ಕೋಲಾರ | ಕಾಳಹಸ್ತಿಪುರ ಕೆರೆಯಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಆರೋಪ: ಕ್ರಮಕ್ಕೆ ದಲಿತ ರಕ್ಷಣಾ ಸಮಿತಿ ಆಗ್ರಹ

Date:

ತಾಲ್ಲೂಕಿನ ಕಾಳಹಸ್ತಿಪುರ ಗ್ರಾಮದ ಕೆರೆಯಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಮಣ್ಣು ತೆಗೆದು ಖಾಸಗಿ ಬಡಾವಣೆಗಳು ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

- Advertisement -

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮತ್ತಿಕುಂಟೆ ಕೃಷ್ಣ ಮಾತನಾಡಿ ಕಳೆದ ಎರಡು ತಿಂಗಳಿಂದ ಕಾಳಹಸ್ತಿಪುರ ಕೆರೆಯಲ್ಲಿ ಹಿಟಾಚಿ ಮತ್ತು ಟಿಪ್ಪರ್‌ಗಳ ಮೂಲಕ ಅಪಾರ ಪ್ರಮಾಣದ ಮಣ್ಣು ತೆಗೆದು ಸಾಗಿಸುತ್ತಿದ್ದು ಇದರ ವಿರುದ್ದ ಜಿಲ್ಲಾಧಿಕಾರಿ, ಪೋಲೀಸ್ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸುವುದರಿಂದ ಕೆರೆಯ ಸ್ವರೂಪಕ್ಕೆ ಧಕ್ಕೆಯಾಗುತ್ತಿದ್ದು, ಲಕ್ಷಾಂತರ ರೂ. ಮೌಲ್ಯದ ಖನಿಜ ಸಂಪತ್ತು ನಷ್ಟವಾಗುತ್ತಿದೆ. ಈ ಕುರಿತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗದಗ | ಬದುಕ ಬೆಳಗಿತು ಹಣತೆ: ಕುಂಬಾರಿಕೆಗೆ ಮರು...

ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿ ನಿಧಾನವಾಗಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ಮಹಿಳೆಯೊಬ್ಬರು ತಮ್ಮ ಕುಟುಂಬದ ಕುಲಕಸುಬನ್ನೇ ಆದಾಯದ ಪ್ರಮುಖ ಮೂಲವನ್ನಾಗಿಸಿಕೊಂಡು ಸ್ವಾವಲಂಬಿ ಬದುಕಿನತ್ತ ಹೆಜ್ಜೆಯಿಟ್ಟಿದ್ದಾರೆ. ಸಂಜೀವಿನಿ...

ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ...

ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಕೇವಲ ದೀಪಗಳ ಹಬ್ಬವೆಂದು ನೋಡದೆ, ಬೆಳಕಿನ ಸಂಭ್ರಮದ ಪ್ರತೀಕವಾಗಿಯೂ ಪರಿಗಣಿಸಲಾಗಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಬ್ಬ ಪ್ರತಿವರ್ಷವೂ 'ಉಸಿರುಗಟ್ಟಿಸುವ ನರಕಯಾತನೆ'ಯಾಗಿ ಬದಲಾಗುತ್ತಿರುವುದು ಕಟು ಸತ್ಯ....

NCPಯನ್ನು ಒಡೆದಿದ್ದ ಬಿಜೆಪಿಯೇ ಅದನ್ನು ಕೂಡಿಸಲು ಹೊರಟಿದೆ; ರಾಜಕೀಯ...

ವಿರೋಧ ಪಕ್ಷಗಳ ಸಾಲಿನಲ್ಲಿದ್ದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ನಡುವಿನ ಸೌಹಾರ್ದ ಸಂಬಂಧ ಮುಂದುವರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪವಾರ್ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಮತ್ತು ದೆಹಲಿಯಲ್ಲಿ...

