ಕೋಲಾರ ರೈತರಿಂದ ಸೌಲಭ್ಯ ಪಡೆದ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ

Date:

ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಒಂದಕ್ಕೊಂದು ಪೂರಕವಾಗಿರಬೇಕು. ನರಸಾಪುರ ಹಾಗೂ ವೇಮಗಲ್ ಪ್ರದೇಶಗಳ ನಿಜವಾದ ಅಭಿವೃದ್ಧಿ ಎಂದರೆ ಅಲ್ಲಿನ ಜನರಿಗೆ ಉದ್ಯೋಗ ಭದ್ರತೆ, ಗೌರವಯುತ ಜೀವನ ಮತ್ತು ಆರ್ಥಿಕ ಸ್ಥಿರತೆ ಸಿಗುವಂತಾಗಬೇಕು. 

ಕೋಲಾರದ ನರಸಾಪುರ ಹಾಗೂ ವೇಮಗಲ್ ಪಟ್ಟಣಗಳು ಕೈಗಾರಿಕಾ ಪ್ರದೇಶಗಳಾಗಿದ್ದು, ಹಲವಾರು ವರ್ಷಗಳಿಂದ ಇಲ್ಲಿ ಬಹುತೇಕ ಕೈಗಾರಿಕೆಗಳು ಸ್ಥಾಪಿತವಾಗಿವೆ. ಸಾವಿರಾರು ಯುವಜನರು ಇಲ್ಲಿ ಉದ್ಯೋಗವನ್ನು ಮಾಡುತ್ತಿದ್ದಾರೆ. ಆದರೆ ಇಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ನೀಡಬೇಕು ಎನ್ನುವ ಕೂಗು ಈವರೆಗೂ ಸರಿಯಾದ ರೀತಿಯಲ್ಲಿ ಈಡೇರಿಲ್ಲ. ಹಲವಾರು ವರ್ಷಗಳಿಂದ ಸಂಘಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೂಡ ಕಂಪೆನಿಗಳು ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡಲಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

- Advertisement -

ಕೋಲಾರದ ಭೂಮಿ, ನೀರು, ವಿದ್ಯುತ್‌ ಎಲ್ಲ ಸೌಲಭ್ಯಗಳನ್ನು ನೀಡಿದರೂ ಕೂಡ ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡುತ್ತಿಲ್ಲವೆಂಬ ಕೂಗು ಈ ಹಿಂದಿನಿಂದಲೂ ಕೇಳಿಬರುತ್ತಿದೆ. ಹಾಗಾಗಿ ಈ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನಹರಿಸಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ನೀಡುವಂತೆ ಕ್ರಮ ವಹಿಸಬೇಕು ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಈ ಕುರಿತು ಕೋಲಾರ ಶಾಸಕ ಕೊತ್ತೂರ್ ಮಂಜುನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಕೋಲಾರದ ಕೈಗಾರಿಕೆಗಳ ಪರವಾಗಿ ಇಲ್ಲ, ಬದಲಿಗೆ ರೈತರು, ಯುವಜನರು ಸೇರಿದಂತೆ ಇಲ್ಲಿಯ ಜನರ ಪರವಾಗಿದ್ದೇನೆ. ಯಾಕಂದ್ರೆ ನಮ್ಮ ರೈತರು ಕೈಗಾರಿಕೆಗಳಿಗೆ ಜಮೀನುಗಳನ್ನು ನೀಡಿ ಬರಿಗೈ ಆಗಿದ್ದಾರೆ. ಆದರೆ ಅಂಥವರ ಮಕ್ಕಳಿಗೆ, ಇಲ್ಲಿನ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ಕೊಡಲಿಲ್ಲ ಅಂದ್ರೆ ನಾನ್ಯಾಕೆ ಕೈಗಾರಿಕೆಗಳ ಪರ ಇರಬೇಕು. ಸ್ಥಳೀಯರಿಗೆ ಗೇಟ್‌ ಕೀಪರ್‌, ಶೌಚಾಲಯ ತೊಳೆಯುವ ಕೆಲಸ ಕೊಡುತ್ತಾರೆ. ಅಲ್ಲದೆ ಕೇವಲ 11 ತಿಂಗಳು ಮಾತ್ರ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಆಮೇಲೆ ಆ ಯುವಕ ಏನು ಮಾಡ್ಬೇಕು” ಎಂದು ಕೈಗಾರಿಕೆಗಳ ವಿರುದ್ಧ ಕಿಡಿಕಾರಿದರು.

