ಯಾದಗಿರಿ | 69ನೇ ಧಮ್ಮಚಕ್ರ ಪ್ರವರ್ತನಾ ದಿನಾಚರಣೆ

Date:

ಭಾರತೀಯ ಬೌದ್ಧ ಮಹಾಸಭಾ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಅವರ ನೇತೃತ್ವದಲ್ಲಿ 69ನೇ ಧಮ್ಮಚಕ್ರ ಪ್ರವರ್ತನಾ ದಿನ ಹಾಗೂ ತಥಾಗತ ಭಗವಾನ್ ಗೌತಮ ಬುದ್ಧರ ಭಾವಚಿತ್ರ ಉದ್ಘಾಟನಾ ಸಮಾರಂಭವನ್ನು ಅಶೋಕನಗರದಲ್ಲಿ ಮಂಗಳವಾರ ಬೌದ್ಧ ವಿಹಾರಕ್ಕಾಗಿ ಮಂಜೂರಾದ ಜಮೀನಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

- Advertisement -

ಉದ್ಘಾಟನಾ ಭಾಷಣ ಮಾಡಿದ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅವರು, “ಬೌದ್ಧ ಧರ್ಮ ಜಗತ್ತಿನ ಮೊಟ್ಟಮೊದಲ ಬೆಳಕು. ಬುದ್ಧ 45 ವರ್ಷಗಳ ಕಾಲ ಸತ್ಯ ಬೋಧನೆ ಮಾಡಿ ಮಾನವೀಯತೆ ಸಾರಿದರು. ಬುದ್ಧ ಸಿದ್ಧಾಂತಗಳಲ್ಲಿ ನಡೆಯುವುದು ಸಮಾಜದ ಪ್ರಗತಿಗೆ ದಾರಿ ಎಂದು ಹೇಳಿದರು. ಅಶೋಕನಗರದ ಬೌದ್ಧ ವಿಹಾರಕ್ಕಾಗಿ ಎರಡು ಎಕರೆ ಜಮೀನು, ಕುಡಿಯುವ ನೀರು ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...
ಬುದ್ಧ 3

ಇದನ್ನೂ ಓದಿ: ಯಾದಗಿರಿ | ಸಿಜೆಐ ಮೇಲೆ ಶೂ ಎಸೆದ ಘಟನೆ ಖಂಡಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

ಬಿ. ದರ್ಶನ ಮಾತನಾಡಿ, “ಜಾತಿ ವಿಮೋಚನೆಗೆ ಬೌದ್ಧ ಧರ್ಮವೇ ಮಾರ್ಗ. ಜಾತಿರಹಿತ ಸಮಾಜ ಕಟ್ಟುವುದು ಧಮ್ಮದ ಮೂಲಕವೇ ಸಾಧ್ಯ. ಸಿಜೆಐ ಬಿ.ಆರ್. ಗವಾಯಿ ಅವರ ಕುಟುಂಬ ಮೊಟ್ಟಮೊದಲು ಬೌದ್ಧ ಧರ್ಮ ಸ್ವೀಕರಿಸಿದ್ದು, ಧರ್ಮದ ಅಂತರರಾಷ್ಟ್ರೀಯ ಏಕತೆಗಾಗಿ ಮಾದರಿಯಾಗಿದೆ” ಎಂದರು.

ಬಿ.ಆರ್. ಕೃಷ್ಣಯ್ಯ ಮಾತನಾಡಿ, “ರಾಜಕೀಯವನ್ನು ಧರ್ಮದ ಆಧಾರದ ಮೇಲೆ ಸಂಘಟಿಸಬೇಕು. ಬುದ್ಧನು ನೀರು, ಗಾಳಿ, ಬೆಳಕು ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದು ಹೇಳಿದರು. ವರ್ಣಭೇದ, ಜಾತಿಭೇದಗಳ ವಿರುದ್ಧ ಬುದ್ಧನ ಧರ್ಮ ಸತ್ಯವಾದ ಹೋರಾಟ” ಎಂದು ಹೇಳಿದರು.

ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಗೆ ವಿರುದ್ಧವಾಗಿ ಮನುಸ್ಮೃತಿಯ ನಿಲುವುಗಳು ದೇಶಕ್ಕೆ ಅಪಾಯ. ಬುದ್ಧ ವಿಚಾರಗಳು ಮನೆಮನೆಗೆ ತಲುಪಿಸಬೇಕುʼ ಎಂದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು, ʼಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ವೈಜ್ಞಾನಿಕ ಆಧಾರದ ಮೇಲೆ ಸ್ವೀಕರಿಸಿದರು. ಧರ್ಮದಲ್ಲಿ ಮೂಢನಂಬಿಕೆ ಇಲ್ಲ, ಪುನರ್ಜನ್ಮವಿಲ್ಲ. 25ಲಕ್ಷ ಜನ ಸಮೀಕ್ಷೆಯಲ್ಲಿ ಬೌದ್ಧ ಧರ್ಮ ಎಂದು ಬರೆಸುತ್ತಾರೆಂಬ ನಂಬಿಕೆ ಇದೆ ಎಂದುʼ ಹೇಳಿದರು.

