ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ತಿರುಮಲಪುರ ಗ್ರಾಮದ ಗಾಳೆಮ್ಮ ಹೆಸರಿನ 47 ವರ್ಷದ ಮಹಿಳೆಯು 2025 ಸೆಪ್ಟೆಂಬರ್ 30 ರಂದು ಕಾಣೆಯಾಗಿದ್ದಾರೆ. ಅಯೋಧ್ಯೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.336/2025 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ವಿವರ: ಮಹಿಳೆಯು 5.4 ಅಡಿ ಎತ್ತರವಿದ್ದು, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಕಪ್ಪು ಮತ್ತು ಬಿಳಿ ಮಿಶ್ರಿತ ನೀಳ ತಲೆಗೂದಲಿದ್ದು, ಸಾಮಾನ್ಯವಾಗಿ ಜುಟ್ಟು ಕಟ್ಟುತ್ತಾರೆ. ಹಣೆಗೆ ಹಚ್ಚೆ ಬಟ್ಟು ಇರುತ್ತದೆ. ಕನ್ನಡ, ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಮಹಿಳೆಯ 2 ಕೈಗಳ ಮೇಲೆ ಹಚ್ಚೆಯಿದ್ದು, ಬಲಗೈಗೆ ಪಂಪಣ್ಣ ಎಂದು ಹಾಗೂ ಎಡಗೈಗೆ ಹೂವಿನ ಚಿತ್ರವಿರುವ ಹಚ್ಚೆಯಿದೆ.
ಈ ಚಹರೆಯ ಮಹಿಳೆಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು: 08539-230222, ಪೊಲೀಸ್ ಉಪಾಧೀಕ್ಷಕರು: 08533-230853, ಆರಕ್ಷಕ ನಿರೀಕ್ಷಕರು, ಗಂಗಾವತಿ ಗ್ರಾಮೀಣ ಠಾಣೆ: 08533-230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.





