ಕಲಬುರಗಿ | ಸಮಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ: ಚೇತನ ಅಹಿಂಸ

Date:

ಸಮಸಮಾಜ ನಿರ್ಮಾಣಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಅತ್ಯಗತ್ಯ ಎಂದು ಚಲನಚಿತ್ರ ನಟ ಹಾಗೂ ಹೋರಾಟಗಾರ ಚೇತನ ಅಹಿಂಸ ಅಭಿಪ್ರಾಯಪಟ್ಟರು.

- Advertisement -

ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತ್ಯೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ “ಪ್ರಬುದ್ಧ ಭಾರತ ನಿರ್ಮಾಣ ಸಂಕಲ್ಪ ಸಮಾವೇಶ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನ ಶಿಲ್ಪಿಯಾಗಿ ಮಾತ್ರ ಸೀಮಿತಗೊಳಿಸಲಾಗಿದೆ. ಅವರ 21 ಸಂಪುಟಗಳ ಬರಹಗಳನ್ನು ಓದಿ ಅರ್ಥೈಸಿಕೊಂಡಾಗ ಮಾತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿಜವಾದ ಅರ್ಥ ತಿಳಿಯುತ್ತದೆ” ಎಂದು ಹೇಳಿದರು.

“ಅಂಬೇಡ್ಕರ್ ಇಸಂ ಒಂದು ಹೆಸರು ಮಾತ್ರವಲ್ಲ, ಅದು ಕ್ರಾಂತಿಯ ಚಿಂತನೆ. ಜಾತಿ ರಹಿತ ಹಾಗೂ ಸಮಾನತೆಯ ಸಮಾಜ ನಿರ್ಮಾಣವೇ ಅವರ ಕನಸಾಗಿತ್ತು. ನಾವು ಎಲ್ಲರೂ ಆ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಅವರ ಆಶಯಗಳು ನನಸಾಗುತ್ತವೆ” ಎಂದು ತಿಳಿಸಿದರು.

ಶಿಕ್ಷಣವೇ ಸಮಾಜ ಪರಿವರ್ತನೆಯ ಅತ್ಯಂತ ಪ್ರಬಲ ಅಸ್ತ್ರವಾಗಿದ್ದು, ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು. “ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಪ್ರಶ್ನೆ ಕೇಳುವ ಮನೋಭಾವ ಬೆಳೆಸಿದಾಗ ಮಾತ್ರ ಅಂಬೇಡ್ಕರ್ ವಿಚಾರಧಾರೆ ಜೀವಂತವಾಗಿರುತ್ತದೆ” ಎಂದು ಹೇಳಿದರು.

“ನಾವು ನದಿಗಳಾಗಿ ಕೊಚ್ಚಿಕೊಂಡು ಹೋಗಬಾರದು. ಸಮಾಜವನ್ನು ಒಗ್ಗೂಡಿಸುವ ಬಂಡೆಗಳಾಗಬೇಕು. ಅಂಬೇಡ್ಕರ್, ಪೆರಿಯಾರ್ ಹಾಗೂ ಬಹುಜನರ ಕನಸಿನ ಸಮಾಜ ಕಟ್ಟಲು ರಾಜಕೀಯವಾಗಿ ಗಟ್ಟಿಯಾಗಬೇಕಾಗಿದೆ” ಎಂದು ಚೇತನ ಅಹಿಂಸ ಹೇಳಿದರು.

ಮುಖ್ಯ ಭಾಷಣಕಾರರಾದ ಗೌತಮ್ ಬೊಮ್ಮನಹಳ್ಳಿ ಮಾತನಾಡಿ, “ಅಂಬೇಡ್ಕರ್ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಚಿಂತನೆಗಳ ಕುರಿತು ಗಂಭೀರ ಚಿಂತನ-ಮಂಥನ ನಡೆಯಬೇಕು” ಎಂದು ಹೇಳಿದರು.

1822562

“ಅಂಬೇಡ್ಕರ್ ಅವರು ಅನೇಕ ಅವಮಾನ ಹಾಗೂ ನೋವುಗಳನ್ನು ಎದುರಿಸಿ 32 ಪದವಿಗಳು ಮತ್ತು 9 ಭಾಷೆಗಳ ಜ್ಞಾನ ಸಂಪಾದಿಸಿದರು. ಅವರ ಹೋರಾಟ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ನಡೆದ ಮಹತ್ತರ ಚಳವಳಿಯಾಗಿತ್ತು” ಎಂದು ತಿಳಿಸಿದರು.

