ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ 2016 ರಿಂದ 2018ರವರೆಗೆ ಜವಳಿ ಮತ್ತು ಮುಜರಾಯಿ ಸಚಿವರಾಗಿ ಕೆಲಸ ಮಾಡಿದ್ದ ರುದ್ರಪ್ಪ ಲಮಾಣಿ ಅವರಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಈ ಬಾರಿ ಸಚಿವ ಸ್ಥಾನ ಒಲಿದು ಬಂದಿದೆ.
ಉಪ ಸಭಾಧ್ಯಕ್ಷ ಹಾಗೂ ಪ್ರಭಾರಿ ಸಭಾಧ್ಯಕ್ಷರಾಗಿದ್ದ ಅವರು ಈಗ ಆ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ. ಜತೆಗೆ, ಹೊಸದಾಗಿ ಲಭಿಸಿರುವ ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಸುದ್ದಿ ಓದಿದ್ಧೀರಾ? ಮುದ್ದೇಬಿಹಾಳ | ನಾಡಗೌಡಗೆ ಒಲಿಯದ ಮಂತ್ರಿಗಿರಿ: ಬೆಂಬಲಿಗರಲ್ಲಿ ಅಸಮಾಧಾನ
ರಾಜ್ಯದಲ್ಲಿ ಬಂಜಾರ ಸಮುದಾಯಕ್ಕೆ ಸೇರಿರುವ ಏಕೈಕ ಶಾಸಕ ರುದ್ರಪ್ಪ ಲಮಾಣಿ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಮಣೆ ಹಾಕಿದೆ. ಆರು ಕಾಂಗ್ರೆಸ್ ಶಾಸಕರಿರುವ ಹಾವೇರಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕೆಂಬ ಕೂಗು ಹೆಚ್ಚಿತ್ತು. ಬಸವರಾಜ ಶಿವಣ್ಣನವರ ಹಾಗೂ ಶ್ರೀನಿವಾಸ್ ಮಾನೆ ಕೂಡ ಪೈಪೋಟಿ ನಡೆಸುತ್ತಿದ್ದರು. ಇದರ ನಡುವೆಯೇ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.




