“ಹಾವೇರಿ ವಿವಿ ಸ್ಥಾಪನೆಗೊಂಡ ಮೂರು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯಗಳ ಕೊರತೆಗಳ ಮಧ್ಯೆ ಬಳಲುತ್ತಿದೆ. ಅನುದಾನ ನೀಡಿ ಅಭಿವೃದ್ಧಿ ಮಾಡಬೇಕಿದ ಸರ್ಕಾರವೇ ವಿವಿ ಮುಚ್ಚುವ ಹುನ್ನಾರು ನಡೆಸಿತ್ತು. ಈ ಹುನ್ನಾರ ನೀತಿಯನ್ನು ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಪ್ರಗತಿಪರ, ಸಮಾನಮನಸ್ಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿ ಉಳಿಸಿಕೊಳ್ಳಲಾಗಿದ್ದು, ಜೂನ್-17 ಬುಧವಾರ ದಿನದಂದು ಎಸ್ಎಫ್ಐ ಹಾವೇರಿ ವಿವಿ ಘಟಕದ ಪ್ರಥಮ ಸಮ್ಮೇಳನ ಆಯೋಜಿಸಲಾಗಿದೆ” ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ್ ಎಸ್ ಹೆಳಿದರು.
ಹಾವೇರಿ ಪಟ್ಟಣದ ಕೆರೆಮತ್ತಿಹಳ್ಳಿಯಲ್ಲಿರುವ ಹಾವೇರಿ ವಿವಿ ಕ್ಯಾಂಪಸ್ಸಿನಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ, ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ವಿವಿ ಘಟಕ ಪ್ರಥಮ ಸಮ್ಮೇಳನದ ಲೋಗೋವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
“ಸರ್ವರಿಗೂ ಶಿಕ್ಷಣ ಮತ್ತು ಉದ್ಯೋಗದ ಮೂಲಭೂತ ಹಕ್ಕಿಗಾಗಿ” ನಿರಂತರ ಚಳುವಳಿಯನ್ನು ಸಂಘಟಿಸುತ್ತ ಬರುತ್ತಿದೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ಸೌಹಾರ್ದತೆಯನ್ನು ಗಟ್ಟಿಗೊಳಿಸುವುದರ ಜೊತೆಗೆ ಭ್ರಷ್ಟಾಚಾರ, ಅನ್ಯಾಯವನ್ನು ವಿರೋಧಿಸಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಚಳುವಳಿಯನ್ನು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತದೆ” ಎಂದರು.
“ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಸುಸಜ್ಜಿತ ರಸ್ತೆ, ನಿರಂತರ ಸಮರ್ಪಕ ಬಸ್ ವ್ಯವಸ್ಥೆ, ಹಾಸ್ಟೆಲ್ ಗಳ ಮಂಜೂರು, ಕುಡಿಯುವ ನೀರು, ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಪ್ರಯೋಗಾಲಯ, ಮಾದ್ಯಮ ಸ್ಟುಡಿಯೋ, ಖಾಯಂ ಉಪನ್ಯಾಸಕರು, ಸಿಬ್ಬಂದಿಗಳ ನೇಮಕಾತಿ, ವಿದ್ಯಾರ್ಥಿ ವೇತನ ಸಮಸ್ಯೆಗಳು, ಪ್ರವೇಶ ಹಾಗೂ ಪರೀಕ್ಷಾ ಶುಲ್ಕ ಏರಿಕೆ, ಅಂಕಪಟ್ಟಿ ವಿತರಣೆ, ಸಿಸಿ ಕ್ಯಾಮರಾ ಅಳವಡಿಕೆ, ಸೈಬರ್ ಮತ್ತು ಜೆರಾಕ್ಸ್ ಸೆಂಟರ್, ಕ್ಯಾಂಟೀನ್ ಸೇರಿದಂತೆ ಮೂಲಭೂತ ಸೌಕರ್ಯಗಳ ಅತ್ಯಂತ ಅವಶ್ಯಕತೆ ಇದ್ದು ಸರ್ಕಾರವು ಅಥವಾ ಸ್ಥಳೀಯ ಜನಪ್ರತಿನಿಧಿಗಳು ಅನುದಾನ ಒದಗಿಸುವ ಮೂಲಕ ವಿವಿ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
“ಕಳೆದ ಮೂರು ವರ್ಷಗಳಿಂದ ವಿವಿ ಉಳಿವಿಗಾಗಿ, ವಿದ್ಯಾರ್ಥಿಗಳ ಏಳ್ಗೆಗಾಗಿ ನಿರಂತರ ಹೋರಾಟ, ಕಾರ್ಯಕ್ರಮ, ಸಂವಾದ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಆಶಾಕಿರಣವಾಗಿ ಎಸ್ಎಫ್ಯ ಕೆಲಸ ಮಾಡುತ್ತ ಬಂದಿದೆ. ಈ ಎಲ್ಲಾ ಮೂಲಭೂತ ಸೌಕರ್ಯಗಳ ಪರಿಹಾರಕ್ಕಾಗಿ ಬಲಿಷ್ಠ ವಿದ್ಯಾರ್ಥಿ ಚಳುವಳಿ ಕಟ್ಟುವ ಅತ್ಯಾವಶ್ಯಕವಾಗಿದೆ. ಈ ಸಮ್ಮೇಳನದಲ್ಲಿ ವಿದ್ಯಾರ್ಥಿ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು, ನಿರ್ಣಯಗಳನ್ನು ಕೈಗೊಳ್ಳಲು ಎಸ್ಎಫ್ಐ ವಿವಿ ಘಟಕ ಪ್ರಥಮ ಸಮ್ಮೇಳನವನ್ನು ವಿವಿ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ. ಆದರಿಂದ ಸಮ್ಮೇಳನದ ಯಶಸ್ವಿಗಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು, ಉಪಕುಲಪತಿಗಳು, ಕುಲಸಚಿವರು ಸಹಕರಿಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಗವತ್, ಕ್ಯಾಂಪಸ್ ವಿದ್ಯಾರ್ಥಿ ಮುಖಂಡರಾದ ಶಂಭುಲಿಂಗ ಸವದತ್ತಿ, ಕಾತೇಶ್ ಪಿ ಹೆಚ್, ಪರಶುರಾಮ ಎಸ್, ಅರುಣ್ ಜೆ, ನಂದಿನಿ ಕೆ ಬಿ, ಚೈತ್ರಾ ಪಿಶೆ, ಶರಣಪ್ಪ ಜೆ ಎಮ್, ನಿಂಗರಾಜ ನೆರ್ಕಿ, ಪೂಜಾ ಬಾರ್ಕಿ, ಪ್ರವೀಣ್ ಮಟ್ಟೇರ, ಶಶಾಂಕ ಬೋಗಾವಿ, ಲೋಕೇಶ್ ಕೆಂಚಣ್ಣನವರ ಉಪಸ್ಥಿತರಿದ್ದರು.




