ಕಲಬುರಗಿ | ಪ್ರೊ. ಮೊಗಳ್ಳಿ ಗಣೇಶ ನುಡಿನಮನ ಕಾರ್ಯಕ್ರಮ

Date:

ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರೊ. ಮೊಗಳ್ಳಿ ಗಣೇಶ ನುಡಿನಮನ ಕಾರ್ಯಕ್ರಮವನ್ನು ಗುರುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಸಾಭ ಭವನದಲ್ಲಿ ಆಯೋಜಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಪ್ರೊ. ಅರಣುಕುಮಾರ್ ಜೋಳದಕೂಡ್ಲಿಗಿ ಮಾತನಾಡಿ, ‘ಪ್ರೊ. ಮೊಗಳ್ಳಿ ಗಣೇಶ ಅವರು ವೈರುಧ್ಯಪೂರ್ಣ ವ್ಯಕ್ತಿತ್ವದ ಜೊತೆಗೆ ಜೀವಂತ ಚಿಂತನೆಯುಳ್ಳ ಬರಹಗಾರರಾಗಿದ್ದರು. ಅವರ ಕತೆಗಳಲ್ಲಿ ಬಾಲ್ಯದ ನೋವು, ದಲಿತ ಸಮುದಾಯದ ಅನುಭವಗಳು ಹಾಗೂ ಸಾಮಾಜಿಕ ಅಸಮಾನತೆಗಳ ನೈಜ ಚಿತ್ರಣ ಅವರ ಕಥೆಗಳಲ್ಲಿ ಕಂಡುಬರುತ್ತದೆ’ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಅವರು ಮುಂದುವರಿಸಿ, “ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮೊಗಳ್ಳಿ ಗಣೇಶರು ವಿಶಿಷ್ಟ ಸ್ಥಾನ ಹೊಂದಿದ್ದಾರೆ. ಅವರ ಕಥೆಗಳು ಕಲ್ಪನಾಶಕ್ತಿ ಮತ್ತು ಸಾಮಾಜಿಕ ವಾಸ್ತವದ ಸಂಯೋಜನೆಯಿಂದ ವಿಶಿಷ್ಟತೆ ಪಡೆದಿವೆ,” ಎಂದು ಅಭಿಪ್ರಾಯಪಟ್ಟರು.

‘ಬೊರಗಿ’ ಸೇರಿದಂತೆ ಮೊಗಳ್ಳಿಯವರ ಅನೇಕ ಕೃತಿಗಳು ಸಮಾಜದ ನೈಜ ಬದುಕಿನ ಕಥೆಯನ್ನು ಹೇಳುತ್ತವೆ. ಅವರು ಸಂಶೋಧಕ, ಚಿಂತಕ ಮತ್ತು ಸಂಸ್ಕೃತಿ ವಿಶ್ಲೇಷಕ (ಕಲ್ಚರಲ್ ತಿಂಕರ್) ಆಗಿ ಹೊಸ ಸಾಹಿತ್ಯ ದೃಷ್ಟಿಕೋನವನ್ನು ನೀಡಿದರು. ‘ಗೋವು ಬ್ರಾಹ್ಮಣ ಸಂಕೇತ, ಹುಲಿ ದಲಿತರ ಸಂಕೇತ’ ಎಂದು ಅವರ ವಿಶ್ಲೇಷಣೆ ಕನ್ನಡ ಚಿಂತನೆಗೆ ಹೊಸ ಆಯಾಮ ನೀಡಿತು. ಅವರ ಕೆಲವು ಕೃತಿಗಳು ಇಂಗ್ಲಿಷ್‌ನಲ್ಲಿಯೂ ಅನುವಾದಗೊಂಡಿವೆ,’ ಎಂದು ಹೇಳಿದರು.

ಇದನ್ನು ಓದಿದ್ದೀರಾ? ಯಾದಗಿರಿ | 69ನೇ ಧಮ್ಮಚಕ್ರ ಪ್ರವರ್ತನಾ ದಿನಾಚರಣೆ

‘ಮೊಗಳ್ಳಿಯವರು ಮೇಲ್ಜಾತಿ ಕಥೆಗಳ ಏಕಾಧಿಪತ್ಯ ಮುರಿದು, ದಲಿತ ಕಥನಗಳಿಗೆ ಸಾಹಿತ್ಯದಲ್ಲಿ ಕೇಂದ್ರ ಸ್ಥಾನ ನೀಡಿದರು. ಕನ್ನಡ ವಿಮರ್ಶೆಗೆ ಹೊಸ ಚೈತನ್ಯ ತುಂಬಿದರು. ಅವರು ಈಗ ನಮ್ಮ ನಡುವೆ ಇಲ್ಲದಿದ್ದರೂ, ಅವರ ಬರಹಗಳು ಮತ್ತು ಚಿಂತನೆಗಳು ಸದಾ ಜೀವಂತವಾಗಿವೆ,’ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ದಸಂಸ ಹಿರಿಯ ಮುಖಂಡ ಮರೆಪ್ಪ ಹಳ್ಳಿ, ಪ್ರೊ. ಆರ್.ಕೆ. ಹುಡಗಿ, ಪ್ರೊ. ಜಯದೇವ ಗಾಯಕವಾಡ್, ಪ್ರೊ. ಅಪ್ಪುಗಿರಿ ಸೋಮಶೇಖರ್, ರೇಣುಕಾ ಸಿಂಗೆ, ಸುರೇಶ ಹಾದಿಮನಿ, ಸಂಜಯ್ ಮ್ಯಾಕಲ್, ದತ್ತಾತ್ರೇಯ ಇಕ್ಕಳಕಿ, ಅಶ್ವಿನಿ ಮದನಕರ್, ದಿಲಿಪ್ ಕಾಯಂಕರ್, ಡಾ. ಮಾಹೇಶ ಕುಮಾರ್ ರಾಠೋಡ್, ರಾಜಕುಮಾರ ಮಾಳಗೆ, ಸಿದ್ದಪ್ಪ ಹೊಸಮನಿ, ಡಾ. ನಂದುಕುಮಾರ್ ಸೇರಿದಂತೆ ಪ್ರಗತಿಪರ ಚಿಂತಕರು, ಬಂಡಾಯ ಸಾಹಿತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...