ಕೈಗಾರಿಕೆ 1

“ಕೋಲಾರ ಜಿಲ್ಲೆಯಲ್ಲಿ ಪ್ರಮುಖವಾಗಿ ಮಾಲೂರು, ನರಸಾಪುರ, ವೇಮಗಲ್ ಪಟ್ಟಣಗಳಲ್ಲಿ ಮೂರು ಕೈಗಾರಿಕಾ ಪ್ರದೇಶಗಳು ಇವೆ. ಇಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಆದರೆ ಸ್ಥಳೀಯರಿಗೆ ಹೆಚ್ಚು ಆದ್ಯತೆ ಸಿಗುತ್ತಿಲ್ಲ. ಮೊದಲು ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಸಿಗುತಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಯವರಿಗೆ ಹೆಚ್ಚು ಉದ್ಯೋಗ ನೀಡುತ್ತಿದ್ದು, ಕೋಲಾರ ಜಿಲ್ಲೆಯವರನ್ನು ಕಡೆಗಣಿಸಲಾಗಿದೆ. ತೀರಾ ಕಡಿಮೆ ಪ್ರಮಾಣದಲ್ಲಿ ಇದ್ದಾರೆ” ಎಂದರು.

“ಡಾ. ಸರೋಜಿನಿ ವರದಿಯಲ್ಲಿ ಸ್ಥಳೀಯರಿಗೆ ಸಿ ಮತ್ತು ಡಿ ಗ್ರೂಪ್‌ನಲ್ಲಿ ಶೇ.100ರಷ್ಟು ಉದ್ಯೋಗ, ಎ ಮತ್ತು ಬಿ ಗ್ರೂಪ್‌ನಲ್ಲಿ ಶೇ.65ರಷ್ಟು ಉದ್ಯೋಗವನ್ನು ಕನ್ನಡದವರಿಗೇ ಕೊಡಬೇಕು ಅಂತಿದೆ. ಆದರೂ ಅದು ಪಾಲನೆಯಾಗುತ್ತಿಲ್ಲ. ಕಂಪೆನಿ ಮ್ಯಾನೇಜ್‌ಮೆಂಟ್‌ ಸರೋಜಿನಿ ವರದಿಯನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಿಲ್ಲ. ಜಿಲ್ಲಾಡಳಿತವೂ ಕೂಡ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರನೇ ಒಪ್ಪಿಕೊಂಡಿರುವ ಸರೋಜಿನಿ ವರದಿಯನ್ನು ಯಾವ ರೀತಿ ಜಾರಿ ಮಾಡಿದ್ದಾರದು ಗಮನಿಸಲು ಸಮಿತಿ ರಚನೆ ಮಾಡಬೇಕು ಹಾಗೂ ಕಂಪೆನಿಯವರು ಯಾವ ರೀತಿ ಕಾರ್ಮಿಕ ಕಾನೂನುಗಳನ್ನು ಜಾರಿಮಾಡಿದ್ದಾರೆಂಬುದನ್ನು ಕಂಪೆನಿಯವರು ಯಾವ ರೀತಿ ಜಾರಿ ಮಾಡಿದ್ದಾರೆಂದು ಪರಿಶೀಲನೆ ಮಾಡಬೇಕು” ಎಂದು ತಿಳಿಸಿದರು.

