ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಎದುರಾಗಬಹುದಾದ ಮೇವಿನ ಕೊರತೆಯನ್ನು ನೀಗಿಸಲು ಸರಕಾರದ ವತಿಯಿಂದ ರೈತರಿಗೆ ಮೇವಿನ ಬಿತ್ತನೆ ಬೀಜಗಳನ್ನು ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಗೆ ಒಟ್ಟು 2,814 ಮೇವಿನ ಬಿತ್ತನೆ ಬೀಜಗಳ ಕಿರುಪೊಟ್ಟಣಗಳು ಪೂರೈಕೆಯಾಗಲಿದ್ದು, ಜಮೀನು ಹಾಗೂ ನೀರಿನ ಮೂಲ ಹೊಂದಿರುವ ಮತ್ತು ಜಾನುವಾರು ಸಾಕಣೆ ಮಾಡುತ್ತಿರುವ ಆಸಕ್ತ ರೈತರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಡುಪಿ ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) 9448134852, ಕಾಪು 8217389838, ಬ್ರಹ್ಮಾವರ 9448623690, ಕುಂದಾಪುರ 9448163237, ಬೈಂದೂರು 9741993045, ಕಾರ್ಕಳ 9845753062 ಹಾಗೂ ಹೆಬ್ರಿ 9986764615 ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.





