ಹುಬ್ಬಳ್ಳಿ | ಸೌಜನ್ಯ ಆರೋಪಿಗಳಿಗೆ ಕ್ರೂರ ಶಿಕ್ಷೆಯಾಗಿದ್ದರೆ, ಇಂದು ನೇಹಾಳಂತ ಹೆಣ್ಣುಮಕ್ಕಳು ಉಳಿಯುತ್ತಿದ್ದರು: ಸಾಧನಾ ಸಂಸ್ಥೆಯ ಸಂಸ್ಥಾಪಕಿ

Date:

ಸೌಜನ್ಯಳ ಆರೋಪಗಳಿಗೆ ಅಂದು ಕ್ರೂರ ಶಿಕ್ಷೆ ವಿಧಿಸಿದ್ದರೆ ಇಂದು ನೇಹಾ, ರಕ್ಸನಾ ಮತ್ತು ಪ್ರಿಯಾರವರು ಉಳಿಯುತ್ತಿದ್ದರು ಎಂದು ಸಾಧನಾ ಸಂಸ್ಥೆಯ ಸಂಸ್ಥಾಪಕಿ ಡಾ ಇಸಬೆಲಾ ಝೇವಿಯರ್ ಹೇಳಿದರು.

ಹುಬ್ಬಳ್ಳಿಯ ಬಿಡ್ಳನಾಳ ಯುವತಿ ನೇಹಾ ಮನೆಗೆ ಸಂಸ್ಥೆಯ ಸದಸ್ಯರೊಂದಿಗೆ ಭೇಟಿ ನೀಡಿ, ನೇಹಾಳ ಹೆತ್ತವರ ಜೊತೆಯಲ್ಲಿ ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಮಾತನಾಡಿದರು.

“ಆರೋಪಿ ಯಾವುದೇ ಜಾತಿಯವನಾಗಿರಲಿ, ಧರ್ಮದವನಾಗಿರಲಿ ಅವನು ಗಂಡಸು ಬಲಿಯಾಗುತ್ತಿರುವವರು ಹೆಣ್ಣುಗಳು. ಹಾಗಾಗಿ ನೇಹಾಳ ಹೆಸರಿನ ಕಾನೂನು ತಂದಲ್ಲಿ ಅತ್ಯಚಾರ ಮತ್ತು ‌ಕೊಲೆ ಪ್ರಕರಣಗಳು ನಡೆದಲ್ಲಿ ಕೂಡಲೇ ಕಠಿಣ ಅಥವಾ ಗಲ್ಲು‌ಶಿಕ್ಷೆಗಳಾದರೆ ದುಷ್ಕರ್ಮಿಗಳು
ಕೃತ್ಯ ಎಸಗುವಾಗ ಭಯ ಹುಟ್ಟತ್ತದೆ. ಕನಿಷ್ಟ ಪಕ್ಷ ಜೀವಗಳು ಉಳಿಯುತ್ತವೆ. ಸೌಜನ್ಯಳ ಪ್ರಕರಣದಲ್ಲಿ ಅಂದು ತೀವ್ರ ಶಿಕ್ಷೆಯಾಗಿದ್ದರೆ ಇಂದು ಉಡುಪಿಯ ಹುಡುಗಿ, ಆಕೆಯ ಕುಟುಂಬದ ಸದಸ್ಯರು, ರುಕ್ಸನಾ, ಪ್ರಿಯಾ ಮತ್ತು ನೇಹಾ ಉಳಿಯುತ್ತಿದ್ದರು” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಭಿವೃದ್ಧಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್‌ಗೆ ಮತ ನೀಡಿ: ಶಾಸಕ ಯಶವಂತರಾಯಗೌಡ ಪಾಟೀಲ

“ಚುನಾವಣೆಗಾಗಿ ಕೈ ಕಾಯಿಸಿಕೊಳ್ಳುವುದನ್ನು ಬಿಟ್ಟು, ಅಪರಾಧಿಗೆ ಕಠಿಣ ಶಿಕ್ಷೆಯಾಗುವ ಬಗ್ಗೆ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ರಾಜ್ಯ ‌ಮತ್ತು ಕೇಂದ್ರ ಸರ್ಕಾರಗಳು ಮನಸ್ಸು ಮಾಡಿ, “ನೇಹಾ 2024 ಅಪರಾಧಿಗೆ ಗಲ್ಲು” ಎಂಬ ಕಾಯಿದೆ ಜಾರಿ ಮಾಡಿ ಆದಲ್ಲಿ ಮಾತ್ರ ಲಕ್ಷಾಂತರ ನೇಹಾಗಳ ಬದುಕು ಉಳಿಯಬಹುದು ಎಂದು ಹೇಳುತ್ತಾ, ನಿರಂಜನ ಹಿರೇಮಠ ಅವರ ಮಗಳ ನ್ಯಾಯಕ್ಕಾಗಿ ಹೋರಾಡಬೇಕು, ರಾಜಕೀಯಕ್ಕೆ ಅವಕಾಶ ಕೊಡಬಾರದು” ಎಂದು ಡಾ ಇಸಬೆಲಾ ಝೇವಿಯರ್ ವಿನಂತಿಸಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವೃದ್ಧರು ಹಾಗೂ ವಿಕಲಚೇತನರ ಬೆಂಬಲ ಸಭೆ

ಪಿಂಚಣಿ ಕಡಿತ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಮತ್ತು ವಿಕಲಚೇತನರಿಗೆ ಉಂಟಾಗುತ್ತಿರುವ...

ಕೋಲಾರ | ಜಡತ್ವಕ್ಕೆ ವಿವೇಕ ನೀಡಿದ ಕುಸ್‌ ಕುಸ್ ದಿಲ್ ಕುಶ್ ನಾಟಕ

ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ...

ರಾಯಚೂರು | ಮದುವೆಗೆ ಪ್ರಿಯಕರನ ಮನೆಯವರ ವಿರೋಧ : ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆ

ಪ್ರೀತಿಸಿದ ಯುವಕನ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಯುವತಿ ಮಹಿಳಾ...

ದಕ್ಷಿಣ ಕನ್ನಡ | ಭಾರೀ ಮಳೆ; ಕಲ್ಲಡ್ಕದಲ್ಲಿ ರಸ್ತೆಯೇ ಮಾಯವಾದ ದೃಶ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಭಾರೀ ಮಳೆ ಸುರಿಯಿತು....