ಕೊಪ್ಪಳ | ಹಣ ಸುಲಿಗೆ ಆರೋಪ : ಲಾ ಕಾಲೇಜು ಮುಂದೆ ಯುವಕನ ಉಪವಾಸ ಸತ್ಯಾಗ್ರಹ

Date:

ಕೊಪ್ಪಳದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕಾನೂನು ವಿರುದ್ಧ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳ ಬಂದಿದ್ದು, ಕಾಲೇಜಿನ ಹಳೇ ವಿದ್ಯಾರ್ಥಿ ಎಂ.ಕೆ.ಸಾಹೇಬ್ ಹಣ ಸುಲಿಗೆ ವಿರುದ್ಧ ಏಕಾಂಗಿಯಾಗಿ ಕಾಲೇಜು ಎದುರು ಉಪವಾಸ ಸತ್ಯಾಗ್ರಹ ಕೈಗೊಂಡಿರುವರು.

- Advertisement -

“ವಿದ್ಯಾರ್ಥಿಗಳು ಲಾ ಓದಲು ಮೊದಲ ವರ್ಷದ ಅಡ್ಮಿಷನ್ ಮಾಡಿಸಿ ಅರ್ಧಕ್ಕೆ ನಿಲ್ಲಿಸಿದರೆ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಅರ್ಧಕ್ಕೆ ನಿಲ್ಲಿಸಿದರೆ ದಾಖಲಾತಿಗಳನ್ನು ವಾಪಸ್ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೇ ದಾಖಲಾತಿಗಳನ್ನು ಮರಳಿ ಪಡೆಯಬೇಕೆಂದರೆ ಓದದೇ ಇದ್ದರೂ ಮೂರು ವರ್ಷದ ಫೀಸ್ ಪಾವತಿ ಮಾಡಬೇಕು. ಈಗಾಗಲೇ ಹಲವು ವಿದ್ಯಾರ್ಥಿಗಳು ಡ್ರಾಪೌಟ್ ಆಗಿದ್ದು ಮರಳಿ ದಾಖಲಾತಿಗಳನ್ನು ಕೇಳಿದಾಗ ಮೂರು ವರ್ಷದ ಫೀಸ್ ಪಾವತಿಸಲು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ರೆ ದಾಖಲಾತಿಗಳನ್ನು ಕೊಡದೇ ಕಾಲೇಜು ಸಿಬ್ಬಂದಿ ಸತಾಯಿಸಿದ್ದಾರೆ ಎನ್ನುವುದು ವಿದ್ಯಾರ್ಥಿಗಳ ಆರೋಪ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಈ ಕುರಿತು ಪ್ರತಿಕ್ರಿಯೆ ನೀಡಿರುವ ಧರಣಿನಿರತ ಎಂ.ಕೆ.ಸಾಹೇಬ್ ನಾಗೇಶನಹಳ್ಳಿ, “ನಾನು 2022ರಲ್ಲಿ ಕಾನೂಜು ಪದವಿ ಅಂದರೆ ಎಲ್ಎಲ್ ಬಿ ಓದಲು ಪ್ರವೇಶಾತಿ ಪಡೆದಿದ್ದೆ. ಮೊದಲ ಸೆಮಿಸ್ಟರ್ ಪರೀಕ್ಷೆ ಬರೆದು ಕಾರಣಾಂತರಗಳಿಂದ ಅರ್ಧಕ್ಕೆ ಓದು ನಿಲ್ಲಿಸಿದ್ದೆ‌. ಈಗ ಮುಂದುವರಿದು ಬೇರೆ ಕಾಲೇಜಿನಲ್ಲಿ ಲಾ ಓದಲು ಅಡ್ಮಿಷನ್ ಮಾಡಿಸಿದ್ದೇನೆ. ಹೀಗಾಗಿ, 2022ರಲ್ಲಿ ನೀಡಿದ್ದ ದಾಖಲಾತಿಗಳನ್ನು ವಾಪಸ್ ಕೊಡಿ ಎಂದರೆ ಕೊಡುತ್ತಿಲ್ಲ. ಮೂರು ವರ್ಷದ ಫೀಸ್ ಎಲ್ಲಾ ಪಾವತಿಸಿ, ಆಮೇಲೆ ಡಾಕ್ಯುಮೆಂಟ್ ಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ” ಎಂದು ಆರೋಪಿಸಿದರು.