ಅಕ್ರಮ ಮಣ್ಣು ಸಾಗಾಟ ತಡೆಯುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರಿಕೃಷ್ಣ ಅವರಿಗೆ ತಿಳಿಸಿದರು ತಾವು ಸ್ಥಳಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಸಿಬ್ಬಂದಿಯನ್ನು ಕಳುಹಿಸಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಆಚಾರಿ ಮಣ್ಣು ತೆಗೆಯುವುದನ್ನು ತಡೆದಿಲ್ಲ ಈ ಪ್ರಕರಣದಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಕುರಿತು ಸಾರ್ವಜನಿಕ ವಲಯದಲ್ಲಿ ಅನುಮಾನಗಳಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಟಿಪ್ಪರ್ ಹಾಗೂ ಹಿಟಾಚಿಗಳನ್ನು ಪರಿಶೀಲಿಸಿದರೂ ನಂತರ ವಾಹನಗಳನ್ನು ವಶಕ್ಕೆ ಪಡೆಯದೆ ಕಳುಹಿಸಲಾಗಿದೆ ಮತ್ತು ಪ್ರಕರಣ ದಾಖಲಿಸಿಲ್ಲ ಈಗಾಗಲೇ ಟಿಪ್ಪರ್ ವಾಹನಗಳ ನೋಂದಣಿ ಸಂಖ್ಯೆಗಳಿರುವ ಛಾಯಾಚಿತ್ರಗಳು ಹಾಗೂ ಹಿಟಾಚಿಗಳ ಚಿತ್ರಗಳೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಣ್ಣ ನೀರಾವರಿ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕಿ, ವಾಹನಗಳ ಮಾಲೀಕರು ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ಬಸ್​​ಗಾಗಿ ವಿದ್ಯಾರ್ಥಿಗಳು ಪರದಾಟ.. ಬಸ್ ಬಾಗಿಲಿಗೆ ಜೋತು ಬಿದ್ದು ಪ್ರಯಾಣ..!ಶಾಲೆ-ಕಾಲೇಜ್​ ಸಮಯಕ್ಕೆ ಪ್ರತ್ಯೇಕ ಬಸ್​ ಸಂಚರಿಸಲಿ

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಗಾಂಧಿನಗರ ಲಕ್ಷ್ಮೀನಾರಾಯಣ, ಅಂಬೇಡ್ಕರ್ ನಗರ ಮಂಜುನಾಥ್, ಅಜಯ್, ಚದುಮನಹಳ್ಳಿ ಶ್ರೀರಾಮ್, ಹರಳಕುಂಟೆ ರಾಜಣ್ಣ ಮುಂತಾದವರು ಇದ್ದರು.

WhatsApp Image 2025 06 24 at 16.24.21 6207fd1d
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪೆರಂಪಳ್ಳಿ ಚರ್ಚ್ ವೃತ್ತದಲ್ಲಿ ಅಪಘಾತ ತಡೆಗೆ 6 ಬ್ಯಾರಿಕೇಡ್ ಅಳವಡಿಕೆ

ಪೆರಂಪಳ್ಳಿ ಚರ್ಚ್ ವೃತ್ತದ ಬಳಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ...

ದೀಪಾವಳಿ ಸಂಭ್ರಮದ ನಡುವೆ ಅಂದರ್-ಬಾಹರ್ ಜೂಜಾಟ: ಹೊನ್ನಾವರ, ಹಳಿಯಾಳದಲ್ಲಿ 10 ಮಂದಿ ವಶಕ್ಕೆ

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಜಿಲ್ಲೆಯ ಹೊನ್ನಾವರ ಮತ್ತು ಹಳಿಯಾಳ ತಾಲೂಕುಗಳಲ್ಲಿ...

ಹಾಸನ | ಸಚಿವ ಎಚ್‌.ಡಿ ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ; ಡಿಸಿ ಲತಾ ಕುಮಾರಿ

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಟ್ಸ್‌ಆಯಪ್‌ ಚಾಟ್‌ಗಳನ್ನು ಕೇಂದ್ರ ಸಚಿವರು ಮಾಧ್ಯಮಗಳ...

ಹಾಸನ | ಜಿಲ್ಲಾಡಳಿತದಲ್ಲಿ ಅವ್ಯವಹಾರ ಆರೋಪ; ಲೋಕಾಯುಕ್ತಕ್ಕೆ ದೂರು 

ಹಾಸನ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿರುವ (WhatsApp) ಸಂಭಾಷಣೆಗಳು ಸಾರ್ವಜನಿಕವಾಗಿ...