“ಟಿಎಮ್ಇಎ ಶಿಕ್ಷಣ ಸಂಸ್ಥೆ ಎದುರು ಕಡ್ಡಾಯವಾಗಿ ಬಸ್ ನಿಲ್ಲಿಸಲು ಹಾಗೂ ನಗರ ಸಾರಿಗೆ ಬಸ್ ಪ್ರಾರಂಭಿಸಲು, ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಟಿಎಮ್ಇಎ ಕಾಲೇಜ್ ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾವೇರಿ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಟಿಎಮ್ಇಎ ಶಿಕ್ಷಣ ಸಂಸ್ಥೆ ಎದುರು ಕಡ್ಡಾಯವಾಗಿ ನಿಲ್ಲಸದೆ ವೇಗವಾಗಿ ಹೋಗುವ ಬಸ್ ಗಳಿಂದ ವಿದ್ಯಾರ್ಥಿಗಳು ಬಿದ್ದು ಗಾಯಗೊಂಡಿದ್ದಾರೆ. ವಿವಿಧ ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲಕ್ಕೆ ತಕ್ಕಂತೆ ಬಸ್ಸಿನ ಅನಾನುಕೂಲ ವಿಪರೀತವಾಗಿದ್ದು, ಅನೇಕ ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಪ್ರತಿಭಟನೆ ಮಾಡಿ ಮನವಿ ಮಾಡಿಕೊಂಡರು ಈವರೆಗೆ ಯಾವುದೇ ರೀತಿಯ ಸ್ಪಂದನೆ ಮಾಡಿಲ್ಲ. ಬಸ್ಸಿನ ವ್ಯವಸ್ಥೆ ಕಲ್ಪಿಸಲು ವಿಫಲತೆಯನ್ನು ಎಸ್ಎಫ್ಐ ಖಂಡಿಸುತ್ತದೆ.
ವಿದ್ಯಾರ್ಥಿಗಳು, ಉಪನ್ಯಾಸಕರು ಅನುಕೂಲಕ್ಕೆ ತಕ್ಕಂತೆ ಮುಂಜಾನೆ ಮತ್ತು ಮಧ್ಯಾಹ್ನ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈ ವರೆಗೂ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹಾಗೂ ಗ್ರಾಮೀಣ ಭಾಗದಿಂದ ಬಂದು ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಿಂದ ಐದಾರು ಕಿ.ಲೋ ಶಾಲಾ – ಕಾಲೇಜ್ , ಹಾಸ್ಟೆಲ್, ಸರ್ಕಾರಿ ಕಛೇರಿಗಳಿದ್ದು ಓಡಾಡಲು ಬಹಳ ತೊಂದರೆ ಆಗುತ್ತಿದೆ ಅದರಿಂದ ನಗರ ಸಾರಿಗೆ ಬಸ್ ವ್ಯವಸ್ಥೆ ಈ ಕೂಡಲೇ ಪ್ರಾರಂಭಿಸಬೇಕು ಆದರ ಮೂಲಕ ಟಿಎಮ್ಇಎ ಕಾಲೇಜು ಎದುರು ಕಡ್ಡಾಯವಾಗಿ ಬಸ್ ನಿಲ್ಲಿಸಬೇಕು ಹಾಗೂ ಎಸ್ಎಫ್ಐ ನೇತೃತ್ವದಲ್ಲಿ ಸಭೆ ಕರೆದು ಅನೇಕ ಗ್ರಾಮೀಣ ಪ್ರದೇಶಗಳ ಬಸ್ಸಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮುಖಂಡರಾದ ಅರುಣ್ ಕುಮಾರ್ ನಾಗವತ್, ಟಿಎಮ್ಇಎ ಕಾಲೇಜ್ ಘಟಕ ಅಧ್ಯಕ್ಷ ಕಾಂತೇಶ್ ಪೂಜಾರ, ಕಾರ್ಯದರ್ಶಿ ತಸ್ಲೀಮ್ ಭಾನು ಕುಂದೂರ, ಉಪಾಧ್ಯಕ್ಷರು ಉದಯಕುಮಾರ್, ವೀರನಗೌಡ, ಸಹ ಕಾರ್ಯದರ್ಶಿ ನಾಗರಾಜ, ಚೇತನ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




