ಧ...

ಉತ್ತರ ಪ್ರದೇಶದ ಯುವಜನತೆಯ (Gen Z) ಅಸಮಾಧಾನ, ನಿರುದ್ಯೋಗ ಸಮಸ್ಯೆ ಮತ್ತು ಬದಲಾಗುತ್ತಿರುವ ಜಾತಿ ಸಮೀಕರಣಗಳು ತಮಗೆ ಪೂರಕವಾಗಿವೆ ಎಂಬುದನ್ನು ಅಖಿಲೇಶ್ ಯಾದವ್ ಅರಿತಿದ್ದಾರೆ. ತಮ್ಮ ಪಕ್ಷ ಕೇವಲ "ಮುಸ್ಲಿಂ ಮತ್ತು ಯಾದವರ...

ಕೊನೆಗೆ ರೇಣುಕಮ್ಮ ಅವರ ಉಸಿರಾಟವೂ ಕಡಿಮೆ ಆಗಿತ್ತು. ರೇಣುಕಮ್ಮ ಮೃತಪಟ್ಟಿದ್ದಾರೆಂದು ತಿಳಿದು ಸಂಬಂಧಿಕರಿಗೆ ಮಾರನೇ ದಿನ ಅಂತ್ಯ ಸಂಸ್ಕಾರಕ್ಕೆ ಬರಲು ತಿಳಸಿದ್ದ ಕುಟುಂಬಸ್ಥರು. ಕೆಲವು ಸಂಬಂಧಿಕರು ಅಂತಿಮ ದರ್ಶನಕ್ಕೆ ಹಾರವನ್ನ ತೆಗೆದುಕೊಂಡು ಬಂದಿದ್ದರು. ಅಂತಿಮ ದರ್ಶನದ ವೇಳೆ ರೇಣುಕಮ್ಮ ಉಸಿರಾಡ್ತಿರೋದನ್ನ ನೋಡಿ ಕುಟುಂಬಸ್ಥರು ಹಿರೇಕೇರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಖಾಸಗಿ ವೈದ್ಯರ ತುರ್ತು ಚಿಕಿತ್ಸೆಯಿಂದ ರೇಣುಕಮ್ಮ ಚೇತರಿಸಿಕೊಂಡಿದ್ದಾರೆ.

ಸದ್ಯ ರೇಣುಕಮ್ಮ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದ ಕುಟುಂಬಕ್ಕೆ ಮರುಜೀವ ಬಂದ ಸಂತಸ ಮನೆ ಮಾಡಿದೆ.

Advertisements

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಲಿತ ಸಂಘಟನೆ, ನೀಲಿ ಶಾಲಿನ ಕುರಿತು ಅವಹೇಳನಕಾರಿ ಹೇಳಿಕೆ: ಮುತ್ತಣ್ಣ ಮೇತ್ರಿ ಆಕ್ರೋಶ

ಮಾಜಿ ಸಂಸದ ಪ್ರತಾಪ್ ಸಿಂಹ ದಲಿತ ಸಂಘಟನೆಗಳು, ದಲಿತ ಮುಖಂಡರು ಹಾಗೂ...

ಕೋಲಾರ | ನರಸಾಪುರದಲ್ಲಿ ಸೆ.26ರಂದು ಪ್ರಜಾ ಸೇವೆ ಆಂದೋಲನ

ಒಂದೇ ಸೂರಿನಡಿ ಸಾರ್ವಜನಿಕರ ಅರ್ಜಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ...