“ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ, ಪ್ರಜಾಪ್ರಭುತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಕನಸಿನಿಂದ ನಮ್ಮ ನಾಯಕರು 17 ವರ್ಷದ ಹಿಂದೆ ಒಂದು ದೀಪವನ್ನು ಬೆಳಗಿಸಿದ್ದರು. ಇಂದು ಆ ದೀಪವು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ದೊಡ್ಡ ಆಂದೋಲನವಾಗಿ ಬೆಳೆದಿದೆ” ಎಂದು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯರು ಖಾಸೀಂ ರಬ್ಬಾನಿ ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದಲ್ಲಿ ಜೂನ್ 21ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) 18 ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
“ಅನ್ಯಾಯ, ದೌರ್ಜನ್ಯ ಮತ್ತು ಫ್ಯಾಸಿಸ್ಟ್ ಧೋರಣೆಗಳ ವಿರುದ್ಧ ಎಸ್‌ಡಿಪಿಐ ನಿರಂತರವಾಗಿ ಹೋರಾಟ ನಡೆಸಿರುವ ಕಾರಣ ಅನೇಕ ಸವಾಲುಗಳನ್ನು ಎದುರಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಎಮ್.ಕೆ.ಫೈಜಿ ಸೇರಿದಂತೆ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಕಿರುಕುಳ, ಪ್ರಕರಣಗಳು ಹಾಗೂ ಬಂಧನಗಳನ್ನು ಎದುರಿಸಿದ ಸಂದರ್ಭಗಳನ್ನು ಮರೆಯಲಾಗುವುದಿಲ್ಲ” ಎಂದರು.
“ಯಾವುದೇ ಒತ್ತಡ, ಬೆದರಿಕೆ ಅಥವಾ ದಮನಕಾರಿ ಕ್ರಮಗಳು ನಮ್ಮ ಹೋರಾಟದ ಸಂಕಲ್ಪವನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾವು ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳಿಗಾಗಿ ಇಟ್ಟಿರುವ ಹೆಜ್ಜೆಯನ್ನು ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲ. ರಾಜಕೀಯವಾಗಿ ಇನ್ನಷ್ಟು ಬಲಿಷ್ಠವಾಗಿ ಸಂಘಟಿತರಾಗಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ದೇಶದ ಆಡಳಿತದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಪಡೆಯಬೇಕು. ಈ ಗುರಿಯೊಂದಿಗೆ ಕೆಲಸ ಮಾಡಬೇಕು” ಎಂದು ಹೇಳಿದರು.
“ನಮ್ಮ ಪಕ್ಷದ ನಾಯಕರ ದೃಢ ನಿಲುವು, ತ್ಯಾಗ ಬಲಿದಾನ ಕಾರ್ಯಕರ್ತರ ಹೋರಾಟ ಮನೋಭಾವ ಸಮರ್ಪಣೆಯಿಂದ ಇಂದು ನಮ್ಮ ಪಕ್ಷವು ಪರ್ಯಾಯ ರಾಜಕೀಯ ಪಕ್ಷವಾಗಿ ಬೆಳೆದಿದೆ. ನಮ್ಮ ನಾಯಕರ ಕನಸಾದ ಪ್ರಜಾಪ್ರಭುತ್ವ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಕನಸನ್ನು ನಾವೆಲ್ಲರೂ ಎತ್ತಿಹಿಡಿಯಬೇಕು” ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಲ್ಮಾನ್ ಖತೀಬ್ ಮಾತನಾಡಿ “ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ನವಭಾರತ ನಿರ್ಮಾಣದ ಕನಸನ್ನು ನನಸಾಗಿಸಲು ಎಸ್‌ಡಿಪಿಐಯ ಚಳುವಳಿ ಮತ್ತು ಹೋರಾಟಗಳೊಂದಿಗೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸೋಣ” ಎಂದು ಹೇಳಿದರು.
ತಾಲೂಕು ಅಧ್ಯಕ್ಷರಾದ ಆಫ್ರೋಜ್ ಅಲಿ ಮುದೇನೂರ್ ಮಾತನಾಡಿ, “ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿಂದಲೇ ಸಜ್ಜಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
“ತಾಲೂಕು ಉಪಾಧ್ಯಕ್ಷರು ಇರ್ಷಾದ್ ಕುಂಚೂರ್ ಕಳೆದ 17 ವರ್ಷಗಳ ಹೋರಾಟದ ಪಯಣದಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಅನೇಕ ನಾಯಕರು, ಕಾರ್ಯಕರ್ತರು ಮತ್ತು ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರ ತ್ಯಾಗ, ಬದ್ಧತೆ ಮತ್ತು ಹೋರಾಟದ ಮನೋಭಾವವೇ ಇಂದು ಎಸ್‌ಡಿಪಿಐಯನ್ನು ದೇಶದ ಪ್ರಮುಖ ಜನಪರ ರಾಜಕೀಯ ಶಕ್ತಿಯಾಗಿ ಬೆಳೆದಿದೆ” ಎಂದರು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಅಫ್ರೋಜ್ ಮುದೇನೂರ್, ಜಿಲ್ಲಾ ಉಪಾಧ್ಯಕ್ಷರಾದ ಸಲ್ಮಾನ್ ಖತೀಬ್, ತಾಲೂಕು ಉಪಾಧ್ಯಕ್ಷರಾದ ಇರ್ಶಾದ್ ಕುಂಚೂರ್ ಪ್ರಧಾನ ಕಾರ್ಯದರ್ಶಿಯಾದ ಸಮೀ ಅಹ್ಮದ್ ಖತೀಬ್, 15ನೇ ವಾರ್ಡ್ ಬ್ರಾಂಚ್ ನ ಅಧ್ಯಕ್ಷರಾದ ತೌಸಿಫ್, ಕಾರ್ಯದರ್ಶಿ ಸಾಕಿಬ್, ಹಲವಾರು ಕಾರ್ಯಕರ್ತರು ಮುಖಂಡರು ನಮ್ಮ ಪಕ್ಷದ ಹಿತ್ಯಾಷಿಗಳು ಉಪಸ್ಥಿತರಿದ್ದರು.




