“ಕ್ರೀಡಾ ಇತಿಹಾಸದಲ್ಲಿ ಮುಳಗುಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿದ್ದು ಎಂಟು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ಕ್ರೀಡಾಂಗಣ, ಈಜುಕೊಳ, ಒಳಾಂಗಣ ಕ್ರೀಡಾಂಗಣ ಇಲ್ಲಿನ ಮಕ್ಕಳ ಪ್ರತಿಭೆಯನ್ನು ಎತ್ತರಕ್ಕೆ ಸಾಧಿಸುವಲ್ಲಿ ಈ ಯೋಜನೆ ಸಾಕಾರಗೊಳಲಿದೆ” ಎಂದು ಶಾಸಕರಾದ ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲಾಡಳಿತ, ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದಲ್ಲಿ ಮೂರು ಕೋಟಿ ರೂಗಳ ವೆಚ್ಚದಲ್ಲಿ ಕ್ರೀಡಾ ಮೈದಾನದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಈಜುಕೋಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಸಾಹಿತ್ಯ, ಸಂಸ್ಕ್ರತಿ, ಕ್ರೀಡೆ ಹಾಗೂ ಸೇವಾ ಕ್ಷೇತ್ರದಲ್ಲಿ ಹಲವು ಮಹನೀಯರು ಇತಿಹಾಸದಲ್ಲಿ ಅಜರಾಮರವಾಗಿ ಇರುವಂತಾ ಕೆಲಸ ಮಾಡಿದ್ದಾರೆ.
“ಹಾಕಿ, ಕ್ರಿಕೆಟ್, ಪುಟ್ಬಾಲ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಉತ್ತೇಜನ ನೀಡಯವ ಮೈದಾನಗಳು ನಿರ್ಮಾಣವಾಗಿವೆ. ಈವರೆಗೂ ಗದಗ ಮತಕ್ಷೇತ್ರದಲ್ಲಿ ಏಳು ಈಜುಕೊಳ ನಿರ್ಮಾಣವಾಗಿದ್ದು ಗದಗ ಜಿಲ್ಲೆ ಪಿಕಲ್ ಬಾಲ್ ಕ್ರೀಡಾ ಮೈದಾನ, ಬಿಲ್ಲು ಕ್ರೀಡೆ, ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಸೌಲಭ್ಯವನ್ನು ನೀಡಕಾಗಿದೆ. ಎಲ್ಲ ಸೌಲಭ್ಯ ಸಂಪೂರ್ಣವಾಗಿ ಬಳಸಿಕೊಂಡು ಭವಿಷ್ಯದಲ್ಲಿ ನಾನು ಒದಗಿಸುವ ಯೋಜನೆ ಸದ್ಬಳಕೆಯಾಗಿಸಿಕೊಳಬೇಕು. 2027 ರ ಹೊತ್ತಿಗೆ ಮುಳಗುಂದದಲ್ಲಿ ಈಜುಕೊಳ, ಕ್ರೀಡಾಂಗಣ, ಮಕ್ಕಳ ಆಟಕ್ಕೆ ಅನುಕೂಲವುವ ನಿಟ್ಟಿನಲ್ಕಿ ಸುಸಜ್ಜಿತ ಕಾಮಗಾರಿ ನಡೆಯಬೇಕು” ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮುಳಗುಂದ ಗವಿಮಠಾಧ್ಯಕ್ಷರು, ನುರುಘಾ ಮಠದ ಮಲ್ಕಿಕಾರ್ಜುನ ಶ್ರೀಗಳು ಮಾತನಾಡಿ ಶಿಕ್ಷ, ಕ್ರೀಡೆ, ಸಂಸ್ಕ್ರತಿ, ಸಂಸ್ಕಾರಗಳು ಮಕ್ಕಳಲ್ಲಿ ಇಂದು ಅಗತ್ಯವಾಗಿ ಬೇಕಾಗಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡಾಂಗಣ ಪ್ರೇರಣೆಯಾಗಲಿ ಎಂದರು.
“ಎಂ.ಎಸ್. ಸುಂಕಾಪೂರ ಭವನ ನಿರ್ಮಾಣ ಮುಳಗುಂದ ಸಾಹಿತ್ಯ, ಪರಂಪರೆಯ ವಿಶೇಷ ಕೊಡುಗೆ ನೀಡಿದ್ದು ಮುಳಗುಂದ ಪಟ್ಟಣದಲ್ಲಿ ಎಂ.ಎಸ್. ಸುಂಕಾಪೂರ ಸ್ಮರಣಾರ್ಥ ಸಂಸ್ಕೃತಿ ಭವನ ನಿರ್ಮಾಣ ಮಾಡಲು ವಿಶೇಷ ಅನುದಾನ ಒದಗಿಸಲಾಗುವುದು ಆ ಮೂಲಕ ಸಾಹಿತ್ಯ, ಸಂಗೀತ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲ, ನಗೆಗಾರ ನಯಸೇನ, ಕೈವಲ್ಯ ಸಾಹಿತ್ಯಕ್ಕೆ ಹಿರಿಮೆಯಾದ ಬಾಲಲೀಲಾ ಮಹಾಂತ ಶಿವಯೋಗಿಗಳು, ಇಲ್ಲಿನ ಕ್ರೀಡಾ ಪ್ರತಿಭೆಗಳು ನಿರಂತರವಾಗಿ ನೆನಪಿನಲ್ಲಿಡುವ ಉದ್ಧೇಶದಿಂದ ಸಂಸ್ಕ್ರತಿ ಭವನ ನಿರ್ಮಾಣ ಮಾಡಲಾಗುವುದು” ಎಂದರು.
ಈ ಸಂದರ್ಭದಲ್ಲಿ ಬಾಲಲೀಲಾ ಮಹಾಂತ ಶಿವಯೋಗಿ ಸೇವಾ ಸಮಿತಿ ಅಧ್ಯಕ್ಷರಾದ ಎಂ.ಡಿ. ಬಟ್ಟೂರ, ಎಸ್.ಎಂ ನೀಲಗುಂದ, ಜಿಪಂ ಮುಖ್ಯಕಾರ್ಯನಿರ್ವಹಾಧಿಕಾರಿ ಮುಖುಲ್ ಜೈನ, ಷಣ್ಮುಖಪ್ಪ ಬಡ್ನಿ, ಡಾ; ಎಸ್.ಸಿ. ಚವಡಿ, ಬಸವರಾಜ ಬಡ್ನಿ, ಬಿ.ವ್ಹಿ. ಸುಂಕಾಪೂರ, ಯಲ್ಲವ್ವ ಕವಲೂರ, ಪರಶುರಾಮ ವಂಟಕರ, ನಾಗರಾಜ ದೇಶಪಾಂಡೆ, ಸಿದ್ದು ಪಾಟೀಲ, ಮಹಾಂತೇಶ ನೀಲಗುಂದ, ಮಹದೇವಪ್ಪ ಗಡಾದ, ಕೆ.ಎಲ್. ಕರಿಗೌಡ್ರ, ವ್ಹಿ.ಎಸ್. ನೀಲಗುಂದ. ಸರ್ಪರಾಜ ಶೇಖ, ಐ.ಎಂ. ಶೇಖ, ಐಶ್ವರ್ಯ ಕರಿಗಾರ, ಯುವ ಸಬಲೀಕರಣ ಹಾಗೂ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸ್ವಾಗತಿಸಿದರು, ಆಕಾಶ ಯಲವಿಗಿ ಪ್ರಾರ್ಥಿಸಿದರು. ವರ್ಷಾ ಬಾರಕೇರ ನಿರೂಪಿಸಿದರು.



