ಸಮಾಜ ಮುಖಿ ಕಾವ್ಯ ರಚಿಸಬೇಕು. ಯುವಜನರು ಸಾಹಿತ್ಯದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ದಲಿತ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಅರ್ಜನ ಗೊಳಸಂಗಿ ಹೇಳಿದ್ದಾರೆ.
ಕಲಬುರಗಿಯಲ್ಲಿ ದಲಿತ ಸಾಹಿತ್ಯ ಪರಿಷತ್ ಮತ್ತು ಈದಿನ.ಕಾಮ್ ಒಗ್ಗೂಡಿ ಆಯೋಜಿಸಿದ್ದ ಸಾಹಿತಿ ಡಿ.ಪಿ ಕೊಟ್ಟಗಿ ಅವರ ‘ಮಂದಾರ’ ಕೃತಿ ಬಿಡುಗಡೆ ಮತ್ತು ಕವಿಗೋಷ್ಠಿಯಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿದರು. “ಕವಿ ಕೊಟ್ಟಗಿಯವರ ಕಾವ್ಯ ಪರಿಸರ, ಆಧ್ಯಾತ್ಮದಿಂದ ಕೂಡಿವೆ” ಎಂದು ಹೇಳಿದರು.
ಅಶ್ವಿನಿ ಮದನಕರ್ ಮಾತನಾಡಿ, “ನಮ್ಮ ಧ್ವನಿಯನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಈದಿನ.ಕಾಮ್ ಮಾಧ್ಯಮ ಶ್ರಮಿಸುತ್ತಿದೆ. 40% ಭ್ರಷ್ಟಾಚಾರ, ಉರಿಗೌಡ-ನಂಜೇಗೌಡ ಎಂಬ ಸುಳ್ಳು ಮುಖಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಿದೆ. ಉತ್ತಮ ಚುನಾವಣಾ ಸರ್ವೇ ನಡೆಸಿ, ನೈಜತೆಯನ್ನು ಮುಂದಿಟ್ಟಿದೆ” ಎಂದರು.
ಕಾರ್ಯಕ್ರಮದಲ್ಲಿ ಹಲವರು ಕವಿತೆಗಳ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ಬಸವರಾಜ ಪೋಲಿಸ್ ಪಾಟೀಲ, ಡಾ.ಮಹೇಶ್ ರುದ್ರಕರ್, ಡಾ.ರಾಜಕುಮಾರ ಮಾಳಗೆ, ಸಿ.ಎಸ್ ಆನಂದ ಕೊಟ್ಟಗಿ, ನಿವೃತ್ತ ಪ್ರಾಧ್ಯಾಪಕ ಡಾ.ವಿ.ಟಿ. ಕಾಂಬಳೆ, ಅಶ್ವಿನಿ ಮದರಕರ್ ,ಸಾಕ್ಷಿ.ಗವಿಸಿದ್ದಪ್ಪ , ಸೃಷ್ಟಿ , ರೇಣುಕಾ ಹೆಳವರ , ಶರಣು ಜೇವರ್ಗಿ , ಅಶೋಕ್ ಶಿವರಾಮ,ಅವಿನಾಶ,ಸಿದ್ಧಪ್ಪ , ಸೃಷ್ಟಿ , ಲಕ್ಷ್ಮೀ,ಡಾ.ಶೀಲಾದೇವಿ ಬಿರಾದಾರ ,,ಅಧ್ಯಕ್ಷ ಡಾ.ಮಲ್ಲಿಕಾರ್ಜುನ ವಡ್ಡನಕೇರಿ , ಡಾ.ಗವಿಸಿದ್ಧಪ್ಪ ಪಾಟೀಲ , ಡಾ.ಜಯದೇವಿ ಗಾಯಕವಾಡ , ಡಾ.ಶಿವಶರಣಪ್ಪ ಕೊಡ್ಲಿ , ಡಾ.ಸೂಲಾಬಾಯಿ ಕಾಳಮಂದರಗಿ , ಡಾ.ವಿಜಯಕುಮಾರ ಬೀಳಗಿ , ಡಾ.ರವಿ ಅಂತೆಪ್ಪನವರ ಡಾ.ಚಿದಾನಂದ ಕುಡನ್ ,ಈದಿನ. ಕಾಮ್ ಗೀತಾ ಹೊಸಮನಿ, ಕೃಷ್ಣಕುಮಾರ್ ಇನ್ನಿತರರು ಇದ್ದರು.
ಸಾಮಾಜಿಕ ಕಾಳಜಿ ಹೊಂದಿರುವ ಮಾಧ್ಯಮ. ಸತ್ಯ ಅನಾವರಣ ಮಾಡುವುದರ ಜೊತೆಗೆ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನಗಳು ನಡೆಯುತಿರಲಿ