ಕೈಗಾರಿಕೆ 2

“ಕಳೆದ ಕೆಲವು ದಿನಗಳ ಹಿಂದೆ ಉದ್ಘಾಟನೆಯಾದ ಮಿನಿ ಹೆಲಿಕಾಪ್ಟರ್ ಘಟಕ ಸಹಿತ ಬೇರೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡುತ್ತಿಲ್ಲ. ಕೊಟ್ಟರೂ ಕೂಡ ಡಿ ಗ್ರೂಪ್ ನೌಕರರ ಕೆಲಸ ಕೊಡುತ್ತಾರೆ. ಅದರಲ್ಲಿ ಕ್ಲೀನೀಂಗ್, ವಾಚ್ ಮ್ಯಾನ್, ಶೌಚಾಲಯ ತೊಳೆಯುವ ಕೆಲಸ ಕೊಡುತ್ತಾರೆ. ಅದನೆಲ್ಲಾ ಬಿಟ್ಟು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗಾರಿಕಾ ಆಡಳಿತ ಮಂಡಳಿ ಜತೆಗೆ ಸಭೆ ಮಾಡಿ ಡಿ ಮತ್ತು ಬಿ ಗ್ರೂಪ್‌ನಲ್ಲಿ ಶೇ.100ರಷ್ಟು ಹಾಗೂ ಎ ಮತ್ತು ಬಿ ಗ್ರೂಪ್‌ನಲ್ಲಿ ಶೇ.60ರಷ್ಟು ಉದ್ಯೋಗ ನೀಡಬೇಕು” ಎಂದು ಸಿಪಿಐಎಂ ಜಿಲ್ಲಾ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಈ ದಿನ.ಕಾಮ್ ಮೂಲಕ ಆಗ್ರಹಿಸಿದರು.

ಕೋಲಾರ ಕಾಂಗ್ರೆಸ್ ಮುಖಂಡ ಬೆಟ್ಟಬೆಣಜಿನಹಳ್ಳಿ ನದೀಂ ಬೇಗ್ ಮಾತನಾಡಿ, “ಜಿಲ್ಲೆಯ ವೇಮಗಲ್ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಬೇರೆ ರಾಜ್ಯದ ಯುವಕರಿಗೆ ಹೆಚ್ಚು ಉದ್ಯೋಗ ನೀಡಿ, ಸ್ಥಳೀಯರಿಗೆ ಕಡಿಮೆ ಪ್ರಮಾಣದಲ್ಲಿ ಉದ್ಯೋಗ ನೀಡುವುದು ಸರಿಯಲ್ಲ. ನಮ್ಮ ಕೋಲಾರದ ಶಾಸಕ ಕೊತ್ತೂರ್ ಮಂಜುನಾಥ್ ಅವರೂ ಕೂಡ ಸ್ಥಳೀಯರಿಗೆ, ರೈತರ ಮಕ್ಕಳಿಗೆ ಹೆಚ್ಚು ಉದ್ಯೋಗ ನೀಡಬೇಕೆಂದು ಈಗಾಗಲೇ ಒತ್ತಾಯಿಸಿದ್ದಾರೆ” ಎಂದರು.

ರೈತ ಸಂಘ ಹಸಿರು ಸೇನೆ ರಾಜ್ಯ ಮುಖಂಡ ಅಬ್ಬನಿ ಶಿವಪ್ಪ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ಕೈಗಾರಿಕೆಗೆ ಭೂಮಿ ನಮ್ಮದು, ನೀರು ನಮ್ಮದು, ವಿದ್ಯುತ್‌ ನಮ್ಮದು. ಆದರೆ ಉದ್ಯೋಗವನ್ನು ಹೊರಗಿನವರಿಗೆ ಹಾಗೂ ಉತ್ತರ ಭಾರತದ ಯುವಜನರಿಗೆ ಏಕೆ ನೀಡುತ್ತಿದ್ದೀರೆಂದು ಪ್ರಶ್ನಿಸಿದಾಗ, ʼಸ್ಥಳೀಯ ಯುವಜನರು ಕೆಲಸ ಮಾಡುವುದಿಲ್ಲ, ತೊಂದರೆಯಾದಾಗ ಸ್ಥಳೀಯರನ್ನು ಸೇರಿಸಿ ಪ್ರತಿಭಟನೆ ಮಾಡ್ತಾರೆʼ ಅಂತ ಹೇಳ್ತಾರೆ. ಆದ್ರೆ ಕಂಪೆನಿಯವರು ತೊಂದರೆ ಕೊಟ್ರೆ ಸುಮ್ಮನಿರಬೇಕಾ? ಪ್ರತಿಭಟನೆ ಮಾಡಲು ಎಲ್ಲರಿಗೂ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡರೆ ಹೇಗೆ…” ಎಂದು ಪ್ರಶ್ನಿಸಿದರು.

