ಕಲಬುರಗಿ | ಒಳ ಮೀಸಲಾತಿ ರೋಸ್ಟರ್ ಬಿಂದುವಿನ ಅನ್ಯಾಯದ ವಿರುದ್ದ ಬಲಗೈ ಹೋರಾಟ ಸಮಿತಿ ಪ್ರತಿಭಟನೆ

Date:

ಪರಿಶಿಷ್ಟ ಜಾತಿ ಒಳಮೀಸಲಾತಿಯ ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಜೇವರ್ಗಿ ಬಲಗೈ ಹೋರಾಟ ಸಮಿತಿ ಜೇವರ್ಗಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

- Advertisement -

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಘೋಷಣೆಗಳ ನಡುವೆ ವಿಧಾನಸೌಧವರೆಗೆ ಸಾಗಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...
1475959

ಪ್ರತಿಭಟನೆಯನ್ನು ಉದ್ದೇಶಿಸಿ ನಿಜಲಿಂಗ್ ದೊಡ್ಡಮನಿ ಮಾತನಾಡಿ, ‘ಪರಿಶಿಷ್ಟ ಜಾತಿ ಒಳಮೀಸಲಾತಿಯ ರೋಸ್ಟರ್ ಬಿಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಬಲಗೈ ಹಾಗೂ ಎಡಗೈ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

‘ನಾವು ಜಾಗೃತಿಯಾಗಿ ಸರ್ಕಾರವನ್ನು ಒತ್ತಾಯಿಸದಿದ್ದರೆ ಬಲಗೈ ಸಂಬಂಧಿತ ಜಾತಿಗಳಿಗೆ ಘೋರ ಅನ್ಯಾಯವಾಗುವ ಸಾಧ್ಯತೆ ಇದೆ. ಶೋಷಿತ ವರ್ಗದವರನ್ನು ಯಾವತ್ತೂ ಒಂದಾಗದಂತೆ ನೋಡಿಕೊಳ್ಳುವುದು ಮೇಲ್ವರ್ಗದ ರಾಜಕೀಯ ತಂತ್ರವಾಗಿದೆ’ ಎಂದು ಅವರು ಆರೋಪಿಸಿದರು.

‘ರೋಸ್ಟರ್ ಬಿಂದುವನ್ನು 6:6:5 ಅನುಪಾತದಲ್ಲಿ ಸಮನ್ವಯಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

1475983

ಸಾಮಾಜಿಕ ಹೋರಾಟಗಾರ ಮಹೇಶ ರಾಡೋಠ ಮಾತನಾಡಿ, ‘ರಾಜ್ಯ ಸರ್ಕಾರ ನಾಮಮಾತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಳಮೀಸಲಾತಿ ರೋಸ್ಟರ್ ಬಿಂದುವಿನ ವಿರುದ್ಧ ರಾಜ್ಯಮಟ್ಟದ ಹೋರಾಟ ರೂಪಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾದ ಒಳಮೀಸಲಾತಿ ರೋಸ್ಟರ್ ಬಿಂದುವಿನ ಆಧಾರದ ಮೇಲೆ ಅ ವೈಜ್ಞಾನಿಕವಾಗಿ ನೇಮಕಗೊಂಡಿರುವ ಎಲ್ಲಾ ಹಂತದ ಹುದ್ದೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು, ಹೊಸ ಜಾತಿ ಪ್ರಮಾಣಪತ್ರಗಳ ವಿತರಣೆಯನ್ನು ತುರ್ತಾಗಿ ನಿಲ್ಲಿಸಬೇಕು ಹಾಗೂ ಹಳೆಯ ಜಾತಿ ಪ್ರಮಾಣಪತ್ರಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು. ಒಳಮೀಸಲಾತಿ ಸಂಬಂಧಿತ ಗೊಂದಲಗಳು ಪರಿಹಾರವಾಗುವವರೆಗೆ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಇದನ್ನು ಓದಿದ್ದೀರಾ? ಬೀದರ್‌ | ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಬಲಗೈ ಸಮುದಾಯ ಒತ್ತಾಯ

