ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ವತಿಯಿಂದ ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವ ಎಲ್ಲಾ ವರ್ಗದ ಮಹಿಳೆಯರಿಗಾಗಿ ಒಂದು ದಿನದ ಉದ್ಯಮಶೀಲತಾಭಿವೃದ್ಧಿ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ನಗರದ ಜೇವರ್ಗಿ ಕ್ರಾಸ್ ಸಮೀಪ, ಬಸ್ ಡಿಪೋ ನಂ.1 ಎದುರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ವಿಭಾಗೀಯ ಕಚೇರಿ) ಜಂಟಿ ನಿರ್ದೇಶಕರ ಕಚೇರಿಯಲ್ಲಿ ಶಿಬಿರ ನಡೆಯಲಿದ್ದು, ಆಸಕ್ತ ಮಹಿಳೆಯರು ಭಾಗವಹಿಸಬಹುದು ಎಂದು ಕಲಬುರಗಿ ಸಿಡಾಕ್ ಸಲಹೆಗಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಬಿರದಲ್ಲಿ ಉದ್ಯಮಶೀಲತೆಯ ಪರಿಚಯ, ಸ್ವಯಂ ಉದ್ಯಮ ಆರಂಭಿಸುವ ವಿಧಾನ, ಬ್ಯಾಂಕ್ ವ್ಯವಹಾರಗಳ ಮಾಹಿತಿ, ವಿವಿಧ ಸರ್ಕಾರಿ ಸಾಲ ಸೌಲಭ್ಯಗಳು ಹಾಗೂ ಉದ್ಯಮ ಸ್ಥಾಪನೆಗೆ ಲಭ್ಯವಿರುವ ಯೋಜನೆಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಗುತ್ತದೆ.
ಇದನ್ನು ಓದಿದ್ದೀರಾ? ಕಲಬುರಗಿ | ನಿರುದ್ಯೋಗಿಗಳಿಗೆ ಸುವರ್ಣಾವಕಾಶ; ಎಸ್‌ಬಿಐ ಆರ್‌ಸೆಟ್‌ನಿಂದ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
20 ರಿಂದ 40 ವರ್ಷದೊಳಗಿನ, ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರುವ ಎಲ್ಲಾ ವರ್ಗದ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಲು ಅರ್ಹರು. ಆಸಕ್ತರು 8884872109 ಅಥವಾ 9108972833 ಸಂಖ್ಯೆಗೆ ಕರೆ ಮಾಡಿ ಅಥವಾ ಕಲಬುರಗಿ ಸಿಡಾಕ್ ಕಚೇರಿಗೆ ಭೇಟಿ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.