“ಕೈಗಾರಿಕೆಯವರು ರೈತರ ಮಕ್ಕಳಿಗೆ ಉದ್ಯೋಗಕ್ಕೆ ತಕ್ಕ ಕೆಲಸ ಕೊಡುವುದಿಲ್ಲ. ಕೆಲಸಕ್ಕೆ ಬಾರದಿರುವ ರೀತಿ ಕೆಲಸ ಕೊಡುತ್ತಾರೆ. ಇದನ್ನು ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಗಮನವಹಿಸಿ ಶೇ.80ರಷ್ಟು ಸ್ಥಳೀಯರಿಗೆ ಕೆಲಸ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ರೈತರನ್ನು ಸೇರಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

“ಜಿಲ್ಲೆಯಲ್ಲಿ ವಿಷ್ಟ್ರಾನ್ ಕಂಪನಿ, ಹೋಂಡಾ ಕಂಪೆನಿ, ನಹಾರ್ಸ್ ಟಾಟಾ ಏರ್ ಬಸ್ ಮಿನಿ ಹೆಲಿಕಾಫ್ಟರ್‌ ಘಟಕ, ಪ್ಲಾಸ್ಮಾ ಜನ್
ಹೆಟೆರೋಸ್ ಕಂಪೆನಿಗಳು ತಲೆ ಎತ್ತಿದ್ದು, ನಾವು ಕಂಪೆನಿ ಮ್ಯಾನೇಜ್‌ಮೆಂಟ್‌ ಬಳಿ ಹೋಗಿ ಪ್ರಶ್ನೆ ಮಾಡಿದರೆ, ಜಿಲ್ಲಾಡಳಿತಕ್ಕೆ ದೂರು ಕೊಡುತ್ತಾರೆ. ಸ್ಥಳೀಯವಾಗಿ ಕಂಪೆನಿ ಬರೋದೇ ಕಷ್ಟ, ಏನಾದ್ರೂ ಇದ್ರೆ ಜಿಲ್ಲಾಡಳಿತಕ್ಕೆ ತಿಳಿಸಿ, ಅಲ್ಲಿ ಹೋಗಿ ಗಲಾಟೆ ಮಾಡಬೇಡಿ ಅಂತಾರೆ. ಜಿಲ್ಲಾಡಳಿತ ಹಾಗೂ ಸರ್ಕಾರ ಸ್ಥಳೀಯರಿಗೆ ಹೆಚ್ಚು ಉದ್ಯೋಗ ಒದಗಿಸುವಂತೆ ಕ್ರಮ ಕೈಗೊಂಡರೆ ನಾವು ಯಾಕೆ ಕೇಳುತ್ತೇವೆ” ಎಂದರು.

ಕೈಗಾರಿಕಾ ಪ್ರದೇಶಗಳಿಗೆ ಭೂಮಿ ಕೊಟ್ಟಿರೋದು ಕೋಲಾರದ ಸ್ಥಳೀಯ ರೈತರು. ಅಂಥವರ ಮಕ್ಕಳಿಗೇನೆ ಉದ್ಯೋಗ ಕೊಡುತ್ತಿಲ್ಲ. ಕೆಲಸ ಕೊಟ್ಟರೂ ಕೂಡ ಡಿ ಗ್ರೂಪ್ ನೌಕರರ ಕೆಲಸ ನೀಡುತ್ತಾರೆ. ಆದ್ರೆ ಎ ಮತ್ತು ಬಿ ಗ್ರೂಪ್‌ನಲ್ಲಿ ಎಲ್ಲ ಹೊರಗಿನವರಿಗೆ ಉದ್ಯೋಗ ಕೊಟ್ಟಿದ್ದು, ಸ್ಥಳೀಯರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಉತ್ತರ ಭಾರತದ ಯುಪಿ ಬಿಹಾರ್, ಒಡಿಶಾ, ಗುಜರಾತ್ ರಾಜ್ಯದವರಿಗೆ ಹೆಚ್ಚು ಉದ್ಯೋಗ ನೀಡಿದ್ದಾರೆ. ಯಾವ ರೀತಿ ಅವರನ್ನು ಆಯ್ಕೆ ಮಾಡುತ್ತಾರೆ ಎನ್ನುವುದೇ ಗೊತ್ತಿಲ್ಲ ಎಂಬುದು ಸ್ಥಳೀಯರ ಕಳವಳವಾಗಿದೆ.