ಈ ಸಂದರ್ಭದಲ್ಲಿ ಚಂದ್ರಶೇಖರ ಹರನಾಳ, ಪುಂಡಲಿಕ ಗಾಯಕವಾಡ, ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಶ್ರಿಹರಿ ಕರಕಿಹಳ್ಳಿ, ಸಿದ್ರಾಮ ಕಟ್ಟಿ, ರವಿ ಕುರಳಗೇರಿ, ದವಲಪ್ಪ ಮದನ, ಮಾಪಣ್ಣ ಕಟ್ಟಿ, ಸಿದ್ದು ಕೆರೂರ, ಶಿವಶರಣಪ್ಪ ಮಾರಡಗಿ, ಪರಮಾನಂದ ಯಲಗೋಡ, ವಿಶ್ವರಾಧ್ಯ ಗಂವ್ಹಾರ, ಮಲ್ಲಿಕಾರ್ಜುನ ಕೆಲ್ಲೂರ, ಯಮನೇಶ ಅಂಕಲಗಿ, ಗುಂಡಪ್ಪ ಜಡಗಿ, ಯಶವಂತ ಬಡಿಗೇರ, ಭಾಗಣ್ಣ ಕಟ್ಟಿ, ಶ್ರೀಮಂತ ಕಿಲೆದಾರ, ದೇವಿಂದ್ರ ವರ್ಮಾ, ಮಲ್ಲಮ್ಮ ಕೊಬ್ಬಿನ, ವಿಜಯಕುಮಾರ ಧರೇನ, ಸಿದ್ದು ಶರ್ಮಾ, ಮಿಲಿಂದ ಸಾಗರ, ವಿಶ್ವರಾಧ್ಯ ಗೋಪಾಲಕರ, ಮರೆಪ್ಪ ಬೇಗಾರ, ರಾಜು ಹಾಲಗಡ್ಲಾ, ಮಲ್ಲಿನಾಥ ಹೆಗಡೆ, ಗುರಲಿಂಗಪ್ಪ ಗುಡೂರ, ಸಂಗಣ್ಣ ಗುಡೂರ, ಪ್ರಭಾಕರ ಸಾಗರ, ತಿಪ್ಪಣ್ಣ ಅಣಬಿ, ರೇವಣಸಿದ್ದಪ್ಪ ಬಿರಾಳ, ಹಣಮಂತ ಮಂದ್ರವಾಡ, ಸಂಗು ಹರನೂರ, ಚನ್ನಬಸಪ್ಪ ಕಾಚಪೂರ, ಅಭಿಷೇಕ ಎಸ್. ನಂದಿ, ಮಾನಪ್ಪ ಎಂ. ಶಿಲ್ಪಿ, ದೊಡ್ಡಪ್ಪ ಮಲ್ಲಾ (ಕೆ), ಈರಣ್ಣ ಹರನೂರ, ಶ್ರೀನಾಥ ಕಟ್ಟಿಮನಿ, ಗುರುಲಿಂಗಪ್ಪ ಗೌನಳ್ಳ, ಅಮಿನಪ್ಪ ಮಂದೇವಾಲ, ಮೌನೇಶ ಬುಟ್ಟಾಳ, ಗೀರಿಶ ಸುಂಟ್ಯಾಣ, ಬಸವರಾಜ ಎಂ. ಇಂಗಳಗಿ, ಪ್ರಕಾಶ ಜೇವರ್ಗಿ, ವಿಜಯಕುಮಾರ, ಮೊದಾಲ ಆಲಬಾದ್, ಶರಣು ಕಟ್ಟಿ ಸಂಗಾವಿ, ಶರಣು ಕುರನಳ್ಳಿ, ಶಿವಶರಣಪ್ಪ, ವಿಶ್ವ ಆಲೂರ, ದಾವು ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ : 14 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ, 1 ನಾಮಪತ್ರ ತಿರಸ್ಕೃತ

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ನಡೆಯಲಿರುವ...

ಕಲಬುರಗಿ | ಹಳೆಯ ನೆನಪುಗಳಿಗೆ ಮರುಜೀವ: ಹಳೆಯ ವಿದ್ಯಾರ್ಥಿಗಳ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ

ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ...

ಕಲಬುರಗಿ | ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ; ಕಾರಾಗೃಹ ಡಿಐಜಿ ಬಂಧನ

ಬೆಂಗಳೂರು ಸುಪ್ರೀಂ ಕೋರ್ಟ್‌ ಆದೇಶದ ಮಾದರಿಯನ್ನು ಅನುಕರಿಸಿ ನಕಲಿ ಆದೇಶವೊಂದನ್ನು ಸಿದ್ಧಪಡಿಸಿ...

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...