“ನಾನು ಮೊದಲ ವರ್ಷದ ಒಂದು ಸೆಮಿಸ್ಟರ್ ಮುಗಿಸಿದ್ದು, ಆ ಒಂದು ವರ್ಷದ ಪೂರ್ತಿ ಶುಲ್ಕ ಪಾವತಿಸುತ್ತೇನೆ. ಮೂರು ವರ್ಷದ ಫೀಸ್ ಯಾಕೆ ಕಟ್ಟಬೇಕು” ಎಂದು ಧರಣಿ ನಿರತ ಎಂ.ಕೆ.ಸಾಹೇಬ್ ನಾಗೇಶನಹಳ್ಳಿ ಪ್ರಶ್ನಿಸಿದ್ದಾರೆ.

“2023-24ರಲ್ಲಿ ನಾನು ಕೇರಳ ರಾಜ್ಯ ಸರ್ಕಾರದ ಲಾ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಿ ಪರಿಶೀಲನೆಗೆ (verification) ಹೋಗಿದ್ದೆ. ಆ ಸಂದರ್ಭದಲ್ಲಿ ಕೂಡ ಅಂಕಪಟ್ಟಿಗಳನ್ನು ಕೊಡದೆ ಹೋಗಿದ್ದಕ್ಕೆ ಅಡ್ಮಿಷನ್ ಸಿಗಲಿಲ್ಲ. ಈಗ ಮತ್ತೆ ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಟ್ರೆನ್ಸ್ ಮತ್ತು ಮೌಖಿಕ ಸಂದರ್ಶನ ಪಾಸ್ ಮಾಡಿಕೊಂಡು ಎಲ್ಎಲ್ ಬಿಗೆ ಅಡ್ಮಿಷನ್ ಮಾಡಿಸಿದ್ದೇನೆ. ಇವಾಗ ಅಲ್ಲಿ ನನ್ನ ಮೂಲ ಅಂಕಪಟ್ಟಿಗಳನ್ನು ಕೊಡಬೇಕು. ಆದರೆ ಇವರು ಮೂರು ವರ್ಷದ ಫೀಸ್ ಕಟ್ಟಲು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ, ಏಕಾಂಗಿಯಾಗಿ ಕಾಲೇಜು ಮುಂದೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇನೆ. ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಜಾಗ ಬಿಟ್ಟು ಕದಲಲ್ಲ” ಎಂದು ಪಟ್ಟು ಹಿಡಿದಿದ್ದಾರೆ.

“ಕಾಲೇಜಿನ ಪ್ರಾಂಶುಪಾಲರು ಉಷಾದೇವಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ” ಎಂದು ಯುವಕ‌ ಎಂ.ಕೆ.ಸಾಹೇಬ್ ನಾಗೇಶನಹಳ್ಳಿ ಆರೋಪಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ವಸತಿ ನಿಲಯದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಆಳಂದ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ...

ಕಲಬುರಗಿ | ತಾಂತ್ರಿಕ ದೋಷಕ್ಕೆ ತುರ್ತು ಲ್ಯಾಂಡಿಂಗ್; ತೊಗರಿ ಜಮೀನಿನಲ್ಲಿ ಲಘು ವಿಮಾನದ ತುರ್ತು ಭೂಸ್ಪರ್ಶ

ಹಾರಾಟದ ವೇಳೆ ದಿಢೀರ್‌ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಲಘು...

ರಾಯಚೂರು | ಸರ್ಕಾರಿ ಶಾಲೆಗಳ ವಿವಿಧ ಬೇಡಿಕೆ ಈಡೇರಿಕೆಗೆ ನ.26ರಿಂದ ಅಹೋರಾತ್ರಿ ಧರಣಿ

ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ಪೂರ್ಣ...

ರಾಯಚೂರು | ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆ ರಥಕ್ಕೆ ದೇವದುರ್ಗದಲ್ಲಿ ಅದ್ಧೂರಿ ಸ್ವಾಗತ

ಸಂವಿಧಾನ ಆಧಾರಿತ ಪ್ರಬುದ್ಧ ಭಾರತ ನಿರ್ಮಾಣ ಹಾಗೂ ಬೌದ್ಧ ಧಮ್ಮದ ಮಾನವೀಯ...