ಕೊಡಗು | ಅಂಬೇಡ್ಕರ್‌ಗೆ ಅಪಮಾನ; ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Date:

  • ಬಿಜೆಪಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು
  • ಅಪಮಾನ ಮಾಡಿದ್ದರೂ ಕಿಂಚಿತ್ತೂ ವಿಷಾದ ವ್ಯಕ್ತಪಡಿಸದ ಬಿಜೆಪಿ ನಾಯಕರು

ಡಾ. ಬಿ ಆರ್‌ ಅಂಬೇಡ್ಕರ್‌ ಬಾವಚಿತ್ರಕ್ಕೆ ಅಪಮಾನ ಮಾಡಿದ್ದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಿತಿಮತಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದಾರೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿತ್ತು. ಘಟನೆಯನ್ನು ಖಂಡಿಸಿ ದಲಿತ ಮುಖಂಡ ಕೃಷ್ಣಪ್ಪ ಬೆಳ್ಳೂರು ನೇತೃತ್ವದಲ್ಲಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

“ರಾಜ್ಯ ಸರ್ಕಾರವು ದಲಿತರನ್ನು ದಮನ ಮಾಡುವ ನೀತಿ ಅನುಸರಿಸುತ್ತಿದೆ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದರೂ ಬಿಜೆಪಿಯ ಕಾರ್ಯಕರ್ತರು ಹಾಗೂ ನಾಯಕರು ಈ ಬಗ್ಗೆ ಕಿಂಚಿತ್ತೂ ವಿಷಾದ ವ್ಯಕ್ತಪಡಿಸುತ್ತಿಲ್ಲ” ಎಂದು ಕೃಷ್ಣಪ್ಪ ಕಿಡಿಕಾರಿದರು.

“ಸಂವಿಧಾನಾತ್ಮಕವಾಗಿ ಲಭಿಸಿದ್ದ ದಲಿತರ ವಿವಿಧ ಸವಲತ್ತುಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಕಸಿದುಕೊಳ್ಳುತ್ತಿದೆ. ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ನಡೆಸದಿದ್ದರೆ, ದಲಿತರ ಮತ್ತು ಅಲ್ಪಸಂಖ್ಯಾತರ ಬದುಕು ಶೋಚನೀಯವಾಗಲಿದೆ. ದಲಿತರ ವಿರೋಧಿ ಬಿಜೆಪಿ ವಿರುದ್ಧ ಎಲ್ಲ ದಲಿತ ನಾಯಕರು, ಪ್ರಗತಿಪರ ಚಿಂತಕರು ಒಕ್ಕೊರಲಿನಿಂದ ಹೋರಾಟ ನಡುಸುವುದು ಅನಿವಾರ್ಯವಾಗಿದೆ” ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ಎಸ್ ಪ್ರಶಾಂತ್ ಮನವಿ ಪತ್ರ ಸ್ವೀಕರಿಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆ ರಸ್ತೆ ತಡೆ ಹಿಂಪಡೆಯಲಾಯಿತು.

ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷೆ ಪಡಿಕಲ್ ಕುಸುಮಾವತಿ, ರಜನಿ, ಸಾಮಾಜಿಕ ಹೋರಾಟಗಾರ ಅಬ್ದುಲ್ ರೆಹಮಾನ್ ಬಾಪು ಹಾಗೂ ಇತರರು ಭಾಗವಹಿಸಿದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಎಸ್ಎಫ್ಐ ಜಿಲ್ಲಾ ಸಮಿತಿಯಿಂದ ʼವಿದ್ಯಾರ್ಥಿನಿಯರ ಸಮಾವೇಶʼ

ಪ್ರತಿ ವಿದ್ಯಾರ್ಥಿಯೂ ಸಮಾಜದ ಪ್ರಗತಿಗಾಗಿ ಚಿಂತಿಸಬೇಕು. ಸಮಾಜದಲ್ಲಿನ ಅನೇಕ ಸವಾಲುಗಳನ್ನು ಎದುರಿಸಲು...

ಬೆ. ಗ್ರಾಮಾಂತರ | ನಟಿ ಲೀಲಾವತಿ ಕನಸಿನ ಪಶು ಆಸ್ಪತ್ರೆ ಉದ್ಘಾಟನೆ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಕನಸಿದ ಪಶು ಆಸ್ಪತ್ರೆ ನೆಲಮಂಗಲದ...

ರಾಯಚೂರು | ನಿರ್ಮಾಣವಾಗಿ 6 ತಿಂಗಳಿಗೇ ಬಿರುಕುಬಿಟ್ಟ ರಸ್ತೆ

ನಿರ್ಮಾಣ ಮಾಡಿ ಇನ್ನೂ ಆರು ತಿಂಗಳೂ ಕಳೆದಿಲ್ಲ. ಆಗಲೇ ಬಿರುಕು ಬಿಟ್ಟಿದ್ದು,...

ತನಿಖೆ ಆಗುವವರೆಗೂ ಸದನಕ್ಕೆ ಹೋಗಲ್ಲ; ತಮ್ಮದೇ ಸರ್ಕಾರದ ವಿರುದ್ಧ ಬಿ.ಆರ್ ಪಾಟೀಲ್ ಕಿಡಿ

ಕಳೆದ ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ...