ತಾಲೂಕಿನ ಪರಗೋಡು ಗ್ರಾಪಂ ವ್ಯಾಪ್ತಿಯ ವಿದ್ಯಾಥಿರ್ಗಳು ಪ್ರತಿನಿತ್ಯ ಬಸ್ ವ್ಯವಸ್ಥೆ ಸರಿಯಾಗಿಲ್ಲದೇ ಶಾಲೆ-ಕಾಲೇಜ್ಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದಾರೆ.
ಪರಗೋಡು ಗ್ರಾಪಂ ವ್ಯಾಪ್ತಿಯ ಪೂಲವಾರಿಪಲ್ಲಿ,ವಡ್ಡರಪಾಳ್ಯ,ಕೊತ್ತಕೋಟೆ,ದೇವರೆಡ್ಡಿಪಲ್ಲಿ, ಭಾಗಗಳಿಂದ ಬಾಗೇಪಲ್ಲಿ ವಿವಿಧ ಶಾಲಾ ಕಾಲೇಜ್ಗೆ ಸುಮಾರು 250ಕ್ಕೂ ಹೆಚ್ಚು ವಿದ್ಯಾಥಿರ್ಗಳು ಪ್ರತಿನಿತ್ಯ ಓಡಾಡುತ್ತಾರೆ. ಚಿಕ್ಕಬಳ್ಳಾಪುರ ಪರೇಸಂದ್ರ ಕಡೆಯಿಂದ ಬರುವ ಬಸ್ಗಳಲ್ಲಿ ಪ್ರಯಾಣಿಕರ ಒತ್ತಡದಿಂದ ನಿಲುಗಡೆ ಇಲ್ಲದೇ ವಿದ್ಯಾಥಿರ್ಗಳಿಗೆ ಸಮಸ್ಯೆಯಾಗಿದೆ. ತಾಸುಗಟ್ಟಲೆ ಬಸ್ಗಾಗಿ ಕಾಯುವ ವಿದ್ಯಾಥಿರ್ಗಳು ಶಾಲೆ, ಕಾಲೇಜ್ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಸಂಜೆಯೂ ಮನೆಗೆ ಮರಳುವುದು ತಡವಾಗುತ್ತಿದೆ.
ವಿದ್ಯಾಥಿರ್ಗಳ ಅನುಕೂಲಕ್ಕಾಗಿ ವಿದ್ಯಾರ್ಥಿಗಳ ದಟ್ಟಣೆ ಕಡಿಮೆ ಮಾಡಲು ಬೆಳಿಗ್ಗೆ 8 ರಿಂದ 10 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆ ರಷ್ ಅವರ್‌ನಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಾಟ ಆರಂಭಿಸಬೇಕೆಂಬ ಪರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ,
ಚಲಿಸುವ ಬಸ್ ಗಳ ಮೆಟ್ಟಿಲುಗಳ ಮೇಲೆ ಅಥವಾ ಬಾಗಿಲಿಗೆ ನೇತಾಡಿಕೊಂಡು ವಿದ್ಯಾರ್ಥಿಗಳು ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ. ಇದು ಜೀವಕ್ಕೆ ಅಪಾಯ ತರುವುದಲ್ಲದೆ, ದೊಡ್ಡ ಅಪಘಾತಗಳಿಗೆ ದಾರಿಯಾಗುತ್ತದೆ. ಸಾರಿಗೆ ವ್ಯವಸ್ಥೆಯ ಕೊರತೆ ಹಾಗೂ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗದ ಕಾರಣ ವಿದ್ಯಾರ್ಥಿಗಳು ಈ ರೀತಿ
ನಿತ್ಯ ಬಸ್ ಬಾಗಿಲಿನಲ್ಲಿ ಜೋತು ಬಿದ್ದು ಕಾಲೇಜಿಗೆ ಹೋಗಬೇಕಾಗಿದೆ ಹಾಗೂ ವಿದ್ಯಾರ್ಥಿಗಳು ಅಪಾಯಕಾರಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಆಗ್ರಹಿಸಿದ್ದಾರೆ.
ಭಾಗದಿಂದ ನಿತ್ಯ ಬಾಗೇಪಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಶಿಕ್ಷಣಕ್ಕಾಗಿ ತೆರಳುವ ನೂರಾರು ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆಯ ಬಸ್ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬರುವ ಬಸ್‌ನಲ್ಲಿಯೇ ಬಾಗಿಲಿನಲ್ಲಿ ನಿಂತು ಅಪಾಯದ ಪ್ರಯಾಣಿಸುವಂತಾಗಿದೆ ಎಂದು ಹೆಸರು ಹೇಳಲು ಇಚ್ಛಿಸಿದ ವಿಧ್ಯಾರ್ಥಿನಿ.
ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ತರಗತಿಗಳಿಗೆ ನಿಗದಿತ ವೇಳೆಗೆ ತಲುಪಲು ಆಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ವಾಹನಗಳಿಗೆ ಹಣ ಕೊಟ್ಟು ಹೋಗಲು ನಮ್ಮಿಂದ ಆಗುವುದಿಲ್ಲ. ಹೀಗಾಗಿ ನಿತ್ಯವೂ ಮೊದಲಿನ ಕ್ಲಾಸ್ ತಪ್ಪಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಹಲವು ಬಾರಿ ಡಿಪೋ ಮ್ಯಾನೇಜರ್ ಗಮನಕ್ಕೂ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ..?ಕೆಜಿಎಫ್ | ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮರುಪಾವತಿಗೆ ಕ್ರಮ: ಶಾಸಕಿ ರೂಪಶಶಿಧರ್
ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಬಸ್‍ಗಳು ಜನರಿಂದ ತುಂಬಿ ತುಳುಕುತ್ತಿದ್ದು, ಶಾಲಾ ಕಾಲೇಜು ಮಕ್ಕಳು ಅನಿವಾರ್ಯವಾಗಿ ಬಸ್ ಬಾಗಿಲಿಗೆ ಜೋತು ಬಿದ್ದು ಊರಿಗೆ ಹೋಗಬೇಕಾಗಿದ್ದು, ಆಯತಪ್ಪಿ ಬಿದ್ದರೆ ವಿಧ್ಯಾರ್ಥಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಭಯದಲ್ಲಿ ಇದ್ದಾರೆ.