ಇದನ್ನೂ ಓದಿದ್ದೀರಾ? ಹಾಸನ ಮಣ್ಣಿನ ಹೆಣ್ಣು ಬೇರುಗಳು | ಸ್ತ್ರೀ ಲೋಕದ ಅಸ್ಮಿತೆ- ಪದ್ಮಾ ಶ್ರೀರಾಮ್

ಅಭಿವೃದ್ಧಿ ಎಂದರೆ ಕೇವಲ ಕೈಗಾರಿಕೆಗಳ ಸ್ಥಾಪನೆ ಮಾತ್ರವಲ್ಲ; ಅದು ಸ್ಥಳೀಯ ಜನರ ಬದುಕಿನ ಮಟ್ಟವನ್ನು ಮೇಲಕ್ಕೆತ್ತುವ ಪ್ರಕ್ರಿಯೆಯಾಗಬೇಕು. ಕೈಗಾರಿಕೆಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು, ಸ್ಥಳೀಯ ಯುವಜನರಿಗೆ ಆದ್ಯತೆ ನೀಡುವ ನೀತಿಯನ್ನು ಅನುಸರಿಸಬೇಕು. ಸರ್ಕಾರವೂ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿ, ಸ್ಥಳೀಯರಿಗೆ ಕನಿಷ್ಠ ಪ್ರಮಾಣದ ಉದ್ಯೋಗವನ್ನು ಖಚಿತಪಡಿಸಬೇಕು. ಜತೆಗೆ ಕೌಶಲ್ಯಾಭಿವೃದ್ಧಿ ತರಬೇತಿಗಳ ಮೂಲಕ ಯುವಕರನ್ನು ಕೈಗಾರಿಕಾ ಅಗತ್ಯಗಳಿಗೆ ತಕ್ಕಂತೆ ತಯಾರಿಸುವ ಕೆಲಸವೂ ನಡೆಯಬೇಕು.

ಕೈಗಾರಿಕಾ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಒಂದಕ್ಕೊಂದು ಪೂರಕವಾಗಿರಬೇಕು. ನರಸಾಪುರ ಹಾಗೂ ವೇಮಗಲ್ ಪ್ರದೇಶಗಳ ನಿಜವಾದ ಅಭಿವೃದ್ಧಿ ಎಂದರೆ ಅಲ್ಲಿನ ಜನರಿಗೆ ಉದ್ಯೋಗ ಭದ್ರತೆ, ಗೌರವಯುತ ಜೀವನ ಮತ್ತು ಆರ್ಥಿಕ ಸ್ಥಿರತೆ ಸಿಗುವಂತಾಗಬೇಕು. ಸ್ಥಳೀಯರ ಹಕ್ಕುಗಳನ್ನು ಕಾಪಾಡುವ ಜತೆಗೆ ಕೈಗಾರಿಕೆಗಳ ಬೆಳವಣಿಗೆಗೂ ಸಮತೋಲನ ಸಾಧಿಸಿದಾಗ ಮಾತ್ರ ಈ ಪ್ರದೇಶಗಳ ಪ್ರಗತಿ ಅರ್ಥಪೂರ್ಣವಾಗಲಿದೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟ ಜನರ ಹಕ್ಕಿನ ಹೋರಾಟ: ಪ್ರಕಾಶ್ ರಾಜ್

“ಕಳೆದ ಒಂದು ವರ್ಷದಿಂದ ಕರ್ನಾಟಕದ ನಾಗರಿಕ ಸಂಘಟನೆಗಳು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ...

ಕೋಲಾರ | ಪಶು ವೈದ್ಯರ ಖಾಲಿ ಹುದ್ದೆ ಭರ್ತಿಗೆ ರೈತಸಂಘ ಆಗ್ರಹ

ಪಶು ಇಲಾಖೆಯಲ್ಲಿ ಖಾಲಿ ಇರುವ ಪಶು ವೈದ್ಯರ ಹುದ್ದೆಗಳನ್ನು ತಕ್ಷಣ ಭರ್ತಿ...

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ ಮತ್ತು IRB ಕಂಪನಿ ಕಾಟ!

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ...

ರಾಜ್ಯಕ್ಕೆ ಬಾಕಿ ಅನುದಾನ: ಶೀಘ್ರದಲ್ಲೇ ‘ಸಿಹಿ ಸುದ್ದಿ’- ಡಿ.ಕೆ. ಶಿವಕುಮಾರ್

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಳೆಯ ಬಾಕಿ ಅನುದಾನದ ಕುರಿತಂತೆ ಶೀಘ್ರದಲ್ಲೇ...