ಕೊಪ್ಪಳ | ದೂರು ಹೇಳಲು ಬಂದ ದಲಿತ ಯುವಕನ ಮೇಲೆ ಪಿಎಸ್ಐ ಹಲ್ಲೆ ಆರೋಪ; ಠಾಣೆ ಎದುರು ಪ್ರತಿಭಟನೆ

Date:

ಸಂಬಂಧಿಕರ ವಿಷಯವಾಗಿ ಪೋಲೀಸ್ ಠಾಣೆಗೆ ದೂರು ನೀಡಲು ಬಂದ ದಲಿತ ಯುವಕನ ಮೇಲೆಯೇ ಕೊಪ್ಪಳ ಜಿಲ್ಲೆಯ ಕುಕನೂರು ಠಾಣೆ ಪೊಲೀಸ್ ಉಪನಿರೀಕ್ಷಕ (ಪಿಎಸ್ಐ) ಗುರುರಾಜ್ ಅವರು ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಪೊಲೀಸ್ ಠಾಣೆಯ ಎದುರು ದಲಿತ ಸಮುದಾಯದವರು ದಿಡೀರ್ ಪ್ರತಿಭಟನೆಗಿಳಿದ ಘಟನೆ ನಡೆದಿದೆ.

- Advertisement -

ಕೊಪ್ಪಳ ತಾಲೂಕಿನ ಯಲಿಮಗೆರೆ ಗ್ರಾಮದ ಗಾಳೇಪ್ಪ ಹಿರೇಮನಿ ಎಂಬುವವರು ಕುಕನೂರು ಠಾಣೆಯಲ್ಲಿ ತಮ್ಮ ಸಂಬಂಧಿಕರಿಂದ ತಮಗಾದ ಅನ್ಯಾಯ ಹಾಗೂ ಸಮಸ್ಯೆಯ ಕುರಿತು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದು, ಇದಕ್ಕೆ ಪ್ರತಿಯಾಗಿ ಕುಕುನೂರು ಸಬ್‌ಇನ್ಸ್‌ಪೆಕ್ಟರ್ ಗುರುರಾಜ್‌ರವರು ಕುತ್ತಿಗೆ ಪಟ್ಟಿ‌ಹಿಡಿದು ‘ಜಾತಿ ನಿಂದನೆ’ ಮಾಡಿ ಅವಾಚ್ಯ ಶಬ್ಧಗಳಿಂದ‌ ಬೈದು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...
WhatsApp Image 2025 10 14 at 11.24.53 PM

‘ನೀವು ದಲಿತರು ಐದುನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತಿರಿ, ನಿಮ್ಮಿಂದ ನಾನು ಕೆಲಸ ಕಲಿಯುವ ಜರೂರು ಇಲ್ಲ ಎಂದು ಅವಾಚ್ಯ ಶಬ್ಧದಿಂದ‌‌ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮೇಲೆ‌ ಹಲ್ಲೆ ಮಾಡಿರುವುದಕ್ಕೆ ಠಾಣೆಯ ಸಿಸಿಟಿವಿಯಲ್ಲಿ‌ ಸಾಕ್ಷಿ ಇದೆ ಅದನ್ನು ನೋಡಬಹುದು’ ಎಂದು ಹಲ್ಲೆಗೊಳಗಾದ ಗಾಳೆಪ್ಪ ತಿಳಿಸಿದ್ದಾರೆ.

ಸಂತ್ರಸ್ತ ಯುವಕ ಹಾಗೂ ದಲಿತ ಸಮುದಾಯದವರು ಪಿಎಸ್ಐ ಗುರುರಾಜ್ ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕುಕನೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

WhatsApp Image 2025 10 14 at 11.24.52 PM

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ: ಗಣತಿದಾರರ ವಿರೋಧ

ಸ್ಥಳಕ್ಕೆ ಸಿಪಿಐ ಮೌನೇಶ್ ಬಡಿಗೇರ ಅವರು ಭೇಟಿ ಕೊಟ್ಟು ವಿಷಾದ ವ್ಯಕ್ತಪಡಿಸಿ ಪ್ರತಿಭಟನಾಕಾರರನ್ನು ಒಲೈಸಲು ಪ್ರಯತ್ನಿಸಿದರೂ, ಪಟ್ಟು ಬಿಡದೇ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಹಾಗೂ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...