ಶ್ರೀನಿವಾಸ ನಾಯಕ್ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಜಾತಿಗೆ ಸೀಮಿತಗೊಳಿಸದೆ, ಅವರ ವಿಚಾರಗಳನ್ನು ಜೀವನದ ಭಾಗವನ್ನಾಗಿ ಮಾಡಬೇಕುʼ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಸಂಸ ಕ್ರಾಂತಿಕಾರಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಬೌದ್ಧ ಧರ್ಮದ ತತ್ವ ಮತ್ತು ಅಂಬೇಡ್ಕರ್ ಅವರ ಕನಸುಗಳ ಸಾಧನೆಯ ಅಗತ್ಯತೆ ಕುರಿತು ಮಾತನಾಡಿದರು.

ಬುದ್ಧ1 2

ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ದರ್ಶನ ಬಿ. ಸೊಮಶೇಖರ್ ಧಮ್ಮಚಕ್ರ ಪೂಜೆಯನ್ನು ನೆರವೇರಿಸಿದರು. ಮಹಾಸಭಾದ ಅಧ್ಯಕ್ಷ ಮನೋಹರ್ ಮೋರೆ ಪಂಚಶೀಲ ಧ್ವಜಾರೋಹಣ ಮಾಡಿದರು. ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರು ಅವರು ತಥಾಗತ ಗೌತಮ ಬುದ್ಧರ ಭಾವಚಿತ್ರವನ್ನು ಉದ್ಘಾಟಿಸಿ ಸಸಿಗೆ ನೀರುಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬೌದ್ಧ ತ್ರಿಪಿಟಕ ಪಠಣ ನಡೆಯಿತು.

ಕಾರ್ಯಕ್ರಮದಲ್ಲಿ ದಸಂಸ ಕ್ರಾಂತಿಕಾರಿ ನಾಯಕರು ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಕಾಶೀನಾಥ್ ನಾಟೀಕರ್, ಮಲ್ಲಿಕಾರ್ಜುನ ಕುರಕುಂದಿ, ಅಜೀಜ್ ಸಾಬ್ ಐಕೂರ್, ಡಾ. ಮಲ್ಲಿಕಾರ್ಜುನ ಆಶಿನಾಳ, ಮಲ್ಲಿಕಾರ್ಜುನ ತಳ್ಳಳ್ಳಿ, ಸೂರ್ಯಕಾಂತ ಅಜಾತಪುರ್, ಚಂದಪ್ಪ ಕಟ್ಟಿಮನಿ, ರೇವಣಸಿದಪ್ಪ ಮಾಲಗತ್ತಿ, ರಾಹುಲ್ ಕೋಳ್ಳುಕರ್, ನಿಂಗಪ್ಪ ಕೊಲೂರ್, ಚಂದಪ್ಪ ಮುನಿಯಪ್ಪನೋರ್, ಮಲ್ಲಿಕಾರ್ಜುನ ಖನ್ನಾ, ಮಹೇಶ್ ಕೋಕಿಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ಕ್ರಷರ್ ಘಟಕದಿಂದ ಸೀತಿ ಬೆಟ್ಟದ ದೇವಾಲಯಕ್ಕೆ ಹಾನಿ: ಸ್ಥಗಿತಕ್ಕೆ ಗ್ರಾಮಸ್ಥರ ಪ್ರತಿಭಟನೆ

ತಾಲ್ಲೂಕಿನ ವೇಮಗಲ್ ಹೋಬಳಿ ಸೀತಿ ಗ್ರಾಮದ ಬಳಿ ಗೋಮಾಳ ಜಮೀನಿನಲ್ಲಿ ನಿಯಮ...

ಕೋಲಾರ | ಕೆ.ಎಸ್. ಗಣೇಶ್ ನೇತೃತ್ವದಲ್ಲಿ ಬೆಳೆದ ಸಂಘದಿಂದ ಎರಡು ಜಿಲ್ಲೆಗಳ ಪತ್ರಕರ್ತರಿಗೆ ಆರ್ಥಿಕ, ಆರೋಗ್ಯ ಹಾಗೂ ಸಾಮಾಜಿಕ ನೆರವು

ಪತ್ರಕರ್ತರ ಆರ್ಥಿಕ ಹಾಗೂ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಗೊಂಡಿರುವ ಕೋಲಾರ...

ಚಿಕ್ಕಮಗಳೂರು | ಸಿಎಂ ಭೇಟಿ: ಕಾಂಗ್ರೆಸ್ ಸರ್ಕಾರ ಜನಪರ ಕಾಳಜಿಗೆ ಸಾಕ್ಷಿಯಾಗಿದೆ; ಹೆಚ್.ಪಿ ಮಂಜೇಗೌಡ

ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ,"ಕಸ್ತೂರಿ ರಂಗನ್...

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...