“ಕರ್ನಾಟಕ ರಾಜ್ಯ ನೂತನ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಶಾಸಕರು ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ನೀಡಬೇಕು” ಕ್ಷತ್ರೀಯ ಮರಾಠ ಸೇವಾ ಸಮಿತಿ ಮುಖಂಡರು ಆಗ್ರಹಿಸಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷತ್ರೀಯ ಮರಾಠ ಸೇವಾ ಸಮಿತಿ ವತಿಯಿಂದ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ ಪಕ್ಷ ರಟ್ಟಿಹಳ್ಳಿ ಬ್ಲಾಕ್ ಜಿಲ್ಲಾ ಅಧ್ಯಕ್ಷರ ಮೂಲಕ ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮರಾಠ ಸಮಿತಿ ಉಪಾಧ್ಯಕ್ಷರು ಯಲ್ಲಪ್ಪ ಮರಾಠೆ ಮಾತನಾಡಿ, “ನಮ್ಮ ಕ್ಷತ್ರಿಯ ಮರಾಠಾ ಸಮಾಜದ ಶಾಸಕರು ಶ್ರೀನಿವಾಸ ಮಾನೆ ಮತ್ತು ಸಂತೋಷ ಲಾಡ್, ಇವರಿಗೆ ಸಚಿವ ಸ್ಥಾನ ನೀಡಬೇಕು. ಅನೇಕ ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಅಭಿವೃದ್ಧಿಗೆ ಶ್ರಮಿಸಿದ್ದಾರೆ” ಎಂದು ಹೇಳಿದರು.
ಮರಾಠ ಸಮಾಜದ ಅಧ್ಯಕ್ಷರು ಅಣ್ಣಪ್ಪ ಸಾಳಂಕೆ ಮಾತನಾಡಿ, “ವಿಶೇಷವಾಗಿ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ನಮ್ಮ ಸಮುದಾಯದ ಶಾಸಕರು ಶ್ರೀನಿವಾಸ ಮಾನೆ ಅವರು ಎರಡು ಬಾರಿ ವಿಧಾನ ಪರಿಷರತ್ ಸದಸ್ಯರು, ಎರಡು ಬಾರಿ ಶಾಸಕರಾಗಿ ಹಾವೇರಿ ಜಿಲ್ಲೆಯಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಜಿಲ್ಲೆಯಲ್ಲಿ ಸರ್ವ ಧರ್ಮೀಯರನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುವಂತಹ ನಾಯಕರು, ಹಾಗೂ ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಅಭಿವೃದ್ದಿ ಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಾರೆ” ಎಂದು ಹೇಳಿದರು.
ಶಾಸಕ ಶ್ರೀನಿವಾಸ ಮಾನೆ ಸಚಿವ ಸ್ಥಾನ ನೀಡಬೇಕು. ಇದರಿಂದ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷವನ್ನು ಬಲ ಪಡಿಸಿದಂತಾಗುತ್ತದೆ. ನಮ್ಮ ಕ್ಷತ್ರೀಯ ಮರಾಠ ಸಮಾಜದವರಿಗೆ ಗೌರವಿಸಿದಂತಾಗುತ್ತದೆ” ಎಂದು ಮನವಿ ಮಾಡಿದರು.
ಮನವಿ ಸಂದರ್ಭದಲ್ಲಿ ಮರಾಠ ಸಮಾಜದ ಮುಖಂಡುರು ನಾರಾಯಣ ಪವಾರ, ಮಂಜು ಅಸ್ವಾಲಿ, ಮಾರುತ್ತಿ ಜಾದವ, ಶಿವಾಜಪ್ಪ ಬಿಳಚಿ, ಕಿಟ್ಟಪ್ಪ ಬಾಜೀರಾಯರ, ಸಂತೋಷ ಬಾಜೀರಾಯರ, ಚಿದಾನಂದ ಮಾನೆ, ನಾಗರಾಜ ನನ್ನಮೋರೆ ಉಪಸ್ಥಿತರಿದ್ದರು.