“2500 ವರ್ಷಗಳ ಗುಲಾಮಗಿರಿಯನ್ನು ಹಿಮ್ಮೆಟ್ಟಿಸಲು ಮತದಾನದ ಹಕ್ಕಿನ ಮೂಲಕ ಜನರಿಗೆ ಶಕ್ತಿ ನೀಡಿದರು. ‘ರಾಜ್ಯ ಹುಟ್ಟುವುದು ರಾಣಿ ಹೊಟ್ಟೆಯಲ್ಲಿ ಅಲ್ಲ, ಮತಪೆಟ್ಟಿಗೆಯಲ್ಲಿ’ ಎಂಬ ಚಿಂತನೆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಬೋಧಿಸಿದರು” ಎಂದು ಹೇಳಿದರು.

“ಜಗತ್ತು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿದ್ದರೂ, ಕೆಲವು ಮೂಲಭೂತವಾದಿ ಮನುವಾದಿಗಳು ಅವರ ಚಿಂತನೆಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಶಿಕ್ಷಣವಂತರು ಕೂಡ ಅಂಬೇಡ್ಕರ್ ಸಿದ್ಧಾಂತಕ್ಕೆ ದ್ರೋಹ ಮಾಡುತ್ತಿರುವುದು ವಿಷಾದನೀಯ” ಎಂದು ಆರೋಪಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಂತೆಜಿ ಮಾತನಾಡಿ, “ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿ ನಡೆಯುವವರೇ ಅವರಿಗೆ ನಿಜವಾದ ಗೌರವ ಸಲ್ಲಿಸಿದವರು” ಎಂದರು.

1822564

ಇದನ್ನು ಓದಿದ್ದೀರಾ? ಕಲಬುರಗಿಯಲ್ಲಿ ನೂತನ ಮೃಗಾಲಯ ಲೋಕಾರ್ಪಣೆ

“ಅಂಬೇಡ್ಕರ್ ಅವರು ಮೌಢ್ಯತೆಯನ್ನು ವಿರೋಧಿಸಿದ್ದರು. ಮೂರ್ತಿ ಪೂಜೆ ಹಾಗೂ ವ್ಯಕ್ತಿ ಪೂಜೆಯಿಂದ ಸಮಾಜ ಅಂಧಕಾರದತ್ತ ಸಾಗುತ್ತದೆ. ಸಮತೆಯ ತತ್ವವನ್ನು ಅಳವಡಿಸಿಕೊಂಡಾಗ ಮಾತ್ರ ಜಾತಿ ರಹಿತ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಹೋರಾಟಗಾರರು, ಯುವಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಅಂಬೇಡ್ಕರ್ ಚಿಂತನೆಗಳ ಕುರಿತು ವಿಚಾರ ವಿನಿಮಯ ನಡೆಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಎರಡು ಮನೆಗಳಿಗೆ ಕನ್ನ: ₹3.65 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ನಗರದ ಹೀರಾಪುರ ಹೊಸ ಬಡಾವಣೆ ಹಾಗೂ ಚಿಂಚೋಳಿ ಲೇಔಟ್‌ನಲ್ಲಿ ಎರಡು ಪ್ರತ್ಯೇಕ...

ಕಲಬುರಗಿ | ಗಾಂಧೀಜಿ ಆದರ್ಶಗಳು ಯುವಕರಿಗೆ ದಾರಿದೀಪ: ಪವನಕುಮಾರ ವಳಕೇರಿ

ಬ್ರಿಟಿಷರ ವಿರುದ್ಧ ಶಾಂತಿ, ಅಹಿಂಸೆ ಹಾಗೂ ತಾಳ್ಮೆಯ ಮಾರ್ಗದಲ್ಲಿ ಹೋರಾಡಿ ದೇಶಕ್ಕೆ...

ಕಲಬುರಗಿ | ರಂಗಭೂಮಿಯಲ್ಲಿ ಅಪ್ರತಿಮ ಕಲಾಸೇವೆ; ಶ್ರೀಧರ ವಗ್ಗಿಗೆ ರಾಜ್ಯಮಟ್ಟದ ‘ಕಲಾ ತಪಸ್ವಿ’ ಪ್ರಶಸ್ತಿ

ಚಿಂಚೋಳಿ ತಾಲ್ಲೂಕಿನ ಕನಕಪುರ ಗ್ರಾಮದ ರಂಗಭೂಮಿ ಕಲಾವಿದ ಶ್ರೀಧರ ವಗ್ಗಿ ಅವರಿಗೆ...

ಕಲಬುರಗಿ | ಎಸ್‌ಐಆರ್ ವಿರುದ್ಧ ಸಿಡಿದೆದ್ದ ಪ್ರಗತಿಪರ ಸಂಘಟನೆಗಳು; ಜ್ಞಾನೇಶ್ ಕುಮಾರ್ ಪ್ರತಿಕೃತಿ ದಹನ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಜೇವರ್ಗಿ ತಾಲೂಕು...