ಕಲಬುರಗಿ | ರಾಧಾಕೃಷ್ಣ ದೊಡ್ಮನಿ ಅಭಿನಂದನಾ ಸಮಾರಂಭ: ಮೆರವಣಿಗೆಗೆ ರಂಗು ತಂದ ಬುಡಗ ಜಂಗಮರು

Date:

ಬಡವರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಕೊಂಚ ಹಣ ಗಳಿಸಿ ಹೊಟ್ಟೆ ಪಾಡು ನಡೆಸುವ ಕಾಲದಲ್ಲಿ ಅಭಿಮಾನಿ ಒಬ್ಬರು ತಮ್ಮ ಸ್ವಂತ ಹಣದಲ್ಲಿ ಕಲಾವಿದರನ್ನು ಕರೆಸಿ ಮೆರವಣಿಗೆಗೆ ರಂಗು ತಂದು, ಅಪಾರ ಅಭಿಮಾನ ಮೆರೆದಿದ್ದಾರೆ.

- Advertisement -

ಚಿತ್ತಾಪುರ ಪಟ್ಟಣದಲ್ಲಿ ಕಳೆದ 25ನೇ ತಾರೀಕಿನಂದು ಸಂಸದ ರಾಧಾಕೃಷ್ಣ ದೊಡ್ಮನಿ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಪ್ರಿಯಾಂಕ್ ಖರ್ಗೆ ಮತ್ತು ರಾಧಾಕೃಷ್ಣ ದೊಡ್ಮನಿ ಅವರ ಅಪ್ಪಟ ಅಭಿಮಾನಿ ಬುಡಗ ಜಂಗಮ ಸಮಾಜದ ಜಿಲ್ಲಾ ಅಧ್ಯಕ್ಷ ಪಂಡಿತ್ ಶಿರವಾಟಿ ಅವರು, ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕಿನಲ್ಲಿರುವ ಅಲೆಮಾರಿ ಜನಾಂಗದವರಾದ ಬುಡಗ ಜಂಗಮರು, ಸುಡುಗಾಡು ಸಿದ್ದರನ್ನು ಅಭಿಮಾನಕ್ಕಾಗಿ ತಮ್ಮ ಸ್ವಂತ ಹಣದಲ್ಲಿ ಕರೆಯಿಸಿ ವಿವಿಧ ವೇಷ ಭೂಷಣಗಳನ್ನು ಧರಿಸಿ ಕುಣಿದು ಅದ್ದೂರಿ ಮೆರವಣಿಗೆಯಲ್ಲಿ ರಂಗು ತಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಕಲಬುರ್ಗಿ, ರಾಯಚೂರು, ಯಾದಗಿರಿ, ಸೇಡಂ, ಶಹಾಬಾದ ಚಿತ್ತಾಪುರ ಸೇರಿದಂತೆ ವಿವಿಧ ಕಡೆಗಳಿಂದ ಬಂದ ಸುಮಾರು 50ಕ್ಕೂ ಹೆಚ್ಚು ಕಲಾವಿಧರು ಮೆರವಣಿಗೆಯಲ್ಲಿ ರಾಮಾಯಣದ ರಾಮ, ಸೀತೆ, ಲಕ್ಷಣ, ಆಂಜನೇಯ, ರಾವಣ, ಕುಂಭಕರ್ಣ, ಶೂರ್ಪನಖಿ ಅವರ ಛದ್ಮವೇಷ ಧರಿಸಿದ ಬುಡ್ಗ ಜಂಗಮ ಕಲಾವಿದರು ಮೆರವಣಿಗೆ ಸಾಗುತ್ತಿದ್ದ ರಸ್ತೆಯಲ್ಲಿ ಅಲ್ಲಲ್ಲಿ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಆಕರ್ಷಕವಾಗಿ ಅಭಿನಯಿಸಿ ನೆರೆದ ಜನರನ್ನು ಮನರಂಜಿಸಿದರು.

WhatsApp Image 2024 10 30 at 5.25.12 PM

ಕಲಾವಿದರಾದ ಭೀಮಾಶಂಕರ ಕಟ್ಟಿಮನಿ ಯಡ್ರಾಮಿ, ಸಿದ್ರಾಮ ಶಿರವಾಟಿ, ಚೆನ್ನು ಪ್ಯಾರಲ್, ಸಾಯಪ್ಪ ಬೈಲಪಾಟಿ ಸೇಡಂ, ಲಕ್ಷ್ಮಣ ಸಿರಿಗಿರಿ ಸೇಡಂ, ನಿಂಗಣ್ಣ ಪಾಮತೀರ್ಥ, ರಮೇಶ ಕವಿತಾಳ, ಬುರ್ರಾಕತೆ ಕಲಾವಿದರಾದ ಶಾಂತಮ್ಮ ಪಾಮತೀರ್ಥ, ಬಸಮ್ಮ ರಾಮತೀರ್ಥ, ಅಂಜಮ್ಮ ಚಿತ್ತಾಪುರ, ಶರಣಮ್ಮ ಚಿತ್ತಾಪುರ, ಯಲ್ಲಮ್ಮ ಕಲಬುರಗಿ,ಶಿವಮ್ಮ ಕಲಬುರಗಿ, ನಿರ್ಮಲಾ. ಶಿರವಾಟಿ, ಮೋನಮ್ಮ ಶಿರವಾಟಿ, ಭೀಮಬಾಯಿ ಚಿತ್ತಾಪುರ, ಮಲ್ಲಮ್ಮ ಚಿತ್ತಾಪುರ, ಶಿವು ಶಹಾಬಾದ್, ಮಾರುತಿ ಶಹಾಬಾದ್‌, ಉದಯಕುಮಾರ ಮಾರುತಿ, ಪ್ರಶಾಂತ ಶಿರವಾಟಿ ಸೇರಿದಂತೆ ಅನೇಕ ಕಲಾವಿದರು ಮೆರವಣಿಗೆಯಲ್ಲಿ ಕಲೆ ಪ್ರದರ್ಶನ ಮಾಡಿದರು.
200ರಕ್ಕೂ ಹೆಚ್ಚು ಜನರು ಭಾಗಿಯಾಗಿ ಮೆರಗು ತಂದರು.

ಇವರ ಅಭಿಮಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ರಾಧಾಕೃಷ್ಣ ದೊಡ್ಮನಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ: ಅನಂತ್ ದೇಶಪಾಂಡೆ, ವಾಲೆಂಟಿಯರ್

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...

ಉಡುಪಿ | ಹೆತ್ತ ತಾಯಿಯನ್ನೇ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಮಗ

ಹೆತ್ತ ತಾಯಿಯನ್ನೇ ಮಗ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿರುವ ಅಮಾನವೀಯ ಘಟನೆ...

ಬಳ್ಳಾರಿ | ಲಾರಿ ಪಲ್ಟಿ; ಸ್ಟೀನಿಂಗ್ ಯಂತ್ರ ಬಿದ್ದು ಯುವಕ ದುರ್ಮರಣ

ಜಿಲ್ಲೆ ಸಂಡೂರು ತಾಲ್ಲೂಕಿನ ಉಬ್ಬಳಗಂಡಿ ಗ್ರಾಮದ ಬಳಿ ಮೈನ್‌ಸ್‌ನ ಸ್ಟೀನಿಂಗ್ ಯಂತ್ರವನ್ನು...