ಕೆಜಿಎಫ್ | ಕೋಲಾರ ಜಿಲ್ಲೆಯಲ್ಲೇ ಅತಿದೊಡ್ಡ ಮೊತ್ತದಲ್ಲಿ ಸೇತುವೆ ನಿರ್ಮಾಣ : ಶಾಸಕಿ ಎಂ ರೂಪಕಲಾ

Date:

ಕ್ಷೇತ್ರದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರಾಮಸಾಗರ ಕೆರೆ ಕೋಡಿ ಹೋಗುವ ಪಾಲಾರ್ ನದಿಗೆ ತಾತಿರೆಡ್ಡಿಹಳ್ಳಿ ಗ್ರಾಮದ ಬಳಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕಿ ರೂಪಕಲಾ ಅಧಿಕೃತವಾಗಿ ಭೂಮಿ ಪೂಜೆ ನೆರವೇರಿಸಿದರು.

- Advertisement -

ಲೋಕೋಪಯೋಗಿ ಇಲಾಖೆಯ ಮುಖಾಂತರ ಅನುಷ್ಠಾನಗೊಳ್ಳುತ್ತಿರುವ ಈ ಬೃಹತ್ ಯೋಜನೆಗೆ ಒಟ್ಟು ರೂ. 9.50 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ನೂತನ ಸೇತುವೆಯು 12.00 ಮೀಟರ್ ಅಗಲದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಭೂಮಿ ಪೂಜೆ ನೆರವೇರಿಸಿ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಇಡೀ ಜಿಲ್ಲೆಯಲ್ಲಿಯೇ ಅತ್ಯಂತ ಉದ್ದದ ಸೇತುವೆ ಇದಾಗಿದ್ದು, ಹಲವು ವರ್ಷಗಳ ಹಿಂದೆ ಕೇವಲ ಒಂದು ಎತ್ತಿನ ಗಾಡಿ ಹೋಗುವಷ್ಟು ಕಿರಿದಾದ ಅಗಲದಲ್ಲಿ ಇದನ್ನು ನಿರ್ಮಿಸಲಾಗಿತ್ತು. ಪ್ರಸ್ತುತ ರೈತರು ತಮ್ಮ ಬೆಳೆಗಳನ್ನು ಸಾಗಿಸುವ ವಾಹನಗಳು, ಶಾಲಾ ಬಸ್‌ಗಳು ಹಾಗೂ ಇತರೆ ಭಾರೀ ವಾಹನಗಳು ಎರಡೂ ಕಡೆಯಿಂದ ಏಕಕಾಲದಲ್ಲಿ ಸಂಚರಿಸಲು ಇಲ್ಲಿ ಸಾಧ್ಯವಾಗುತ್ತಿಲ್ಲ. ಜೊತೆಗೆ ಹಾಲಿ ಇರುವ ಹಳೆಯ ಸೇತುವೆಯು ಶಿಥಿಲಾವಸ್ಥೆ ತಲುಪಿದೆ.

ಎರಡೂ ಕಡೆ ನದಿ ಹರಿಯುತ್ತಿರುವುದರಿಂದ ಹಳೆಯ ಸೇತುವೆಯನ್ನು ತಕ್ಷಣ ಕೆಡವಿದರೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಪರ್ಯಾಯ ರಸ್ತೆ ನಿರ್ಮಿಸುವುದು ಅಸಾಧ್ಯ. ಆದ್ದರಿಂದ, ಮೊದಲು ಹಳೆಯ ಸೇತುವೆಯ ಪಕ್ಕದಲ್ಲೇ ನೂತನ ಸುಸಜ್ಜಿತ ಸೇತುವೆಯನ್ನು ನಿರ್ಮಿಸಿ, ಸಂಚಾರ ಮುಕ್ತಗೊಳಿಸಿದ ಬಳಿಕವಷ್ಟೇ ಹಳೆಯ ಸೇತುವೆಯನ್ನು ಕೆಡವಲಾಗುವುದು ಎಂದರು.

ರೈತರಲ್ಲಿ ಶಾಸಕರ ಮನವಿ:
ಸಾರ್ವಜನಿಕರ ಮತ್ತು ರೈತರ ಅನುಕೂಲಕ್ಕಾಗಿ ಹಳೆ ಸೇತುವೆ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಿಸುತ್ತಿರುವುದರಿಂದ, ಕಾಮಗಾರಿ ಸುಗಮವಾಗಿ ನಡೆಯಲು ಎರಡೂ ಬದಿಯ ರೈತರು ಹಾಗೂ ಸಾರ್ವಜನಿಕರು ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಶಾಸಕಿ ರೂಪಕಲಾ ಎಂ ಶಶಿಧರ್ ಮನವಿ ಮಾಡಿಕೊಂಡರು.

ಕಾಮಗಾರಿಯಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗಬಾರದು. ನಿಗದಿತ ಸಮಯಕ್ಕಿಂತ 6 ತಿಂಗಳ ಒಳಗಾಗಿ ಇಡೀ ಯೋಜನೆಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಶಾಸಕರು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನು ಓದಿದ್ದೀರಾ..?ಕೋಲಾರ | ಸಂಸದರಿಗೆ ಶುಭ ಕೋರಿದ ಹೂಡಿ ವಿಜಯ್ ಕುಮಾರ್

ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ರಾಮ್ ಮೂರ್ತಿ, ಎಇಇ ರಾಜಶೇಖರ್, ಗುತ್ತಿಗೆದಾರ ರಾಮಚಂದ್ರ ಗೌಡ, ನಾರಾಯಣ ಗೌಡ, ಯುವ ಗುತ್ತಿಗೆದಾರ ರಾಮ್ ಮೂರ್ತಿ, ಜಿಪಂ ಮಾಜಿ ಸದಸ್ಯ ಅ. ಮು. ಲಕ್ಷ್ಮೀ ನಾರಾಯಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಧಕೃಷ್ಣ ರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಚಂದ್ರಪ್ಪ, ರಾಮಾದೇವಿ ಮುರಳಿ, ವಿನು ಕಾರ್ತಿಕ್, ಸುವರ್ಣ ವೆಂಕಟರಾಮ್, ಸ್ಕೂಲ್ ವೆಂಕಟೇಶ್, ಕೆ. ಎಂ. ಕೃಷ್ಣ ಮೂರ್ತಿ, ಎಪಿಎಂಸಿ ನಿರ್ದೇಶಕರಾದ ಯುವರಾಣಿ ವೆಂಕಟಾಚಲಪತಿ, ಶ್ರೀದೇವಿ ಸಂಪತ್, ಸುರೇಂದ್ರ ಗೌಡ, ಮುರಳಿ, ಮುಖಂಡರಾದ ಚನ್ನಕೇಶವ ರೆಡ್ಡಿ, ಡೈರಿ ಮುಕುಂದಪ್ಪ, ಅಪ್ಪೋಜಿ ಗೌಡ, ಎಂಬಿಎ ಕೃಷ್ಣಪ್ಪ, ವೆಂಕಟರಾಮ್ ರಾಜಕುಮಾರ್, ಮುರಳಿ ನಾಯಕ್, ಆಂಜಪ್ಪ, ಮುನಿಸ್ವಾಮಿ ರೆಡ್ಡಿ ಮುನೇಗೌಡ ಮಂಜುನಾಥ್ ಪಟ್ಟಾಬಿ, ಶ್ರೀನಿವಾಸ್ ರೆಡ್ಡಿ, ಗಂಗಿರೆಡ್ಡಿ, ಮುನಿ ರೆಡ್ಡಿ, ಪುರುಷೋತ್ತಮ್ ನಾಯ್ಡು, ಕೋದಂಡಪ್ಪ, ಶ್ರೀರಾಮರೆಡ್ಡಿ, ದಶರಥ ರೆಡ್ಡಿ, ಭೀಮೇಶ್, ಎತೂರು ಚಂದ್ರು, ಚಂದ್ರಪ್ಪ, ದೇವರಾಜ್ ರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀಳಗಿ | ಕಬ್ಬಿಗೆ ರೂ.5,000 ದರ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘದ ಪ್ರತಿಭಟನೆ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ರೂ. 5,000 ದರ ನಿಗದಿಪಡಿಸುವುದು ಸೇರಿದಂತೆ...

ಕೋಲಾರ | ಕ್ರೀಡೆ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ: ಮೈಲಾಂಡಹಳ್ಳಿ ಮುರಳಿ

ಕ್ರೀಡೆಯಲ್ಲಿ ಗ್ರಾಮೀಣ ಭಾಗದ ಯುವಕರಿಗೆ ಉತ್ತಮ ಅವಕಾಶಗಳು ದೊರೆಯಬೇಕು. ಕ್ರೀಡೆ ದೈಹಿಕ...

ಜಮಖಂಡಿ | ದಲಿತ ಸಾಹಿತ್ಯ ಶೋಷಣೆಯ ವಿರುದ್ಧದ ಧ್ವನಿ: ಪರಶುರಾಮ ಮಹಾರಾಜನವರ

ಅಸ್ಪೃಶ್ಯತೆ, ಸಾಮಾಜಿಕ ತಾರತಮ್ಯ ಹಾಗೂ ಶೋಷಣೆಯ ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ,...

ವಿಜಯಪುರ | ವಿಶೇಷಚೇತನರ ಸಬಲೀಕರಣಕ್ಕೆ ವಿವಿಧ ಯೋಜನೆ: ಆನ್‌ಲೈನ್ ಅರ್ಜಿ ಆಹ್ವಾನ

ವಿಜಯಪುರ ಜಿಲ್ಲೆಯ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ...